Advertisement

ದಸರಾ ಬೊಂಬೆಗಳಿಗೆ ಆಧುನಿಕ ಸ್ಪರ್ಶ

06:20 PM Oct 01, 2019 | Team Udayavani |

ಮಾಗಡಿ: ವಿಶಿಷ್ಟ ಸಂಪ್ರದಾಯ ರೂಢಿಸಿಕೊಂಡು ಬಂದಿರುವ ಮಾಗಡಿ ಸಾಂಸ್ಕೃತಿಕ ರಾಯಭಾರಿಯ ಮಹತ್ವ ಪಡೆದುಕೊಂಡಿದೆ. ಮನೆಯಲ್ಲಿ ದಸರಾ ಹಬ್ಬದ ಸಮಯದಲ್ಲಿ ಮಣ್ಣು, ಮರದಿಂದ ತಯಾರಿಸಿದ ಬೊಂಬೆಗಳನ್ನು ಕೂರಿಸಲಾಗುತ್ತದೆ. ಆಧುನಿಕತೆ ಬೆಳೆದಂತೆ ಹೊಸ ಸ್ಪರ್ಶ ಪಡೆದಿರುವ ಬೊಂಬೆಗಳು ಕಾಣುತ್ತಿದ್ದೇವೆ.

Advertisement

ಪ್ರಮುಖವಾಗಿ ದುರ್ಗಾ ದೇವಿಯ ಒಂಭತ್ತು ಅವತಾರಗಳ ಬೊಂಬೆಗಳನ್ನು ಕೆಲವು ಮನೆಗಳಲ್ಲಿ ಕೂರಿಸಲಾಗುವುದು. ಅಲ್ಲದೇ ಮರದ ಪಟ್ಟದ ಬೊಂಬೆಗಳನ್ನು ರಾಜ, ರಾಣಿ, ಗಂಡ, ಹೆಂಡತಿ, ಮಕ್ಕಳು ಇರುವ ಕುಟುಂಬದ ಬೊಂಬೆಗಳನ್ನು, ದಶಾವತಾರ, ಗಿರಿಜಾ ಕಲ್ಯಾಣ, ರಾಧಾಕೃಷ್ಣ, ಗಣೇಶ, ಸುಬ್ರಹ್ಮಣ್ಯ, ಗಾಂಧೀಜಿ, ಸುಭಾಷ್‌ ಚಂದ್ರ ಬೋಸ್‌ರಂತಹ ರಾಷ್ಟ್ರ ನಾಯಕರ ಬೊಂಬೆಗಳನ್ನು, ಇನ್ನು ಹಲವು ಮನೆಗಳಲ್ಲಿ ಯೋಧರು, ಪ್ರಾಣಿ ಪಕ್ಷಿಗಳ ಬೊಂಬೆಗಳನ್ನು ಕೂರಿಸಲಾಗುತ್ತಿದೆ. ಬೊಂಬೆಗಳನ್ನು ಕೂರಿಸಲು 5 ಅಥವಾ 7 ಹಂತಗಳ ಮರದ ಮೆಟ್ಟಿಲು ತಯಾರಿಸಿ, ಅದರ ಮೇಲೆ ಹಂತ ಹಂತವಾಗಿ ಬೊಂಬೆಗಳನ್ನು ಕೂರಿಸಲಾಗುತ್ತದೆ. ಮೊದಲ ಹಂತದಲ್ಲಿ ಹೆಣ್ಣು ಮಕ್ಕಳಿಗೆ ತವರಿನಿಂದ ಬಳುವಳಿಯಾಗಿ ಬಂದಿರುವ ಬೊಂಬೆಗಳನ್ನು ಕೂರಿಸಿ, ಆ ನಂತರದ ಹಂತಗಳಲ್ಲಿ ಇತರೆ ಗೊಂಬೆಗಳನ್ನು ಕೂರಿಸಲಾಗುತ್ತದೆ.

ಮನೆಗಳಲ್ಲಿ ಕೂರಿಸುವ ಬೊಂಬೆಗಳಿಂದ ನಮ್ಮ ಮಕ್ಕಳಿಗೆ ಪುರಾಣ, ಇತಿಹಾಸದ ಕಥೆಗಳನ್ನು ಹೇಳಲು ಸಹಕಾರಿಯಾಗಿವೆ. ಎಷ್ಟೋ ನೀತಿ ಕಥೆಗಳನ್ನು ಈ ಹಬ್ಬದ ಮೂಲಕ ನಮ್ಮ ಪುಟಾಣಿ ಮಕ್ಕಳಿಗೆ ಪರಿಚಯಿಸಬಹುದಾಗಿದೆ.-ಸೀತಾರಾಂ, ಪುರಸಭೆ ಮಾಜಿ ಅಧ್ಯಕ್ಷ, ಮಾಗಡಿ

 

ತಿರುಮಲೆ ಶ್ರೀನಿವಾಸ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next