Advertisement

ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ: ಸುದರ್ಶನ

04:04 PM Apr 15, 2018 | |

ರಾಯಚೂರು: ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅಂಥ ಸಂವಿಧಾನ ನೀಡಿದ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ತತ್ವಾದರ್ಶ ಮಾದರಿಯಾಗಿವೆ ಎಂದು ರಾಯಚೂರು ಆಕಾಶವಾಣಿ ಮುಖ್ಯಸ್ಥ ಎಂ.ಎ.ಸುದರ್ಶನ ಹೇಳಿದರು.

Advertisement

ಸ್ಥಳೀಯ ಜಿಲ್ಲಾ ಆಕಾಶವಾಣಿ ಕೇಂದ್ರದಲ್ಲಿ ಶನಿವಾರ ನಡೆದ ಡಾ| ಬಿ.ಆರ್‌ ಅಂಬೇಡ್ಕರ್‌ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಠೊರ ಸನ್ನಿವೇಶದಲ್ಲಿ ಜೀವನ ನಡೆಸಿದ ಅಂಬೇಡ್ಕರ್‌ ಬಾಲ್ಯದಲ್ಲಿ ಅನುಭವಿಸಿದ ಅಪಮಾನಗಳಿಗೆ ಕೊನೆಯಿಲ್ಲ. ಅದು ಕಲ್ಲು ಮುಳ್ಳುಗಳ ನೋವಿನ ಹಾದಿಯಾಗಿತ್ತು. ಅವರು ಅನುಭವಿಸಿದ ಕಷ್ಟ, ಯಾತನೆಗಳು ಬೇರೆ ಯಾವ ಮಹನೀಯರೂ ಅನುಭವಿಸಿಲ್ಲ ಎಂದರು.

ಅಂಬೇಡ್ಕರ್‌ ದೇಶದಲ್ಲಿ ಎಲ್ಲರೂ ಸಮಾನವಾಗಿ ಜೀವಿಸಲು ಸಂವಿಧಾನದ ಮೂಲಕ ಎಲ್ಲರಿಗೆ ಅನುಕೂಲ ಮಾಡಿ ಸರ್ವರಿಗೂ ಸಮಪಾಲು ಸಿಗುವಂತೆ ಶ್ರಮಿಸಿದರು. ದಲಿತರಿಗಾಗಿ ಹೋರಾಡದೇ ಎಲ್ಲ ಶೋಷಿತ ಜಾತಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು ಎಂದರು.

ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಡಾ| ವಿ.ಜಿ. ಬಾವಲತ್ತಿ ಮಾತನಾಡಿ, ಸಂವಿಧಾನ ಎಲ್ಲರಿಗೂ ಸಮನಾದ ಅವಕಾಶ ನೀಡಿದೆ. ಎಲ್ಲರೂ ಶಾಂತಿ ಸುವ್ಯವಸ್ಥೆಯಿಂದ ಬಾಳುತ್ತಿದ್ದೇವೆ ಎಂದರೆ ಅದಕ್ಕೆ ಅಂಬೇಡ್ಕರ್‌ ರಚಿಸಿದ ಸಂವಿಧಾನವೇ ಕಾರಣ ಎಂದರು. ಕೇಂದ್ರದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next