Advertisement

ಹಲ್ಲೆಗೆ ಕಾರಣವಾದ ಆ ಒಂದು ಮೊಬೈಲ್‌ ಸ್ಟೇಟಸ್‌

11:42 AM Feb 10, 2022 | Team Udayavani |

ಮಲೇಬೆನ್ನೂರು : ರಾಜ್ಯಾದ್ಯಂತ ಹಿಜಾಬ್‌ ಮತ್ತು ಕೇಸರಿ ಶಾಲಿನ ಗಲಾಟೆ ಮಲೇಬೆನ್ನೂರಿಗೂ ಹಬ್ಬಿದ್ದು, ಯುವಕನೊಬ್ಬನ ಮೇಲೆ ಹಲ್ಲೆ ನಡೆದ ಘಟನೆ ನಡೆದಿದ್ದು, ದೂರು-ಪ್ರತಿದೂರು
ದಾಖಲಾಗಿದೆ.

Advertisement

ಯುವಕನೊಬ್ಬ ತನ್ನ ಮೊಬೈಲ್‌ನಲ್ಲಿ ಅವಹೇಳನಕಾರಿ ಸ್ಟೇಟಸ್‌ ಇಟ್ಟಿದ್ದೇ ಹಲ್ಲೆಗೆ ಕಾರಣ ಎನ್ನಲಾಗಿದೆ. ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಸಿಸಿ ಕ್ಯಾಮೆರಾ ಸಹಾಯದಿಂದ ಉಳಿದವರ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಹಲ್ಲೆಗೊಳಗಾದ ಯುವಕನ ಬಲಪಕ್ಕೆಗೆ ಚೂಪಾದ ಆಯುಧದಿಂದ ತಿವಿಯಲಾಗಿದ್ದು, ಆತನಿಗೆ ಕೂಡಲೇ ಮಲೇಬೆನ್ನೂರು ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ
ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ. ಘಟನಾ ಸ್ಥಳಕ್ಕೆ ಕೆಲವೇ ನಿಮಿಷಗಳಲ್ಲಿ ಆಗಮಿಸಿದ ಪೊಲೀಸರು ಕೆಲವು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಗಲಾಟೆ ನಿಯಂತ್ರಿಸಲು ಹೋಗಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಅಂಥವರ ಮೇಲೆ ಕೇಸ್‌ ದಾಖಲಿಸಲಾಗುವುದು ಎಂದು ಪಿಎಸ್‌ಐ ರವಿಕುಮಾರ್‌ ತಿಳಿಸಿದ್ದಾರೆ. ನ್ಯಾಯಾಲಯದ ತೀರ್ಮಾನ ಬರುವವರೆಗೂ ಸಾರ್ವಜನಿಕರು ಶಾಂತಿ, ತಾಳ್ಮೆಯಿಂದ
ಇರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳನ್ನು ನಂಬಬೇಡಿ. ಏನೇ ಇದ್ದರೂ ಪೊಲೀಸ್‌ ಠಾಣೆಗೆ ಬಂದು ದೂರು ದಾಖಲಿಸಬೇಕು. ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದರು.

ಇದನ್ನೂ ಓದಿ : ಷಷ್ಟ್ಯಬ್ದ ಸಂಭ್ರಮದೊಂದಿಗೆ ಸಮಾಜಮುಖಿ ಕಾರ್ಯ: ರೋಹಿತ್‌ ಶೆಟ್ಟಿ  ನಗ್ರಿಗುತ್ತು

Advertisement

ಹರಿಹರ ವೃತ್ತ ನಿರೀಕ್ಷಕ ಸತೀಶ್‌ಕುಮಾರ್‌ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹಲ್ಲೆಗೊಳಗಾದ ಯುವಕನ ಹೇಳಿಕೆ ಪಡೆದುಕೊಂಡರು. ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ವೀರಬಸಪ್ಪ ಕುಸಲಾಪುರ್‌ ಇದ್ದರು. ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಉಪತಹಶೀಲ್ದಾರ್‌ ಆರ್‌.ರವಿ, ಪುರಸಭೆ ಮುಖ್ಯಾಧಿಕಾರಿ ರುಕ್ಮಿಣಿ ದೊಡ್ಡಮನಿ ಘಟನಾ ಸ್ಥಳಕ್ಕೆ ಭೇಟಿ
ನೀಡಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಗುರುವಾರದ ಸಂತೆಯನ್ನು ರದ್ದುಪಡಿಸಲಾಗಿದೆ.

ಈ ಘಟನೆ ಬಗ್ಗೆ ದೂರು-ಪ್ರತಿದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಮೀಸಲು ಮತ್ತು ರಾಜ್ಯ ಮೀಸಲು ತುಕಡಿಗಳನ್ನು ಪಟ್ಟಣದಲ್ಲಿ
ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next