Advertisement

ಮಂಗಳೂರಿನ ಮಾದರಿ ಮತಗಟ್ಟೆ

11:02 AM May 12, 2018 | Team Udayavani |

ಮಂಗಳೂರು: ಮಂಗಳೂರಿನ ಎರಡು ಮತಗಟ್ಟೆಗಳು ಆಧುನಿಕ ಸೌಲಭ್ಯಗಳ ಮೂಲಕ ವಿನೂತನ ರೀತಿಯಲ್ಲಿ ಸಿದ್ಧಗೊಂಡಿದ್ದು, ಶನಿವಾರ ನಡೆಯುವ ಮತದಾನಕ್ಕೆ ಸಕಲ ರೀತಿಯಲ್ಲಿ ಸನ್ನದ್ಧಗೊಂಡಿವೆ.

Advertisement

ನಗರದ ಲೇಡಿಹಿಲ್‌ ವಿಕ್ಟೋರಿಯಾ ಪ್ರೌಢ ಶಾಲೆಯ ಬೂತ್‌ ಸಂಖ್ಯೆ 12 ಹಾಗೂ ಗಾಂಧೀ ನಗರದ ಸ. ಹಿ. ಪ್ರಾ. ಶಾಲೆಯ ಬೂತ್‌ ಸಂಖ್ಯೆ 74ರ ಮತಗಟ್ಟೆಗಳನ್ನು ಮಾದರಿಯಾಗಿ ಸಿದ್ಧಪಡಿಸಲಾಗಿದ್ದು, ಈ ಬೂತ್‌ನಲ್ಲಿ ಮತ ಚಲಾವಣೆ ಮಾಡಲು ಇಂದು ಆಗಮಿಸುವ ಮತದಾರರಿಗೆ ವಿಶೇಷ ಸೌಲಭ್ಯಗಳು ದೊರೆಯಲಿದೆ. 

ಸರದಿ ಸಾಲು ಇಲ್ಲಿಲ್ಲ
ಸರದಿ ಸಾಲು ಇಲ್ಲಿ ಇರುವುದಿಲ್ಲ. ಮತ ಹಾಕಲು ಬರುವ ಮತದಾರ ನೇರವಾಗಿ ಬಂದು ಮತ ಹಾಕಬಹುದು. ಅದಕ್ಕಿಂತ ಮೊದಲು ಬಂದ ಮತದಾರರು ಇದ್ದರೆ, ಟೋಕನ್‌ ಕೊಡಲಾಗುತ್ತದೆ. ಅಲ್ಲಿಯವರೆಗೆ ಮತದಾರ ಅಲ್ಲಿಯೇ ವಿಶ್ರಾಂತಿ ಪಡೆಯಲು ಕುರ್ಚಿ, ಬೆಂಚು, ಸೋಫಾ ಸೇರಿದಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ.

ಮತಗಟ್ಟೆಗಳ ಪ್ರವೇಶದ್ವಾರದಿಂದಲೇ ಸುಸಜ್ಜಿತವಾಗಿ ನವೀಕರಿಸಲಾಗಿದೆ. ಸ್ವಾಗತ ಕಮಾನು ಮಾಡ ಲಾಗಿದೆ. ಮತದಾರರಿಗೆ ಮಾಹಿತಿ ತಿಳಿಸುವ ಸೂಚನಾ ಫಲಕಗಳನ್ನು ಅಲ್ಲಲ್ಲಿ ಜೋಡಿಸಲಾಗಿದೆ. ಮತ ಗಟ್ಟೆಯ ಒಳಗಡೆ ಬಲೂನುಗಳ ಸಹಾಯದಿಂದ ಆಕರ್ಷಕವಾಗಿ ಕೋಣೆ ಶೃಂಗರಿಸಲಾಗಿದೆ. ಮದುವೆ ಮನೆಯಲ್ಲಿರುವ ಶೃಂಗಾರ ಮತಗಟ್ಟೆಯಲ್ಲಿದೆ.

ಫ್ಯಾನ್‌, ಕುಡಿಯುವ ನೀರು ಹಾಗೂ ಪ್ರಥಮ ಚಿಕಿತ್ಸಾ ಸೌಲಭ್ಯ ವ್ಯವಸ್ಥೆ ಇದೆ. ಮತಗಟ್ಟೆಗಳಿಗೆ ಮತದಾರರು ಬರುವಾಗ ಅನಿವಾರ್ಯವಾಗಿ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದರೆ ನೋಡಿಕೊಳ್ಳಲು ಒಬ್ಬ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಜತೆಗೆ ಮಕ್ಕಳಿಗೆ ಆಟವಾಡುವ ಕಾರಣದಿಂದ ಆಟೋಟ ಸಾಮಾಗ್ರಿಗಳನ್ನು ಜೋಡಿಸಿಡಲಾಗಿದೆ.

Advertisement

ಮಾದರಿ ಮತಗಟ್ಟೆಗಳು ರೆಡಿ
ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೆ ಮತದಾರರನ್ನು ಆಕರ್ಷಿಸಬೇಕು ಎಂಬ ಉದ್ದೇಶದಿಂದ ಕೆಲವು ಮತಗಟ್ಟೆಗಳನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ಈ ಪೈಕಿ ಮಂಗಳೂರಿನ ಲೇಡಿಹಿಲ್‌ ಹಾಗೂ ಗಾಂಧೀನಗರದ ಎರಡು ಮತಗಟ್ಟೆಗಳನ್ನು ಮಾದರಿ ರೀತಿಯಲ್ಲಿ ರೂಪಿಸಲಾಗಿದೆ.
-ಡಾ| ಎಂ.ಆರ್‌. ರವಿ, ಜಿ. ಪಂ. ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next