Advertisement

“ತುಳುನಾಡಿನ ಸಂಸ್ಕೃತಿ ಜಗತ್ತಿಗೆ ಮಾದರಿ’

10:08 PM May 05, 2019 | Team Udayavani |

ಮಹಾನಗರ: ತುಳುನಾಡಿನ ಬನ ಸಂಸ್ಕೃತಿಯು ಜಗತ್ತಿಗೆ ಮಾದರಿ. ಇವತ್ತಿಗೂ ತುಳುನಾಡಿನ ಸಂಸ್ಕೃತಿಯಲ್ಲಿ ಬನಗಳು ಅಚ್ಚಳಿಯದೆ ಉಳಿದಿವೆ. ಆದರೆ ಧಾರ್ಮಿಕತೆಯ ಹೆಸರಿನಲ್ಲಿ ಇದ್ದ ಬನಗಳನ್ನು ಕಡಿದು ಕಾಂಕ್ರೀಟ್‌ ಸ್ಮಾರಕಗಳಾಗಿ ಮಾಡುವುದು ಖೇದಕರ ಎಂದು ಪಿಲಿಕುಳ ನಿಸರ್ಗಧಾಮ ಸಸ್ಯಕಾಶಿಯ ಮೇಲ್ವಿಚಾರಕ ಉದಯಕುಮಾರ್‌ ಶೆಟ್ಟಿ ಹೇಳಿದರು.

Advertisement

ಬಂಟರ ಯಾನೆ ನಾಡವರ ಸಂಘ ಮಹಿಳಾ ವಿಭಾಗ ಮತ್ತು ತುಳು ವರ್ಲ್ಡ್ ಕುಡ್ಲ ಇವುಗಳ ಸಹಯೋಗದಲ್ಲಿ ನಗರದ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ನಡೆದ ಪಗ್ಗು 18 ಸಿರಿ ದಿನಾಚರಣೆ ಮತ್ತು ಬಲೆ ಸಿರಿಭೂಮಿ ಬುಳೆಪಾಗ ಕಾರ್ಯಕ್ರ ಮವನ್ನು ಉದ್ಘಾಟಿಸಿ ಮಾತನಾಡಿದರು.

ಕೇಪುಳ ಹೂವನ್ನು ನಿರಂತರವಾಗಿ ದೇವರಿಗೆ ಅರ್ಪಿಸುವುದರಿಂದ ಮತ್ತು ಅದನ್ನು ಉಪಯೋಗಿಸುವುದರಿಂದ ಮನುಷ್ಯನಲ್ಲಿ ಅದ್ಭುತವಾದಂತಹ ತಪೋಶಕ್ತಿಯು ಉಂಟಾಗುತ್ತದೆ. ಇಂತಹ ಹಲವು ಗಿಡಮೂಲಿಕೆಗಳನ್ನು ಕಡೆಗಣಿಸಿ ಆಡಂಬರದ ಹೆಸರಿನಲ್ಲಿ ಏನೇನೋ ವಸ್ತುಗಳನ್ನು ದೇವರಿಗೆ ಅರ್ಪಿಸುತ್ತಿದ್ದೇವೆ. ಬನ ವೆಂದರೆ ವನ ಎಂದರ್ಥ ಇಂತಹ ವನಸಂಸ್ಕೃತಿಯನ್ನು ಬೆಳೆಸಲು ಸಮಾಜ ಮುಂದಾಗಬೇಕಾಗಿದೆ ಎಂದರು.

ಪ್ರಕೃತಿ ಉಳಿಸಿ
ಡಾ| ಆಶಾಜ್ಯೋತಿ ರೈ ಮಾತನಾಡಿ, ಸಿರಿ ನಮ್ಮ ಸಂಸ್ಕೃತಿಯ ಪ್ರತೀಕ, ಸಿರಿ ಅಂದರೆ ಅದು ಪ್ರಕೃತಿ ಎಂದರ್ಥ ಆದುದರಿಂದ ಪ್ರಕೃತಿ ಮತ್ತು ಸಂಸ್ಕೃತಿ ಒಂದಾಗುವ ದಿವಸವನ್ನು ಪಗ್ಗು 18 ಸಿರಿ ದಿನವೆಂದು ಆಚರಿಸುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಹಣ ಸಂಪತ್ತನ್ನು ಬಿಟ್ಟು ಹೋಗದೆ ಹಿರಿಯರು ಕೊಟ್ಟ ಪ್ರಕೃತಿಯನ್ನು ಮರಳಿ ಕೊಡುವುದು ನಮ್ಮೆಲ್ಲರ ಧೇಯ್ಯೋದ್ದೇಶ ಆಗಬೇಕು. ಆದುದರಿಂದ ಬಂಟರ ಯಾನೆ ನಾಡವರ ಸಂಘದ ಮಹಿಳಾ ವಿಭಾಗದ ನೇತೃತ್ವದಲ್ಲಿ ಈ ಯೋಜನೆಯನ್ನು ಎಲ್ಲೆಲ್ಲಿ ಖಾಲಿ ಭೂಮಿ ಬನ ದೇವಸ್ಥಾನ ಶಾಲೆ ವಠಾರಗಳು, ತಮ್ಮ ಮನೆ ಪರಿಸರಗಳಲ್ಲಿ ಆದಷ್ಟು ಸಸಿಗಳನ್ನು ನೆಡುವ ಮತ್ತು ನಿರಂತರವಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಪ್ರತಿಜ್ಞೆಯನ್ನು ಸ್ವೀಕರಿಸಬೇಕು ಎಂದು ಎಲ್ಲರಿಗೂ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಕ ಮಾಧವ ಉಳ್ಳಾಲ್‌ ಅವರು ರಾಮಕೃಷ್ಣ ವಿದ್ಯಾರ್ಥಿನಿ ಭವನದ ಸುತ್ತಮುತ್ತ ಹಲವಾರು ಮರಗಿಡಗಳನ್ನು ನೀಡುವಲ್ಲಿ ಮುತುವರ್ಜಿ ವಹಿಸಿದರು.

Advertisement

ರಾಮಕೃಷ್ಣ ವಿದ್ಯಾರ್ಥಿ ನಿಲಯದ ಉಷಾ ಬಲ್ಲಾಳ್‌, ತುಳುವರ್ಲ್ಡ್ ಅಧ್ಯಕ್ಷ ಡಾ| ರಾಜೇಶ್‌ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

ಪ್ರಕೃತಿ, ಸಂಸ್ಕೃತಿ ಪೂರಕವಾಗಿರಲಿ
ದಿಕ್ಸೂಚಿ ಭಾಷಣ ಮಾಡಿದ ಮಂಜುಳಾ ಶೆಟ್ಟಿ ಮಾತನಾಡಿ, ಪ್ರಕೃತಿ ಮತ್ತು ಸಂಸ್ಕೃತಿ ಪರಸ್ಪರ ಪೂರಕವಾಗಿರಬೇಕು. ಸಂಸ್ಕೃತಿ ಹೆಸರಲ್ಲಿ ವಿಕೃತಿಯನ್ನು ಸೃಷ್ಟಿಸಿದರೆ ಮುಂದೊಂದು ದಿನ ಮೃತ್ಯು ಖಂಡಿತ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next