ರಬಕವಿ-ಬನಹಟ್ಟಿ: ರಾಜ್ಯಶಾಸ್ತ್ರ ವಿಭಾಗವು ಕಾನೂನಿಗೆ ಮತ್ತು ಸಂವಿಧಾನಕ್ಕೆ ಅತ್ಯಂತ ಸಮೀಪ ಇರುವುದರಿಂದ ವಿದ್ಯಾರ್ಥಿಗಳು ಸಂವಿಧಾನ ಮತ್ತು ಕಾನೂನು ಪುಸ್ತಕಗಳನ್ನು ಕಡ್ಡಾಯವಾಗಿ ಓದಬೇಕು. ಅಣುಕ ಸಂಸತ್ತಿನಂತಹ ಕಾರ್ಯಕ್ರಮಗಳಿಂದ ಮುಂದಿನ ದಿನಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಸಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವೆ ಉಮಾಶ್ರೀ ತಿಳಿಸಿದರು.
ಅವರು ಮಂಗಳವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆದ ಅಣುಕ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ದೇಶದ ಜನರಿಗೆ ಎಲ್ಲವನ್ನೂ ನೀಡುತ್ತದೆ ಮತ್ತು ನಿಯಂತ್ರಣ ಮಾಡುತ್ತದೆ. ನಾವೆಲ್ಲರೂ ಶಾಸನ ಸಭೆಗಳ ಘನತೆ ಗೌರವಗಳನ್ನು ಹೆಚ್ಚಿಸಬೇಕು. ಶಾಸನ ಸಭೆಗಳು ನಿಯಮದಂತೆ ನಡೆಯುತ್ತದೆ. ಶಾಸನ ಸಭೆಯಲ್ಲಿ ಮಾತನಾಡುವಾಗ ನಾವು ಬಳಸುವ ಭಾಷೆ ಶುದ್ಧವಾಗಿರಬೇಕು. ಭಾರತದ ಸಂವಿಧಾನ ಹೊಂದಿಕೊಳ್ಳುವ ಸಂವಿಧಾನವಾಗಿದೆ. ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ತಿಳಿಸಿದರು.
ಈ ಸಂದರ್ಭದಲ್ಲಿ ಅಣುಕು ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಪಿಎಸ್‌ಐ ಅಕ್ರಮ ವ್ಯವಹಾರ, ಕೆರೆಗಳ ಹೂಳು ತೆಗೆಯುವುದು, ರಾಜ್ಯ ನೀರಾವರಿ ಸಮಸ್ಯೆಗಳು, ರೈತರ ಸಮಸ್ಯೆಗಳು ಸೇರಿದಂತೆ ಹಣಕಾಸು ಸಚಿವೆ ಭಾಗ್ಯಶ್ರೀ ಮುಗಳಖೋಡ ಮಂಡಿಸಿದ ಬಜೆಟ್ ಗಮನ ಸೆಳೆಯಿತು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮನೋಹರ ಶಿರಹಟ್ಟಿ ಮಾತನಾಡಿದರು.
ಜನತಾ ಶಿಕ್ಷಣ ಸಂಘದ ನಿರ್ದೇಶಕ ಡಾ.ವಿ.ಆರ್.ಕುಳ್ಳಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಶಂಕರ ಸೋರಗಾವಿ, ದುಂಡಪ್ಪ ಮಾಚಕನೂರ, ಗಂಗಾಧರ ಕೊಕಟನೂರ, ಓಂಪ್ರಕಾಶ ಕಾಬರಾ, ಭೀಮಶಿ ಕುಲಗೋಡ, ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್, ಡಾ.ಪ್ರಕಾಶ ಕೆಂಗನಾಳೆ, ವೈ.ಬಿ.ಕೊರಡೂರ, ಡಾ.ಸುರೇಶ ನಡೋಣಿ,ರಾಜು ಭದ್ರನವರ, ಬಸವರಾಜ ಗುಡೋಡಗಿ, ರಾಹುಲ್ ಕಲಾಲ ಇದ್ದರು.
ಕಾರ್ಯಕ್ರಮದಲ್ಲಿ ಮಾಳಪ್ಪ ಬಾಗಿ, ಐಶ್ವರ್ಯ ರಜಪೂತ, ವಿನಾಯಕ ಸವದಿ, ಆದರ್ಶ ಗುಡಗುಂಟಿಮಠ, ಹನಮಂತ ಹೂಗಾರ, ಶ್ರೀಶೈಲ ಮುಗಳಖೋಡ, ಶಂಕ್ರಯ್ಯ ವಸ್ತ್ರದ, ಸತೀಷ ಸೈದಾಪುರ, ಸುಶ್ಮಿತಾ ಪಾಟೀಲ, ಕಾಡಪ್ಪ ಹಂಜಿ, ನಿಖಿತಾ ಆಲಗೂರ, ಭವಾನಿ ಕಾಕಡೆ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಐ.ಜಿ.ಫಣಿಬಂದ ಪ್ರಾರ್ಥಿಸಿದರು. ಸುರೇಶ ನಡೋಣಿ ಸ್ವಾಗತಿಸಿದರು. ಕನ್ಯಾಕುಮಾರಿ ಹೂಗಾರ ನಿರೂಪಿಸಿದರು. ವಿ.ವೈ.ಪಾಟೀಲ ವಂದಿಸಿದರು.