Advertisement

ಗಡಿ ನುಸುಳಲು ಉಗ್ರರ ಯತ್ನ : ‘ಉರಿ’ಯಲ್ಲಿ ಮೊಬೈಲ್-ಇಂಟರ್ನೆಟ್ ಸೇವೆ ಸ್ಥಗಿತ

09:06 PM Sep 20, 2021 | Team Udayavani |

ಶ್ರೀನಗರ : ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಉಗ್ರರ ಗುಂಪೊಂದು ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ ಹಿನ್ನೆಲೆ ಜಮ್ಮು ಮತ್ತು ಕಾಶ್ಮಿರದ ಉರಿ ಪ್ರದೇಶಲ್ಲಿ ಇಂಟರ್ನೆಟ್ ಹಾಗೂ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಉರಿ ಸೆಕ್ಟೆರ್‍ ನ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ತಂಡವೊಂದು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಭಾರತದ ಒಳಗೆ ನುಸುಳಲು ಪ್ರಯತ್ನ ನಡೆಸಿದೆ. ಕಳೆದ 30 ಗಂಟೆಗಳಿಂದ ಉಗ್ರರ ಒಳನುಸುಳುವಿಕೆ ತಡೆಗೆ ನಮ್ಮ ಯೋಧರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಸೇನಾ ಕಮಾಂಡರ್ ಮಾಹಿತಿ ನೀಡಿದ್ದಾರೆ.

ಈ ವರ್ಷದ ಅವಧಿಯಲ್ಲಿ ಇದು ಉಗ್ರರ ಎರಡನೇ ಯತ್ನವಾಗಿ ಎಂದು ಸೇನಾ ಮೂಲಗಳು ತಿಳಿಸಿವೆ.

ಇನ್ನು ಕಳೆದ ಕೆಲ ದಿನಗಳ ಹಿಂದೆಯಷ್ಟೆ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ 6 ಜನ ಉಗ್ರರನ್ನು ಬಂಧಿಸಿದ್ದಾರೆ. ಇವರು ಪಾಕ್‍ ಸೇನೆಯಿಂದ ತರಬೇತಿ ಪಡೆದಿದ್ದು, ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರಿ ಸ್ಪೋಟ ನಡೆಸುವ ಹೊಂಚು ಹಾಕಿದ್ದರು. ದೆಹಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next