Advertisement

ಗಣೇಶೋತ್ಸವ:ತೇಜಸ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಲಭಿಸಲಿದೆ ಮೋದಕ!

02:02 PM Aug 13, 2017 | |

ಮುಂಬಯಿ: ಈ  ಬಾರಿಯ ಗಣೇಶೋತ್ಸವದ ಸಂದರ್ಭದಲ್ಲಿ  ಮುಂಬಯಿ-ಗೋವಾ ನಡುವಣ  ಸಂಚರಿಸುವ  ತೇಜಸ್‌ ಎಕ್ಸ್‌ಪ್ರೆಸ್‌  ರೈಲಿನಲ್ಲಿ  ಪ್ರಯಾಣಿಸುವ  ಯಾನಿಗಳಿಗೆ  ಗಣಪನ  ಅಚ್ಚುಮೆಚ್ಚಿನ  ತಿನಿಸಾಗಿರುವ  “ಮೋದಕ’ ಲಭಿಸಲಿದೆ. ಭಾರತೀಯ ರೈಲ್ವೇ ಕ್ಯಾಟರಿಂಗ್‌  ಮತ್ತು ಸಾರಿಗೆ ನಿಗಮ (ಐಆರ್‌ಸಿಟಿಸಿ) ಈ ನಿರ್ಧಾರವನ್ನು ಕೈಗೊಂಡಿದ್ದು ಗಣೇಶೋತ್ಸವ ನಡೆಯಲಿರುವ 10ದಿನಗಳ  ಅವಧಿಯಲ್ಲಿ ತೇಜಸ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವ ಯಾನಿಗಳ ಬಾಯಿಯನ್ನು ಮೋದಕದಿಂದ ಸಿಹಿ ಮಾಡಲು ಮುಂದಾಗಿದೆ. 

Advertisement

ಈ ವರ್ಷದ  ಮೇ 21ರಂದು ರೈಲ್ವೇ ಸಚಿವ ಸುರೇಶ್‌  ಪ್ರಭು ಅವರಿಂದ ಚಾಲನೆ ನೀಡಲ್ಪಟ್ಟ  ತೇಜಸ್‌  ಎಕ್ಸ್‌ಪ್ರೆಸ್‌  ರೈಲಿನಲ್ಲಿನ  ಅತ್ಯಾಧುನಿಕ ವ್ಯವಸ್ಥೆಗಳು ಮತ್ತು ಸೌಲಭ್ಯಗಳಿಂದಾಗಿ ಬಲುಬೇಗ ಜನಪ್ರಿಯಗೊಂಡಿದೆ. ಗಣೇಶೋತ್ಸವದ  ಅವಧಿಯಲ್ಲಿ  ಯಾನಿಗಳ ಸಂಖ್ಯೆ  ಮತ್ತಷ್ಟು  ಹೆಚ್ಚುವ ನಿರೀಕ್ಷೆ  ಇರುವುದರಿಂದ ಐಆರ್‌ಸಿಟಿಸಿ ಯಾನಿಗಳಿಗೆ ಮೋದಕವನ್ನು  ಒದಗಿಸುವ  ವ್ಯವಸ್ಥೆಯನ್ನು  ಮಾಡಿದ್ದು  ಈ ಮೂಲಕ  ಹೆಚ್ಚಿನ ಸಂಖ್ಯೆಯಲ್ಲಿ ಯಾನಿಗಳನ್ನು  ತನ್ನತ್ತ  ಸೆಳೆಯಲು  ಯೋಜನೆ ರೂಪಿಸಿದೆ. 

ಮುಂಬಯಿ-ದಿಲ್ಲಿ  ನಡುವೆ ಸಂಚರಿಸುವ  ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ ಯಾನಿಗಳಿಗೆ  ಕಳೆದ  ವರ್ಷ  ಐಆರ್‌ಸಿಟಿಸಿ  ಮೋದಕವನ್ನು  ಪೂರೈಕೆ ಮಾಡಿತ್ತು.  ಅಲ್ಲದೆ  ವಿವಿಧ ಹಬ್ಬಗಳ  ಸಂದರ್ಭಗಳಲ್ಲಿ  ಪೇಡಾ, ಜಿಲೇಬಿ..ಮತ್ತಿತರ ಸಿಹಿತಿನಿ ಸುಗಳನ್ನು ಯಾನಿಗಳಿಗೆ ಒದಗಿಸುತ್ತಾ ಬಂದಿದೆ. ಐಆರ್‌ಸಿಟಿಸಿಯ ಈ ಕ್ರಮ ಪ್ರಶಂಸೆಗೆ ಪಾತ್ರವಾಗಿದೆ ಎಂದು ಐಆರ್‌ಸಿಟಿಸಿಯ  ವಕ್ತಾರರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next