ಹೈದರಾಬಾದ್: ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ, ಸೋಲಿಲ್ಲದ ಸರದಾರ ಎಸ್ ಎಸ್ ರಾಜಮೌಳಿ ಅವರ ಸಿನಿಮಾಗಳನ್ನು ಮೆಚ್ಚದವರು ಕಡಿಮೆ. ʼಸ್ಟೊಡೆಂಟ್ ನಂ 1ʼ ನಿಂದ ಆಸ್ಕರ್ ಗೆದ್ದ ʼಆರ್ ಆರ್ ಆರ್ʼವರೆಗೂ ರಾಜಮೌಳಿ ಸಿನಿಮಾ ಜಗತ್ತಿನಲ್ಲಿ ಮಾಡಿರುವ ಸಾಧನೆ ಒಂದೆರೆಡಲ್ಲ.
ಕಳೆದ 2 ದಶಕಗಳಿಂದ ರಾಜಮೌಳಿ ಅವರು ಚಿತ್ರರಂಗದಲ್ಲಿ ಸೋಲೆ ಕಾಣದ ಸರದಾರನಾಗಿ ನೆಲೆಕಂಡಿದ್ದಾರೆ. ಅವರ ಫಿಲ್ಮ್ ಮೇಕಿಂಗ್ ನ್ನು ಹಾಲಿವುಡ್ ನ ಖ್ಯಾತ ನಿರ್ದೇಶಕರು ಕೂಡ ಮೆಚ್ಚಿಕೊಂಡಿದ್ದಾರೆ.
ಇಂತಹ ದಿಗ್ಗಜ ನಿರ್ದೇಶಕನ ಪಯಣವನ್ನು ನೆಟ್ ಫ್ಲಿಕ್ಸ್ ಓಟಿಟಿಗೆ ತರಲಿದೆ. ಈಗಾಗಲೇ ಹಲವು ಸಾಕ್ಷ್ಯಚಿತ್ರಗಳನ್ನು ಮಾಡಿರುವ ನೆಟ್ ಫ್ಲಿಕ್ಸ್ ರಾಜಮೌಳಿ ಅವರ ವೃತ್ತಿ ಬದುಕಿನ ಸಾಧನೆಯ ಕಥೆಯನ್ನು ಡಾಕ್ಯುಮೆಂಟರಿಯಾಗಿ ತರಲಿದೆ.
‘ಸ್ಟೊಡೆಂಟ್ ನಂ 1ʼ, ʼಸಿಂಹಾದ್ರಿʼ, ʼಛತ್ರಪತಿʼ, ‘, ‘ಯಮದೊಂಗ’, ಮಗಧೀರ ‘ವಿಕ್ರಮಾರ್ಕುಡು’, ‘ಈಗ’ ʼಬಾಹುಬಲಿʼ, ಆರ್ ಆರ್ ಆರ್ʼ ನಂತಹ ಬಿಗ್ ಹಿಟ್ ಹಾಗೂ ಕೋಟಿ ಕೋಟಿ ತಂದುಕೊಟ್ಟ ಸಿನಿಮಾಗಳನ್ನು ಮಾಡಿರುವ ರಾಜಮೌಳಿ ಭಾರತೀಯ ಸಿನಿರಂಗದ ದಿಗ್ಗಜ ನಿರ್ದೇಶಕರಲ್ಲಿ ಒಬ್ಬರು.
ಆರಂಭದಲ್ಲಿ ಬರಹಗಾರರಾಗಿ, ಒಂದಷ್ಟು ಕಿರುತೆರೆ ಧಾರವಾಹಿಗಳಲ್ಲಿ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ರಾಜಮೌಳಿ ಇಂದು ಪ್ಯಾನ್ ಇಂಡಿಯಾವೇ ಮೆಚ್ಚುವ ನಿರ್ದೇಶಕರಾಗಿದ್ದಾರೆ.
ʼಆರ್ ಆರ್ ಆರ್ʼ ನೋಡಿ ಹಾಲಿವುಡ್ ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರು ದಂಗಾಗಿದ್ದರು.
ಸಿನಿಮಾ ಜಗತ್ತಿನ ರಾಜಮೌಳಿ ಅವರ ಕಥೆಯನ್ನು ನೆಟ್ ಫ್ಲಿಕ್ಸ್ ಡಾಕ್ಯುಮೆಂಟರ್ ಆಗಿ ಓಟಿಟಿಗೆ ತರಲಿದೆ. ಇದಕ್ಕೆ ‘ಮಾರ್ಡನ್ ಮಾಸ್ಟರ್ಸ್ʼ ಎಂದು ಹೆಸರಿಡಲಾಗಿದೆ. ಆಗಸ್ಟ್ 2 ರಂದು ಈ ಡಾಕ್ಯಮೆಂಟರಿ ಸ್ಟ್ರೀಮಿಂಗ್ ಆಗಲಿದೆ.
ಇದರಲ್ಲಿ ನಿರ್ದೇಶಕ ಜೇಮ್ಸ್ ಕ್ಯಾಮರೂನ್, ಜೋ ರುಸ್ಸೋ, ಪ್ರಭಾಸ್, ರಾಣಾ, ಜೂನಿಯರ್ ಎನ್‌ಟಿಆರ್ ಅವರು ರಾಜಮೌಳಿ ಅವರ ಬಗ್ಗೆ ಮಾತನಾಡಲಿದ್ದಾರೆ.
ಸದ್ಯ ರಾಜಮೌಳಿ ಮಹೇಶ್ ಬಾಬು ಅವರೊಂದಿಗೆ ಸಿನಿಮಾವನ್ನು ಮಾಡುತ್ತಿದ್ದಾರೆ.