Advertisement

ಆಧುನಿಕ ಬೆಂಗಳೂರಿಗೆ ವಿಶ್ವದಲ್ಲಿ ಪ್ರಾಮುಖ್ಯತೆ

07:39 PM Jun 28, 2021 | Team Udayavani |

ಕನಕಪುರ: ಕೆಂಪೇಗೌಡ ನಿರ್ಮಾಣಮಾಡಿರುವ ಬೆಂಗಳೂರು ದೇಶದ ಐದುಮಹಾನಗರಗಳಲ್ಲಿ ಒಂದುಎಂಬಹೆಗ್ಗಳಿಕೆಗೆಪಾತ್ರವಾಗಿದೆ ಎಂದು ಉಪನ್ಯಾಸಕ ಪಾರ್ಥಸಾರಥಿ ತಿಳಿಸಿದರು.

Advertisement

ನಗರದ ಕರ್ನಾಟಕ ರಕ್ಷಣಾ ವೇದಿಕೆಕಚೇರಿಯಲ್ಲಿ ನಡೆದ ಕೆಂಪೇಗೌಡಜಯಂತಿಯಲ್ಲಿ ಮಾತನಾಡಿ, ಮೊದಲುಬೆಂಗಳೂರು ಎಂಬ ಹೆಸರು ಇದ್ದರೂಪ್ರಚಲಿತವಾಗಿರಲಿಲ್ಲ. ಆದರೆ, ಸುಮಾರು450 ವರ್ಷಗಳ ಹಿಂದೆ ಕೆಂಪೇಗೌಡರುವಿಶೇಷ ಆಸಕ್ತಿ ವಹಿಸಿ ನಿರ್ಮಿಸಿದ ಆಧುನಿಕಬೆಂಗಳೂರು ವಿಶ್ವದಲ್ಲಿ ಪ್ರಾಮುಖ್ಯತೆಪಡೆದುಕೊಂಡಿದೆ. ಇದು ಕನ್ನಡಿಗರಿಗೆಹೆಮ್ಮೆಯ ವಿಚಾರ ಎಂದರು.

ಜನರ ಅನುಕೂಲಕ್ಕೆ ವಾತಾವರಣ ನಿರ್ಮಾಣ: ಕೆಂಪೇಗೌಡ ಬೆಂಗಳೂರನ್ನುಮಹಾನಗರವನ್ನಾಗಿ ಅಭಿವೃದ್ಧಿ ಮಾಡುವದೂರದೃಷ್ಟಿ ಇಟ್ಟುಕೊಂಡು ಎಲ್ಲಾ  ಜಾತಿ, ಧರ್ಮ, ಜನಾಂಗದವರು ಕೃಷಿ, ವಾಣಿಜ್ಯಚಟುವಟಿಕೆ ನಡೆಸಲು ಅನುಕೂಲಕರವಾತಾವರಣ ನಿರ್ಮಾಣ ಮಾಡಿದರು.ಬೆಂಗಳೂರು ಸುತ್ತಮುತ್ತಲು ಕೆರೆಗಳನ್ನುನಿರ್ಮಾಣ ಮಾಡಿ, ಜೀವಜಲ ಮೂಲರಕ್ಷಣೆಗೆ ಅಂದೇ ಅಡಿಪಾಯ ಹಾಕಿದಕೀರ್ತಿ ಕೆಂಪೇಗೌಡರಿಗೆ ಸಲ್ಲಬೇಕು ಎಂದು ಹೇಳಿದರು.

ಅಭಿವೃದ್ಧಿಯ ದೂರದೃಷ್ಟಿ: ಕರ್ನಾಟಕರಕ್ಷಣಾ ವೇದಿಕೆ ಜಿÇÉಾಧ್ಯಕ್ಷ ಕಬ್ಟಾಳೇಗೌಡಮಾತನಾಡಿ, ಬೆಂಗಳೂರು ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡು ಅಂತಾರಾಷ್ಟ್ರೀಯಮಟ್ಟದಲ್ಲಿ ಬೆಳೆದು ನಿಂತಿದೆ. ಇದಕ್ಕೆ ಕೆಂಪೇಗೌಡ ದೂರದೃಷ್ಟಿ ಚಿಂತನೆಯೇ ಕಾರಣ.ಬೆಂಗಳೂರಿನ ಅಭಿವೃದ್ಧಿಗಾಗಿ ನಿರ್ಮಿಸಿದ್ದಜನವಸತಿ ಹಾಗೂ ವಾಣಿಜ್ಯ ಸ್ಥಳಗಳಾದ ಅರಳೇಪೇಟೆ, ಅಕ್ಕಿಪೇಟೆ, ಬಳೇಪೇಟೆ,ತಿಗಳರಪೇಟೆ, ಕುರುಬರ ಪೇಟೆ ಹಾಗೂಇನ್ನೂ ಮುಂತಾದ ಹೆಸರಿನ ಸ್ಥಳಗಳುಇಂದಿಗೂ ಪ್ರಚಲಿತವಾಗಿವೆ ಎಂದರು.ನಗರ ಸಭಾ ಸದಸ್ಯ ಸ್ಟುಡಿಯೋ ಚಂದ್ರು,ಕರ್ನಾಟಕ ರಕ್ಷಣಾ ವೇದಿಕೆ ಜಿÇÉಾಉಪಾಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷಜಯರಾಮೇಗೌಡ, ಉಪಾಧ್ಯಕ್ಷ ರವಿ,ರಾಜ್ಯ ಒಕ್ಕಲಿಗ ಒಕ್ಕೂಟದ ಕಾರ್ಯದರ್ಶಿಕಾಡೇಗೌಡ, ಪರಮೇಶ್‌, ನವೀನ್‌,ಶಿವರಾಜು, ಮನು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next