Advertisement
ಮನಪಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಸಂಖ್ಯೆಯ ಬಗ್ಗೆ ವರದಿ ಸಲ್ಲಿಸುವಂತೆ ಕೇಳಲಾಗಿದ್ದು, ಸಮಿತಿಯನ್ನು ರಚಿಸಲಾಗುವುದು ಎಂದು ಮೇಯರ್ ಜ್ಯೋತ್ಸಾ$° ಹಸ್ನಾಲೆ ಮಾಹಿತಿ ನೀಡಿದ್ದಾರೆ.
Related Articles
Advertisement
ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಕಳೆದ ಒಂದೂವರೆ ವರ್ಷ
ಗಳಿಂದ ಶಾಲೆಗಳನ್ನು ಮುಚ್ಚಲಾಗಿದೆ. ಕೊರೊನಾದ ಸಂಭವನೀಯ 3ನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ತಿಳಿಸಲಾಗಿದೆ. ಇದರಿಂದ ವ್ಯಾಕ್ಸಿನೇಶನ್ ಪೂರ್ಣಗೊಳ್ಳುವವರೆಗೆ ಶಾಲೆಯನ್ನು ಪ್ರಾರಂಭಿಸಲಾಗುವುದಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್‌ನಲ್ಲಿ ಹೊಸ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಜೂ. 7ರಿಂದ ಶಾಲೆಗಳನ್ನು ಪ್ರಾರಂಭಿಸಲು ರಾಜ್ಯ ಸರಕಾರವು ಸೂಚನೆ ನೀಡಿದೆ. ಆದರೆ ಮನಪಾ ಶಾಲೆ
ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾಮಗ್ರಿಗಳ ಕೊರತೆ ಇದ್ದು, ಆಡಳಿತದ ನಿರ್ಲಕ್ಷ éದಿಂದಾಗಿ ಶಾಲೆ ಗಳನ್ನು ಇನ್ನೂ ಪ್ರಾರಂಭಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಬಿಜೆಪಿ ಗಂಭೀರ ಆರೋಪ
ವಿದ್ಯಾರ್ಥಿಗಳ ಸಂಖ್ಯೆಯನ್ನು ನಿರ್ಧರಿಸುವ ಸಮೀಕ್ಷೆ ನಡೆಸುವ ಮತ್ತು ಆನ್‌ಲೈನ್ ತರಗತಿಗಳನ್ನು ಭರ್ತಿ ಮಾಡುವ ಕಾರ್ಯಗಳು ಇನ್ನೂ ಪೂರ್ಣ ಗೊಂಡಿಲ್ಲವಾದ್ದರಿಂದ ಶೈಕ್ಷಣಿಕ ವರ್ಷದ ಶಾಲೆಗಳು ಇನ್ನೂ ಮುಚ್ಚಲ್ಪಟ್ಟಿವೆ ಎಂದು ಆಡಳಿತ ಪಕ್ಷದ ಬಿಜೆಪಿ ಕಾರ್ಪೊರೇಟರ್ ಧ್ರುವಿ ಕಿಶೋರ್ ಪಾಟೀಲ್ ಸಾಮಾನ್ಯ ಮಂಡಳಿಯ ಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಈ ಮಧ್ಯೆ ಶಾಲೆ ತೆರೆದಿರು ತ್ತದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಪ್ರಸ್ತುತ ಹೊಸ ಪ್ರವೇಶಗಳು ನಡೆಯುತ್ತಿವೆ ಎಂದು ಶಿಕ್ಷಣಾಧಿಕಾರಿ ಊರ್ಮಿಳಾ ಪಾರ್ಧೆ ಹೇಳಿದ್ದಾರೆ.