Advertisement

ಅಗ್ನಿಶಾಮಕ ಠಾಣೆಯಿಂದ ಅಣಕು ಪ್ರದರ್ಶನ

03:34 PM Jan 30, 2021 | Team Udayavani |

ಮುಧೋಳ: ಆಕಸ್ಮಿಕವಾಗಿ ಉಂಟಾಗುವ ಬೆಂಕಿ ಆರಿಸುವುದು ಇತರೆಡೆಗೆ ಹರಡದಂತೆ ಮುಂಜಾಗ್ರತೆ ವಹಿಸುವುದು ಅಗ್ನಿಶಾಮಕ ದಳದ ಮುಖ್ಯ ಕಾರ್ಯವಾಗಿದೆ ಎಂದು ಮುಧೋಳ ಅಗ್ನಿಶಾಮಕ ದಳದಠಾಣಾಧಿಕಾರಿ ಬಿ.ಎಂ. ಬಂಡಿವಡ್ಡರ ಹೇಳಿದರು.

Advertisement

ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಪ್ರೌಢ ಶಾಲಾ ಆವರಣದಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಯ ಅಗ್ನಿಶಾಮಕ ಠಾಣೆ ಆಶ್ರಯಲ್ಲಿ ಜರುಗಿದ ತುರ್ತು ಸೇವೆಯಲ್ಲಿ ಅಗ್ನಿಶಾಮಕದಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಕಿ ಅಪಘಾತದಿಂದ ಉಂಟಾಗುವ ಪ್ರಾಣಹಾನಿ, ಆಸ್ತಿ ಪಾಸ್ತಿಗಳ ನಷ್ಟ, ಪರಿಸರದಲ್ಲಿ ಆಕಸ್ಮಿಕವಾಗಿ ಸಂಭವಿಸುವ ಬೆಂಕಿ ಅವಘಡ ಹಾಗೂ ನೀರಿನಿಂದಾಗುವ ಪ್ರಾಣ ಹಾನಿಯನ್ನು ನುರಿತ ಕೌಶಲ್ಯದಿಂದತಡೆಯಬಹುದು ಎಂದು ಹೇಳಿದರು.

ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣ  ಪೂರ್ವದಲ್ಲಿ ಅಗ್ನಿಶಾಮಕ ಇಲಾಖೆಯಿಂದನೀಡಲಾಗುವ ನಿರಾಪೇಕ್ಷಣಾ ಪತ್ರ, ಬೆಂಕಿ ಆಕಸ್ಮಿಕದ ತುರ್ತು ಕರೆಗೆ ಪ್ರತಿಕ್ರಿಯೆ,  ಅಪಘಾತ, ನೈಸರ್ಗಿಕ ವಿಪತ್ತು, ರಕ್ಷಣಾಕಾರ್ಯ ಮತ್ತು ವಿಪತ್ತು ನಿರ್ವಹಣೆಯ  ತುರ್ತು ಕರೆಗಳಿಗೆ ಪ್ರತಿಕ್ರಿಯೆ, ಪಟಾಕಿಗಳ ಲೈಸನ್ಸ್‌ಗಾಗಿ ನಿರಾಪೇಕ್ಷಣಾ ಪತ್ರಗಳು ಕಾರ್ಯವು ನಮ್ಮ ವ್ಯಾಪ್ತಿಗೆ ಬರುತ್ತವೆ ಎಂದರು.

ಮುಖ್ಯಶಿಕ್ಷಕ ವೆಂಕಟೇಶ ಗುಡೆಪ್ಪನವರ ಮಾತನಾಡಿ, ಅಗ್ನಿ ಅವಘಡಗಳನ್ನು, ಪ್ರಾಕೃತಿಕ ವಿಕೋಪಗಳನ್ನು ತಡೆದು ಪ್ರಾಣ ಹಾನಿಯಾಗದ ರೀತಿಯಲ್ಲಿ ಜೀವದ ಹಂಗನ್ನು ಪಣಕ್ಕಿಟ್ಟು ಸಾರ್ವಜನಿಕರ ಹಾಗೂ ಪ್ರಾಣಿ ಪಕ್ಷಿ ಸಂಕುಲಕ್ಕೆ ವಿಶೇಷ ಸೇವೆ ನೀಡುವ ಅಗ್ನಿಶಾಮಕ ದಳದ ಕಾರ್ಯ ಶ್ಲಾಘನೀಯ ಎಂದರು.

ಇದನ್ನೂ ಓದಿ:ಕಾರವಾರ ಜಿಪಂಗೆ ಶಾಲಿನಾ ಸಿದ್ದಿ ಏಕ್‌ ದಿನ್‌ ಕಾ ಸಿಇಒ

Advertisement

ಆಡಳಿತಾ ಧಿಕಾರಿ ಮಲ್ಲು ಕಳ್ಳೆನ್ನವರ, ಅಗ್ನಿ ಶ್ಯಾಮಕದಳದ ರಜಾಕ ಮಂಟೂರ, ಎ.ಬಿ. ಹಿರೇಮಠ, ಎಂ.ವೈ. ಪಾಟೀಲ, ಎಸ್‌.ಎ. ಹಿರೇಮಠ, ಜೆ.ಐ. ಮಠ, ಗಂಗಾ ಕಡಕೋಳ, ಪ್ರೇಮಾ ವಿ.ಎಂ., ಎ.ಎಚ್‌. ಪಲ್ಲೇದ, ಎಚ್‌. ಎನ್‌. ಬಡಿಗೇರ, ಎಲ್‌.ಕೆ. ಕಿತ್ತೂರ, ಶಾಂತಾ ಒಂಟಗೋಡಿ, ಸುಮನ್‌ ಕೊಡಗ, ಮೇಘಾ ಗಣಿ, ಶೃತಿ ಗೌಡಣ್ಣವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next