Advertisement

ಚನ್ನಮ್ಮ ಪಡೆಯಿಂದ ಅಣಕು ಪ್ರದರ್ಶನ

02:41 PM Dec 09, 2019 | Team Udayavani |

ಗದಗ: ಇಲ್ಲಿನ ಎಸ್‌.ಎಂ. ಕೃಷ್ಣಾ ನಗರದ ಸರಕಾರಿ ಪ್ರೌಢ ಶಾಲೆಯ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಗದಗ ಶಹರ ಪೊಲೀಸ್‌ ಠಾಣೆಗೆ ಭೇಟಿ ನೀಡಿ, ಪೊಲೀಸ್‌ ಇಲಾಖೆ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.

Advertisement

ಇದೇ ಸಂದರ್ಭದಲ್ಲಿ ಪೊಲೀಸ್‌ ಇಲಾಖೆಯ ಚನ್ನಮ್ಮ ಮಹಿಳಾ ತಂಡ ಎನ್ನೆಸ್ಸೆಸ್‌ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ಕುರಿತು ಅಣಕು ಪ್ರದರ್ಶನ ನೀಡಿದರು.

ಜಿಲ್ಲಾ ಮಹಿಳಾ ಪೊಲೀಸ್‌ ಚನ್ನಮ್ಮ ಪಡೆಯ ಮುಖ್ಯಸ್ಥೆ ಮಾಲತಿ ಶೀಗಿಹಳ್ಳಿ ಮಾತನಾಡಿ, ವಿಶೇಷವಾಗಿ ಯುವತಿಯರು ಕರಾಟೆ, ಆತ್ಮ ರಕ್ಷಣಾ ಕಲೆ ಅರಿತಿರಬೇಕು. ಇಂದಿನ ದಿನಗಳಲ್ಲಿ ಮಹಿಳೆಯರು, ಯುವತಿಯರು ಹಾಗೂ ವಿದ್ಯಾರ್ಥಿನಿಯರು ಏಕಾಂಗಿಯಾಗಿ ಸಂಚರಿಸುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಧರಿಸಿದ ಆಭರಣ ಕಳ್ಳತನ, ಹಲ್ಲೆ, ಕೊಲೆ, ಅತ್ಯಾಚಾರ ಮಾಡುವ ಅಪಾಯದ ಸನ್ನಿವೇಶಗಳು ಎದುರಾಗಬಹುದು.

ಅಂತಹ ಸಂದರ್ಭಗಳಲ್ಲಿ ಮಹಿಳೆಯರು ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಅನಿವಾರ್ಯ. ಅದಕ್ಕಾಗಿ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಂಡಿರಬೇಕು ಎಂದು ಸಲಹೆ ನೀಡಿದರು. ಗದಗ ಶಹರ ಪೊಲೀಸ್‌ ಠಾಣೆ ಪಿಎಸ್‌ಐ ಉಮಾ ವಗ್ಗರ ಮಾತನಾಡಿ, ದುಷ್ಟ ವ್ಯಕ್ತಿಗಳಿಂದ ರಕ್ಷಿಸಿಕೊಳ್ಳಲು ಮಹಿಳೆಯರು ಸ್ವಯಂ ರಕ್ಷಣಾ ಕಲೆಗಳನ್ನು ಕರಗತ ಮಾಡಿಕೊಳ್ಳುವುದು ಅವಶ್ಯ ಎಂದರು. ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಎನ್ನೆಸ್ಸೆಸ್‌ ಅಧಿಕಾರಿ ಮಂಜುಳಾ ಚುಂಚಾ, ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next