ಬೆಂಗಳೂರು: ಕೆಲಸ ಮಾಡುತ್ತಿದ್ದ ಸಂಸ್ಥೆ ಯಲ್ಲೇ ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯನ್ನು ಬ್ಯಾಟರಾ ಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಪಿ.ಅಗ್ರಹಾರ ನಿವಾಸಿ ರಾಜೇಶ್ (40) ಬಂಧಿತ. ಆರೋಪಿಯಿಂದ 6.40 ಲಕ್ಷ ರೂ. ಮೌಲ್ಯದ 64 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಈತ ಮೈಸೂರು ರಸ್ತೆಯ ಬಿಎಚ್‌ಇಎಲ್ ಮುಂದಿರುವ ಕ್ರೋಮಾ ಆಟೋಮೋಟಿವ್ ಕಂಪನಿಯಲ್ಲಿ ಸೇಲ್ಸ್ ಆಫೀಸರ್ ಆಗಿದ್ದ. ಈ ಮಧ್ಯೆ ಕಂಪನಿಯ ಉಗ್ರಾಣದಲ್ಲಿ ವಿವಿಧ ಕಂಪನಿಯ ಮೊಬೈಲ್ ಶೇಖರಿಸಿಡಲಾಗಿತ್ತು. ಆದರೆ, ಆರೋಪಿ ಆಗಾಗ್ಗೆ ಒಂದೆರಡು ಮೊಬೈಲ್ ಕದ್ದು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ. ಇತ್ತೀಚೆಗೆ ಲೆಕ್ಕ ಪರಿಶೀಲನೆ ವೇಳೆ ಮೊಬೈಲ್‌ಗಳ ವ್ಯತ್ಯಾಸ ಕಂಡು ಬಂದಿದೆ.
ಹೀಗಾಗಿ ದೂರುದಾರ ಮಕ್‌ಬೂಲ್ ಅಹಮದ್ ಎಂಬುವರು ಆರೋಪಿಗೆ ಕರೆ ಮಾಡಿ ಮೊಬೈಲ್ ವ್ಯತ್ಯಾಸವಾಗಿರುವ ಬಗ್ಗೆ ಮಾಹಿತಿ ಕೇಳಿದ್ದು, ಉಗ್ರಾಣಕ್ಕೆ ಬರುವಂತೆ ಸೂಚಿಸಿದ್ದರು. ಆದರೆ, ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಹೀಗಾಗಿ ಠಾಣೆಯಲ್ಲಿ ದೂರು ನೀಡಿ ದ್ದರು. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ನಕಲಿ ಬಿಲ್ ಸೃಷ್ಟಿಸಲು ವಿಫಲ ಯತ್ನ: ಆರೋಪಿ ಕಳವು ಮೊಬೈಲ್‌ಗಳನ್ನು ಮಾರಾಟಕ್ಕೆ ಮುಂದಾಗಿದ್ದ. ಆದರೆ, ಬಿಲ್ ಇಲ್ಲದ ಮೊಬೈಲ್‌ಗಳ ಖರೀದಿಗೆ ಸಾರ್ವಜನಿಕರು ಹಿಂದೇಟು ಹಾಕಿದ್ದರು. ಮತ್ತೂಂದೆಡೆ ಪ್ರತಿ ಮೊಬೈಲ್‌ಗಳಿಗೆ ನಕಲಿ ಬಿಲ್ ಸೃಷ್ಟಿಸಿ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ. ಅಷ್ಟರಲ್ಲಿ ಆರೋಪಿಯನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಹೇಳಿದರು.
ಬ್ಯಾಟರಾಯನಪುರ ಠಾಣಾಧಿಕಾರಿ ನಿಂಗನಗೌಡ ಎ.ಪಾಟೀಲ, ಪಿಎಸ್‌ಐ ವೀರಭದ್ರಪ್ಪ ತಂಡ ಕಾರ್ಯಾಚರಣೆ ನಡೆಸಿದೆ.