Advertisement

ಮೈಸೂರಲ್ಲಿ ಮಾದರಿ ಕೋವಿಡ್‌ಕೇರ್‌ ಸೆಂಟರ್‌

02:53 PM Oct 10, 2020 | Suhan S |

ಮೈಸೂರು: ನಗರದ ಹೊರವಲಯದ ಮಂಡಕಳ್ಳಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಅಕಾಡೆಮಿಕ್‌ ಭವನದಲ್ಲಿ ಜಿಲ್ಲಾಡಳಿತ ತೆರೆದಿರುವ ಕೋವಿಡ್‌ ಕೇರ್‌ ಸೆಂಟರ್‌ ಇತರೆ ಕೋವಿಡ್‌  ಕೇರ್‌ ಕೇಂದ್ರಗಳಿಗೆ ಮಾದರಿಯಾಗಿದೆ.

Advertisement

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದ್ದರೂ, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಪ್ರತಿದಿನ ಹೆಚಾÌಗುತ್ತಿವೆ. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ಹಾಸಿಗೆಗಳ ಕೊರತೆ ಉಂಟಾಗಬಾರದು ಎಂಬ ಮುಂದಾಲೋಚನೆಯಿಂದ ಜಿಲ್ಲೆಯಲ್ಲಿ ಅನೇಕ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಮಂಡಕಳ್ಳಿ ಕೋವಿಡ್‌ ಕೇರ್‌ ಕೇಂದ್ರವೂ ಒಂದು. ಇಲ್ಲಿ ರೋಗ ಲಕ್ಷಣ ರಹಿತ ಸೋಂಕಿತ ವ್ಯಕ್ತಿಗಳನ್ನು ದಾಖಲಿಸಿಕೊಂಡು ರುಚಿಯಾದಊಟೋಪಚಾರ, ಮನರಂಜನಾ ವ್ಯವಸ್ಥೆಮುಂತಾದ ಸೌಲಭ್ಯಗಳ ಜೊತೆಗೆ ಚಿಕಿತ್ಸೆನೀಡಲಾಗುತ್ತಿದೆ ಎಂಬುದು ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರ ಮಾತು.

ಅಕಾಡೆಮಿಕ್‌ ಭವನದಲ್ಲಿ ಸುಮಾರು 53 ಸಭಾಂಗಣಗಳಿದ್ದು, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಎರಡು ಮೀಟರ್‌ ಅಂತರದಲ್ಲಿ ಒಂದೊಂದರಲ್ಲಿ 15 ರಿಂದ 20 ಹಾಸಿಗೆಯನ್ನು ವ್ಯವಸ್ಥೆ ಮಾಡಲಾಗಿದೆ. ಹಾಸಿಗೆ, ಹೊದಿಕೆ, ತಲೆದಿಂಬು, ಸ್ನಾನದ ಕೊಠಡಿ, ಶೌಚಾಲಯ, ಬಟ್ಟೆ ಸ್ವಚ್ಛಗೊಳಿಸಲು ಅಗತ್ಯ ವ್ಯವಸ್ಥೆ ಎಲ್ಲವನ್ನು ಕಲ್ಪಿಸಿರುವುದು ವಿಶೇಷ.

ವೈದ್ಯರಿಗೆ ಪ್ರತ್ಯೇಕ ವಿಭಾಗ: ರೋಗಿಗಳು ಸುರಕ್ಷತೆಯಷ್ಟೆ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗೂಆದ್ಯತೆ ನೀಡಲಾಗಿದೆ. ಕೆಳ ಮಹಡಿಯಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪ್ರತ್ಯೇಕ ವಿಭಾಗವನ್ನು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಗ್ರೀನ್‌  ವೈದ್ಯರು, ಸ್ಟಾಫ್ ನರ್ಸ್‌ ಹಾಗೂ ಆಡಳಿತ ಸಿಬ್ಬಂದಿ ಇರುತ್ತಾರೆ.

ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ: ಕೇಂದ್ರದಲ್ಲಿ ಶುಚಿತ್ವಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಶುಚಿತ್ವದ ಕೊರತೆನಿಭಾಯಿಸಲು ಪ್ರತ್ಯೇಕ ಅಧಿಕಾರಿಗಳನ್ನುನೇಮಿಸಲಾಗಿದೆ.  ಶೌಚಾಲಯ ನಿರ್ವಹಣೆಸೇರಿದಂತೆ ಕೋವಿಡ್‌ಔಷಧೀಯ ತ್ಯಾಜ್ಯವನ್ನು ಅತ್ಯಂತಜಾಗರೂಕತೆಯಿಂದ ವಿಲೇವಾರಿ ಮಾಡಲಾಗುತ್ತಿದೆ.

Advertisement

ಮಹಿಳೆಯರಿಗೆ ಪ್ರತ್ಯೇಕ: ಕೇಂದ್ರದಲ್ಲಿ ಮೂರನೇ ಮಹಡಿಯ ಕೊಠಡಿಗಳನ್ನು ಮಹಿಳೆಯರಿಗೆ ಹಾಗೂ ಒಂದೇಕುಟುಂಬದ ಸದಸ್ಯರಿಗೆ ಮೀಸಲಿಡಲಾಗಿದೆ. ವಿಶೇಷ ಎಂದರೆ ಕೇರ್‌ನಲ್ಲಿ ಕೋವಿಡ್ ವಾರಿಯರ್ಸ್‌ ಗಳಿಗೂಪ್ರತ್ಯೇಕವಾದ ಕೊಠಡಿಗಳನ್ನು ಮೀಸಲಿಡಲಾಗಿದೆ.

ಮನರಂಜನೆಗೂ ಅವಕಾಶ : ಕೋವಡ್ ಸೋಂಕಿಗೆ ಒಳಗಾಗಿ ದಾಖಲಾದ ವ್ಯಕ್ತಿಗಳು ಕೇಂದ್ರದಲೇ ಉಳಿದುಕೊಳ್ಳ ಬೇಕಾಗಿರುವುದರಿಂದ ಏಕಾಂಗಿತನ, ಬೇಸರ ಉಂಟಾಗಬಾರದು ಎಂಬ ಉದ್ದೇಶ‌ದಿಂದ ಮನರಂಜನೆಗಾಗಿ ಅಗತ್ಯವಿರುವ ಪೂರಕ ವಾತಾವರಣ ಕಲ್ಪಿಸಲಾಗಿದೆ. ಸಭಾಂಗಣದಲ್ಲಿ ಒಳಾಂಗಣ ಕ್ರೀಡಾ ಪರಿಕರಗಳಾದ ಕೇರಂ ಬೋರ್ಡ್‌, ಚೆಸ್‌ ಹಾಗೂ ಬ್ಯಾಡ್ಮಿಂಟನ್‌ ಪರಿಕರಗಳನ್ನು ನೀಡಲಾಗಿದೆ. ಕೇಬಲ್‌ ಸಂಪರ್ಕವಿರುವ ಟೀವಿ, ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ.

ನಿಜವಾದ ವಾರಿಯರ್ಸ್‌ಡಿ ಗ್ರೂಪ್‌ ನೌಕರರು : ನಿಜವಾದಕೊರೊನಾ ವಾರಿಯರ್ಸ್‌ಗಳಿಗೆ ಉದಾಹರಣೆ ಎಂದರೆಕೊರೊನಾ ಚಿಕಿತ್ಸಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವಡಿಗ್ರೂಪ್‌ ನೌಕರರು. ತಮ್ಮ ಸುತ್ತಲ್ಲೂ ಕೋವಿಡ್ ಸೋಂಕಿತರೆ ಇದ್ದರೂ ಯಾವುದನ್ನು ಲೆಕ್ಕಿಸದೇ ಸೋಂಕಿತರ ಕೊಠಡಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ನಡೆಯಲು ಆಗದ ಸೋಂಕಿತರಿಗೆ ನಡೆಯಲು ಸಹಾಯ ಮಾಡುತ್ತಿದ್ದಾರೆ. ಇಡೀ ಕೇಂದ್ರವನ್ನು ಸದಾ ಶುಚಿಯಾಗಿಡುತ್ತಾ ಕೋವಿಡ್ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next