Advertisement
“ಶಿನ್ನಪ್ ಮಾಲ್ ಮಾಮ್’ ಎಂದೇ ಖ್ಯಾತರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸಂಪ್ರದಾಯಸ್ಥ ಕುಟುಂಬ ವಾದ ಉಳ್ಳಾಲ ಮಲ್ಯ ಮನೆತನಕ್ಕೆ ಸೇರಿದ ಮಂಜುನಾಥ ಮಲ್ಯ ಮತ್ತು ಸರಸ್ವತಿ ಅಲಿಯಾಸ್ ರುಕಾ¾ಬಾೃ ದಂಪತಿಯ ಸುಪುತ್ರನಾಗಿ 1902ರ ನವೆಂಬರ್ 21ರಂದು ಜನಿಸಿದರು. ಇವರ ತಂದೆಯವರಿಗೆ ಮಂಗಳೂರಿನ ಬಂದರಿನಲ್ಲಿ ಕೌಟುಂಬಿಕ ಭಂಡಸಾಲೆ ಯಲ್ಲಿ ವ್ಯಾಪಾರ ವೃತ್ತಿ. ಶ್ರೀನಿವಾಸ ಮಲ್ಯರು ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಅಲೋಶಿಯಸ್‌ನಲ್ಲಿ, ಹೆೃಸ್ಕೂಲ್ ಶಿಕ್ಷಣವನ್ನು ಕೆನರಾ ಶಾಲೆಯಲ್ಲಿ ಪಡೆ ದರು. ಅನಂತರ ಸರಕಾರಿ ಕಾಲೇಜಲ್ಲಿ ಇಂಟರ್ ಮೀಡಿಯಟ್ ಶಿಕ್ಷಣ ಪಡೆ ದರು. ಹದಿ ಹರೆಯದಲ್ಲೇ ಇವರಲ್ಲಿ ನಾಯಕತ್ವದ ಗುಣಗಳು, ಹೋರಾಟದ ಕೆಚ್ಚೆದೆಯ ಲಕ್ಷಣಗಳು ಪ್ರತಿಫಲಿಸುತ್ತಿತ್ತು. ಈ ವೇಳೆ ಸ್ವಾತಂತ್ರ್ಯ ಸಂಗ್ರಾಮದ ಕಾವು ಜೋರಾಗಿದ್ದ ಕಾರಣ ಶಿಕ್ಷಣಕ್ಕೆ ಪೂರ್ಣ ವಿರಾಮ ಹಾಕಿ, ಕೌಟುಂಬಿಕ ವ್ಯವಹಾರ ತ್ಯಜಿಸಿ, 18ನೇ ವಯಸ್ಸಿನಲ್ಲೇ ದೇಶ ಸೇವೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು. ಈ ಮುಖೇನ ದೇಶ- ಜನ ಸೇವೆಗೆ ತಮ್ಮ ಬದುಕನ್ನು ಮುಡಿ ಪಾಗಿಟ್ಟು ಅದ್ವಿತೀಯ ರಾಷ್ಟ್ರಭಕ್ತರೆನಿಸಿ ಕೊಂಡರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಲವು ಬಾರಿ ಸೆರೆಮನೆವಾಸವನ್ನೂ ಅನುಭವಿಸಿದರು.
Related Articles
Advertisement
ಕೊಡುಗೆ-ಸಾಧನೆಗಳು: ನಾಲ್ಕು ದಶಕ ಗಳ ಸಾರ್ವಜನಿಕ ರಂಗದಲ್ಲಿ ಇವರ ಕೊಡುಗೆ- ಸಾಧನೆಗಳು ಹಲವಾರು. ಇವರು ಕರಾವಳಿ ಜಿಲ್ಲೆಗಳಿಗೆ ನೀಡಿದ ಕೆಲವು ಮಹತ್ತರ ಕೊಡುಗೆಗಳನ್ನು ಬೆಟ್ಟು ಮಾಡುವುದಾದರೆ ನವಮಂಗಳೂರು ಬಂದರು, ಬಜಪೆ ವಿಮಾನ ನಿಲ್ದಾಣ, ಇಂದಿನ ಸುರತ್ಕಲ್ ಎನ್‌ಐಟಿಕೆ, ಮಂಗ ಳೂರು-ಬೆಂಗಳೂರು ರೈಲು ಮಾರ್ಗ, ಉಳ್ಳಾಲ ಸೇತುವೆ, ಮಂಗಳೂರಿನ ಸರ್ಕಿಟ್ ಹೌಸ್ ಮತ್ತು ಪುರಭವನ, ಮಂಗಳೂರು ಆಕಾಶವಾಣಿ, ಮಂಗ ಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮುಂಬಯಿ-ಕೊಚ್ಚಿ ರಾಷ್ಟ್ರೀ ಯ ಹೆದ್ದಾರಿ, ಕರಾವಳಿ ಜಿಲ್ಲೆಗಳಲ್ಲಿ ಹರಿ ಯುವ ಅನೇಕ ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಗಳು… ಹೀಗೆ ಇವರು ಅವಿಭಜಿತ ಜಿಲ್ಲೆಯ ಓರ್ವ “ಅಭಿವೃದ್ಧಿಯ ಶಿಲ್ಪಿ’ಯಾಗಿ ಮೂಡಿ ಬಂದರು. ಈ ಎಲ್ಲ ಕಾಮಗಾರಿಗಳಿಗೆ ವಿವಿಧ ಕಾರಣಗಳಿಂದ ಅಡ್ಡಿ- ಆತಂಕ ಎದುರಾದಾಗ ಮಲ್ಯರು ಚಾಣಾ ಕ್ಷತನದಿಂದ, ಸಾತ್ವಿಕ ಹಠ ಸ್ವಭಾವದಿಂದ ಯೋಜನೆಗಳ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಗ್ಗೆ ಅನೇಕ ಹಿರಿಯರು ವ್ಯಕ್ತಪಡಿಸುವ ಅಭಿ ಪ್ರಾಯ, ಶ್ಲಾಘನೆಗಳು ಇವರ ಸಮಗ್ರ ವ್ಯಕ್ತಿತ್ವಕ್ಕೆ ಕಳಶಪ್ರಾಯವಾದವುಗಳು. ಸ್ವಾರ್ಥ, ಹಮ್ಮು- ಬಿಮ್ಮುಗಳಿಲ್ಲದೆ ದೇ ಶದ ಅಭಿವೃದ್ಧಿ ಪರ ಚಿಂತನೆಯನ್ನಷ್ಟೇ ತನ್ನ ಜನಸೇವೆಯ ಗುರಿ ಮತ್ತು ಉದ್ದೇಶ ವನ್ನಾಗಿರಿಸಿಕೊಂಡಿದ್ದರಿಂದಲೇ ಶ್ರೀನಿ ವಾಸ ಮಲ್ಯರಿಗೆ ಈ ಮಹೋನ್ನತ ಸಾಧ ನೆಗಳನ್ನು ಮಾಡಲು ಸಾಧ್ಯವಾಯಿತು. ಇಂತಹ ಅಸಾಮಾನ್ಯ ಚಾರಿತ್ರ್ಯ ವನ್ನು ಹೊಂದಿದ್ದ ಮಲ್ಯರು 1965ರ ಡಿಸೆಂ ಬರ್ 19ರಂದು ಇಹಲೋಕ ತ್ಯಜಿಸಿ ದರು. ಉಳ್ಳಾಲ ಶ್ರೀನಿವಾಸ ಮಲ್ಯ ಅವ ರು ಕೇವಲ ರಾಜಕೀಯ ನಾಯಕರಿಗೆ ಮಾತ್ರವಲ್ಲದೆ ನಮ್ಮೆಲ್ಲರಿಗೂ ಅನುನಿತ್ಯ ಸ್ಮರಣೀಯರೂ ಹೌದು, ಸಾರ್ವಕಾಲಿಕ ಅನುಸರಣೀಯ ವ್ಯಕ್ತಿತ್ವದ ಜನ ನಾಯಕರೂ ಹೌದು.