ಗಂಗಾವತಿ : ತಾಲ್ಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಹತ್ತಿರ ನಿರ್ಮಾಣ ಹಂತದ ಜಿಯೋ ಕಂಪನಿಯ ಮೊಬೈಲ್ ಟವರ್ ಬಿದ್ದು 7 ಜನರಿಗೆ ತೀವ್ರ ಗಾಯಗಳಾದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಹತ್ತಿರ ಆನೆಗುಂದಿ, ಹನುಮನಹಳ್ಳಿ ,ಸಣಾಪುರ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಮೊಬೈಲ್ ಟವರ್ ನಿರ್ಮಾಣ ಕಾರ್ಯವನ್ನು ಜಿಯೊ ಕಂಪನಿಯವರು ಕಳೆದ 1 ವಾರದಿಂದ ಮಾಡುತ್ತಿದಾರೆ. ಉತ್ತರ ಪ್ರದೇಶದ ಕಾರ್ಮಿಕರು ಈ ಟವರ್ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದು ಬುಧವಾರ ಮತ್ತು ಗುರುವಾರ ಬೀಸಿದ ಗಾಳಿ ಮಳೆಯಿಂದ ಟವರ್ ನಲ್ಲಿ ಕೊಂಚ ಅಸ್ತವ್ಯಸ್ತವಾಗಿತ್ತು.
ಗುರುವಾರ ಬೆಳಿಗ್ಗೆ ಟವರ್ ನಿರ್ಮಾಣಕ್ಕೆ ಕಾರ್ಮಿಕರು ಮೇಲೆ ಹತ್ತಿದ ಸಂದರ್ಭದಲ್ಲಿ ಕಬ್ಬಿಣದ ಸಲಾಕೆ ಜಾರಿಬಿದ್ದು ಟವರ್ ನೆಲಕ್ಕುರುಳಿದೆ. ಇದರಲ್ಲಿ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆನೆಗೊಂದಿ ಮತ್ತು ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಟವರ್ ಬಿದ್ದ ಪ್ರಕರಣದಲ್ಲಿ ಉತ್ತರಪ್ರದೇಶದ ಕಾರ್ಮಿಕರಾದ ಮುಕ್ತಾರ್ ,ನಾಸಿರ್, ಸಲ್ಮಾನ್ ನಜೀಬ್ ,ರಶೀದ್ ಹಾಗೂ ಮತ್ತಿಬ್ಬರು ಗಾಯಗೊಂಡಿದ್ದಾರೆ .
ಸ್ಥಳಕ್ಕೆ ಗ್ರಾಮೀಣ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು .
ಇದನ್ನೂ ಓದಿ : ಬ್ರ್ಯಾಂಡ್ ಬೆಂಗಳೂರು ಬಂದಿದ್ದು ದೇವೇಗೌಡರ ಕಾಲದಲ್ಲಿ: ಎಸ್ಎಂಕೆ ಗೆ ಹೆಚ್ ಡಿಕೆ ಟಾಂಗ್