ಬಣ್ಣದ ಲೋಕ ಎಲ್ಲರನ್ನು ತನ್ನತ್ತ ಸೆಳೆಯುವ ಸಾಮರ್ಥ್ಯ ಹೊಂದಿದೆ. ಮುಖದ ಮೇಲೆ ಬಣ್ಣ ಹಾಕಿ ಬದುಕು ಕಟ್ಟಿಕೊಂಡವರು ಸಾವಿರಾರು ಜನ ಇದ್ದಾರೆ. ಇವರ ಸಾಲಿಗೆ ಲಂಡನ್ ಮಾಜಿ ಪೊಲೀಸ್ ಅಧಿಕಾರಿ ಚಾರ್ಲೆಟ್ ರೋಸ್ ಸೇರುತ್ತಾರೆ.
ಚಾರ್ಲೆಟ್ ರೋಸ್ ಇದೀಗ ಕೋಟ್ಯಧೀಶೆ. ಅವರ ಒಂದು ಫೋಟೊಗೆ ಲಕ್ಷಾಂತರ ರೂ.ಅಮೆರಿಕನ್ ಡಾಲರ್ ಹರಿದು ಬರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ರೋಸ್ ಫೋಟೊಗಳು ಸಂಚಲನ ಮೂಡಿಸುತ್ತವೆ.
ಇಂದು ಕೋಟಿ ಬೆಲೆಬಾಳುವ ಕಾರಿನಲ್ಲಿ ಓಡಾಡುವ ರೋಸ್, ಈ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದರು. ಒಂದು ಸರ್ಕಾರಿ ಕೆಲಸ ಸಿಕ್ಕರೆ ಸಾಕು, ಜೀವನ ಪೂರ್ತಿ ನೆಮ್ಮದಿಯಾಗಿ ಜೀವಿಸಬಹುದು ಎನ್ನುವವರ ಮಧ್ಯೆ ರೋಸ್ ಕೊಂಚ ಡಿಫ್ರೆಂಟ್ ಆಗಿ ಕಾಣಿಸುತ್ತಾರೆ. ಸರ್ಕಾರಿ( ಪೊಲೀಸ್) ಕೆಲಸ ಧಿಕ್ಕರಿಸಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಈ ಚೆಲುವೆ ಇಂದು ಕುಬೇರರ ಸಾಲಿಗೆ ಬಂದು ನಿಂತಿದ್ದಾರೆ.
ತನ್ನ ಬಣ್ಣದ ಲೋಕದ ಪಯಣದ ಬಗ್ಗೆ ಮಾತಾಡುವ ರೋಸ್, ಕಷ್ಟಪಟ್ಟು ಪೊಲೀಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡೆ. ಆದರೆ, ಅದು ನನ್ನಂತ ಹೆಣ್ಣು ಮಕ್ಕಳಿಗೆ ಸೂಕ್ತವಲ್ಲದ ತಾಣ ಎಂದು ನನಗೆ ಅನ್ನಿಸಲು ಶುರುವಾಯಿತು. ಪುರುಷ ಪ್ರಧಾನ್ಯತೆಯಿಂದ ತುಂಬಿಕೊಂಡಿರುವ ಆ ಇಲಾಖೆಯ ಕೆಲಸ ನನಗೆ ಸರಿ ಹೊಂದುವುದಿಲ್ಲ ಎಂದು ನನಗೆ ಅತೀ ಕಡಿಮೆ ಅವಧಿಯಲ್ಲಿ ಮನವರಿಕೆ ಆಯಿತು. ಆದಷ್ಟು ಬೇಗ ಅಲ್ಲಿಂದ ಹೊರ ಬರಬೇಕು ಎಂದು ನಿರ್ಧರಿಸಿ 2014 ರಲ್ಲಿ ನನ್ನ ಕೆಲಸಕ್ಕೆ ಗುಡ್ ಬೈ ಹೇಳಿದೆ ಎನ್ನುತ್ತಾರೆ ರೋಸ್.
ಪೊಲೀಸ್ ಕೆಲಸ ಬಿಟ್ಟು ಹೊರ ಬಂದ ರೋಸ್, 2016 ರಲ್ಲಿ ಸ್ನೇಹಿತರ ಸಲಹೆ ಸೂಚನೆಗಳ ಮೂಲಕ ಮಾಡೆಲಿಂಗ್ ವೃತ್ತಿ ಆರಂಭಿಸುತ್ತಾಳೆ. ಕೆಲವು ಕಾರುಗಳು, ಒಳ ಉಡುಪುಗಳ ಪ್ರಚಾರಕಿಯಾಗಿ ಗುರುತಿಸಿಕೊಳ್ಳುತ್ತಾಳೆ. ನಂತರ ಇಂಗ್ಲೆಂಡ್‍ನ ಪ್ರಸಿದ್ಧ ‘ಓನ್ಲಿ ಫ್ಯಾನ್ಸ್’ ಆ್ಯಪ್‍ನಲ್ಲಿ ತನ್ನದೇ ಪೇಜ್ ತೆರೆಯುತ್ತಾರೆ. ಅಲ್ಲಿಂದ ಈಕೆಯ ಅದೃಷ್ಟ ಬದಲಾಗುತ್ತದೆ.
ಓನ್ಲಿ ಫ್ಯಾನ್ಸ್ ನಲ್ಲಿ ರೋಸ್ ತನ್ನ ಗ್ಲಾಮರಸ್ ತುಂಬಿದ ಫೋಟೊಗಳಿಂದ ತನ್ನದೆಯಾದ ಅಭಿಮಾನಿಗಳ ಕೋಟೆ ಕಟ್ಟಿಕೊಳ್ಳುತ್ತಾಳೆ. ದಿನದಿಂದ ದಿನಕ್ಕೆ ಅವರ ಫಾಲೋವರ್ಸ್ ಸಂಖ್ಯೆ ದುಪ್ಪಟ್ಟಾಗುತ್ತದೆ. ಪರಿಣಾಮ ಅವಳ ಚೆಂದನೆಯ ಫೋಟೊ ಹಾಗೂ ವಿಡಿಯೋಗಳಿಗೆ ಬೇಡಿಕೆ ಏರುಮುಖವಾಗುತ್ತದೆ. ಪ್ರಸ್ತುತ ಅವರು ಪ್ರತಿ ತಿಂಗಳು 1.50 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರಂತೆ.
ಇನ್ನು ಒನ್ಲಿ ಫ್ಯಾನ್ಸ್ ಪೋರ್ನ್ ವಿಡಿಯೋಗಳ ತಾಣ ಎಂದು ಕೆಲವರ ಕಲ್ಪನೆಯಾಗಿದೆ. ಅದು ನಿಜವಲ್ಲ. ಕೆಲವೊಂದು ಸ್ವಯಂ ಚೌಕಟ್ಟಿನೊಳಗೆ ನಾನಿದ್ದೇನೆ. ನನ್ನ ಫೋಟೊಗಳು ಹಾಗೂ ವಿಡಿಯೋಗಳಿಗೆ ಕೆಲವೊಂದು ನಿರ್ಬಂಧದ ರೇಖೆಗಳನ್ನು ಹಾಕಿಕೊಂಡಿದ್ದೇನೆ ಎನ್ನುತ್ತಾರೆ ರೋಸ್.