Advertisement

ಮಾದರಿ ಸರಕಾರಿ ಆಸ್ಪತ್ರೆ ನಿರ್ಮಾಣ

01:05 PM Jan 20, 2020 | Suhan S |

ಜಮಖಂಡಿ: ಜಿಲ್ಲೆಯಲ್ಲಿ 21 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಸುಸಜ್ಜಿತ ಮಾದರಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದ ಭೂಮಿ ಶೀಘ್ರ ನೆರವೇರಲಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಕೂಡ ಆಗಿದ್ದು ಫೆಬ್ರವರಿ ತಿಂಗಳಲ್ಲಿ ಕಟ್ಟಡದ ಕೆಲಸ ಆರಂಭಗೊಂಡು, ಕೇವಲ 15 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

Advertisement

ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಿವಾರ ಭೇಟಿ ನೀಡಿ, ವಾರ್ಡ್‌ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸಹಿತ ಅಗತ್ಯ ಮೂಲಭೂತ ಸೌಕರ್ಯ ವೀಕ್ಷಿಸಿದ ನಂತರ ಆಸ್ಪತ್ರೆ ವೈದ್ಯರೊಂದಿಗೆ ಮಾತನಾಡಿದ ಅವರು, ಈಗಿರುವ ತಾಲೂಕು ಆಸ್ಪತ್ರೆ ಪಕ್ಕದಲ್ಲಿ ಅಂದಾಜು 4 ಎಕರೆ ಜಾಗದಲ್ಲಿ ಹೊಸದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಗೊಳ್ಳಲಿದೆ ಎಂದರು.

ನಗರದ ಕುಂಬಾರಕೆರೆ ಹತ್ತಿರದಲ್ಲಿ ಹೊಸ ಆಸ್ಪತ್ರೆ ಮುಖ್ಯದ್ವಾರ ನಿರ್ಮಿಸಲಾಗುತ್ತಿದ್ದು, ತುರ್ತು ಚಿಕಿತ್ಸೆ ಘಟಕ ಅಲ್ಲಿಯೇ ಲಭ್ಯವಾಗಲಿದೆ. ಜನರಅನುಕೂಲಕ್ಕಾಗಿ ವಾಹನ ಸಂಚಾರ ತಡೆಗಟ್ಟುವನಿಟ್ಟಿನಲ್ಲಿ ಆಸ್ಪತ್ರೆ ಮುಂದಿರುವ ಮುಖ್ಯ ರಸ್ತೆ 80ಅಡಿ ಅಳತೆಯಲ್ಲಿ ನಿರ್ಮಿಸಲಾಗುತ್ತಿದೆ. ಹೊಸಆಸ್ಪತ್ರೆಯಲ್ಲಿ ಅತ್ಯಾಧುನಿಕ ಸಲಕರಣೆ, ಹೊಸವಿಧಾನದೊಂದಿಗೆ ಎಲ್ಲ ಚಿಕಿತ್ಸೆಗಳು ಲಭ್ಯವಾಗಲಿದ್ದು, ಇದರಿಂದ ತಾಲೂಕಿನ ಬಡಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸರ್ಕಾರಿ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಹೇಳಿದರು.

ತಾಲೂಕಾ ಆಸ್ಪತ್ರೆ ಪ್ರಭಾರಿ ವೈದ್ಯಾಧಿಕಾರಿ ಡಾ| ಕೆ.ಕೆ.ಬಣ್ಣದ ಮಾತನಾಡಿ, ಕಳೆದ 9 ತಿಂಗಳಲ್ಲಿ ರೋಗಿಗಳಿಗೆ ಹೆಚ್ಚಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆಸ್ಪತ್ರೆಯ ನವೀಕರಣ ಸಹಿತ ವಿವಿಧ ಯಂತ್ರಗಳನ್ನು ತರಿಸಲಾಗಿದೆ. ಕಳೆದ 9 ತಿಂಗಳಲ್ಲಿ ಆಸ್ಪತ್ರೆಯಲ್ಲಿ 1587 ಜನರಿಗೆ ನಾಯಿ ಕಡಿತ ಲಸಿಕೆ ನೀಡಲಾಗಿದೆ. 734 ಸಂತಾನ ಶಸ್ತ್ರಚಿಕಿತ್ಸೆ,

66 ಉದರ ಶಸ್ತ್ರಚಿಕಿತ್ಸೆ, 7741 ಗರ್ಭಿಣಿಯರ ತಪಾಸಣೆ, ಅದರಲ್ಲಿ 1258 ಸಾಮಾನ್ಯ ಹೆರಿಗೆ, 387 ಶಸ್ತ್ರಚಿಕಿತ್ಸೆ ಹೆರಿಗೆ ಸಹಿತ 35 ನೇತ್ರ ಚಿಕಿತ್ಸೆ, 2176 ಅಲ್ಟ್ರಾಸೌಂಡ್‌ ಸ್ಕ್ಯಾನ್ , 71 ಹಾವು ಕಡಿತ ಔಷ ಧಿ ನೀಡಲಾಗಿದೆ. ತಾಲೂಕಿನಲ್ಲಿ 7494 ಜನರಿಗೆ ಎಚ್ಐವಿ ಕಂಡುಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

Advertisement

ತಾಲೂಕು ವೈದ್ಯಾಧಿಕಾರಿ ಡಾ| ಜಿ.ಎಸ್‌. ಗಲಗಲಿ, ಸಂಜಯ ಘಾಟಗೆ, ನಾಮಣ್ಣವರ, ಕಾಳಗಿ ಸಹಿತ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next