Advertisement

ಆಧುನಿಕ ತಂತ್ರಜ್ಞಾನ ದುರ್ಬಳಕೆ: ಡಾ|ಕೆ.ಎಚ್‌.ಶಿವಪ್ರಸಾದ್‌

09:51 AM Mar 07, 2019 | Team Udayavani |

ಹೊಸಪೇಟೆ: ಆಧುನಿಕ ತಂತ್ರಜ್ಞಾನದ ಬಳಕೆ ಉಪಯೋಗಕ್ಕಿಂತ ದುರುಪಯೋಗಗಳು ಹೆಚ್ಚಾಗುತ್ತಿವೆ ಎಂದು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ಕೆ.ಎಚ್‌.ಶಿವಪ್ರಸಾದ್‌ ಬೇಸರ ವ್ಯಕ್ತಪಡಿಸಿದರು.

Advertisement

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಿನೇ ದಿನೇ ವಿಜ್ಞಾನ ಬೆಳೆಯುತ್ತಿದೆ, ಮಾನವನ ಕುತೂಹಲವೂ ಹೆಚ್ಚುತ್ತಿದೆ. ಸಂಶೋಧನೆಗಳನ್ನು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಬಳಸಿಕೊಳ್ಳಬೇಕು. ಆದರೆ ಮಾನವ ಕುಲದ ವಿನಾಶದ ಸಾಧನವಾಗಿ ಬಳಸಬಾರದು. ವಿಜ್ಞಾನವನ್ನು ಸಮರ್ಪಕವಾದ ರೀತಿಯಲ್ಲಿ ಕಲಿಸುವ ವಿಧಾನವನ್ನು ಅಧ್ಯಾಪಕರು ರೂಢಿಸಿಕೊಳ್ಳಬೇಕಿದೆ. ಇದರ ನಡುವೆ ಇತ್ತೀ ಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಉತ್ತಮವಾಗಿ ಬಳಿಕೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಪ್ರಾಂಶುಪಾಲ ಡಾ| ಬಿ.ಜಿ.ಕನಕೇಶಮೂರ್ತಿ ಮಾತನಾಡಿ, ಯಾವುದೇ ಜ್ಞಾನಶಿಸ್ತಿನ ಕಲೆಕೆಗೆ ಕುತೂಹಲ, ಶ್ರದ್ಧೆ ಮತ್ತು ಪ್ರಾಮಾಣಿಕತೆಗಳು ಅವಶ್ಯ, ವೈಜ್ಞಾನಿಕ ಮನೋಭಾವ ವೈಚಾರಿಕ ದೃಷ್ಟಿಕೋನ ಇಂದಿನ ತುರ್ತಾಗಿದೆ ಎಂದರು. ನಿಸರ್ಗದ ಭಾಷೆ ಗಣಿತ ಎಂಬ ವಿಷಯ ಕುರಿತು ನಗರದ ವಿಜಯನಗರ ಕಾಲೇಜಿನ ಪ್ರಾಂಶುಪಾಲ ಡಾ| ವಿ.ಎಸ್‌.ಪ್ರಭಯ್ಯ, ಬಳ್ಳಾರಿಯ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಡಾ| ಹಾಲ್ಕರ್‌ ರಾಚಪ್ಪ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಯಲ್ಲಿ ಕಂಪ್ಯೂಟರ್‌ ಯಂತ್ರ ಬಳಕೆ ಕುರಿತು ಉಪನ್ಯಾಸ ನೀಡಿದರು. ಕೊಪ್ಪಳದ ಸರ್ಕಾರಿ
ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಟಿ.ಎಚ್‌.ಎಂ. ದಾರುಕಾಸ್ವಾಮಿ ಖಗೋಳಯಾನ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಿದರು. ಮೇಘನಾ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಚಾಲಕ ಬಿ.ನಾಗಾರ್ಜುನ ಸ್ವಾಗತಿಸಿದರು.

ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆ: ಕಲಬುರ್ಗಿ ವಿಭಾಗ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ವಿಜಯನಗರ ಕಾಲೇಜು (ಪ್ರಥಮ), ಹೂವಿನ ಹಡಗಲಿಯ ಜಿ.ಬಿ.ಆರ್‌.ಕಾಲೇಜು, (ದ್ವಿತೀಯ), ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, (ತೃತೀಯ) ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

Advertisement

 ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಂಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಪ್ರಥಮ), ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು (ದ್ವಿತೀಯ) ಸ್ಥಾನ  ಪಡೆದರು.

ವಿಜ್ಞಾನ ಲೇಖನ ಸ್ಪರ್ಧೆ: ವಿಜ್ಞಾನ ಲೇಖನ ಸ್ಪರ್ಧೆಯಲ್ಲಿ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಮೂರು ಬಹುಮಾನ ಹಾಗೂ ಜಿ.ಬಿ.ಆರ್‌.ಕಾಲೇಜಿನ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಪಡೆದರು. ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ
ನಗದು ಸೇರಿದಂತೆ ಪ್ರಮಾಣ ಪತ್ರ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next