Advertisement
ನಿದ್ದೆಗೆಡಿಸಿದ ತ್ತೈಮಾಸಿಕ ವರದಿಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಪೊರೆಟ್ ಕಂಪೆನಿಗಳ ಲಾಭ-ನಷ್ಟ ಮಾರಾಟ ಕುರಿತ ವರದಿ ಹೊರಬರುತ್ತದೆ. ಅದರಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿ ಎಷ್ಟು ವಹಿವಾಟು ನಡೆದಿತ್ತು. ಈ ವರ್ಷ ಎಷ್ಟು ವಹಿವಾಟು ನಡೆದಿದೆ ಎಂಬುದರ ಆಧಾರದ ಮೇಲೆ ಕಂಪೆನಿಯ ಬೆಳವಣಿಗೆಯನ್ನು ಅಳೆಯಲಾಗುತ್ತದೆ. ಅದೇ ರೀತಿ ಇಂಟರ್‌ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ಮೊಬೈಲ್ ಕಂಪೆನಿಗಳ ವಹಿವಾಟನ್ನು ಸಂಗ್ರಹಿಸಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡುತ್ತದೆ. ಪ್ರತಿ ವರ್ಷ ಹೆಚ್ಚು ಕಡಿಮೆ ಅದದೇ ಕಂಪೆನಿಗಳು ಯಥಾ ಸ್ಥಾನದಲ್ಲಿದ್ದ ವರದಿ ಬರುತ್ತಿದ್ದು, 2018ರ ಎರಡನೇ ತ್ತೈಮಾಸಿಕ ವಹಿವಾಟಿನ ಅಂಕಿ ಅಂಶ ಆಪಲ್ ಹಾಗೂ ಸ್ಯಾಮ್ ಸಂಗ್‌ನ ನಿದ್ದೆಗೆಡಿಸದೇ ಬಿಟ್ಟಿಲ್ಲ.
Related Articles
Advertisement
ಶ್ರೀಮಂತರೆಂದರೆ ಅವರ ಬಳಿ ಆಪಲ್ ಐಫೋನ್ ಮಾತ್ರ ಇರಬೇಕು, ಇನ್ನೊಂದು ಬ್ರಾಂಡ್‌ನ ಫೋನ್ ಇಟ್ಟುಕೊಂಡರೆ ಅದು ಘನತೆಗೆ ಕುಂದು ಎನ್ನುವ ಒಣ ಪ್ರಸ್ಟೀಜ್ ಅನ್ನು ಆಪಲ್ ಮೂಡಿಸಿತ್ತು. ಆದರೆ ಅದಕ್ಕೆ ನೀಡುವ ಬೆಲೆಗೆ ಹೋಲಿಸಿದರೆ ಆಪಲ್‌ನಲ್ಲಿ ದೊರಕುವ ಸೌಲಭ್ಯಗಳು ಕಡಿಮೆ. ಆಂಡ್ರಾಯ್ಡ ಫೋನ್‌ಗಳಲ್ಲಿರುಷ್ಟು ಫೀಚರ್‌ಗಳು ಸವಲತ್ತುಗಳು ಆಪಲ್‌ನಲ್ಲಿಲ್ಲ. ಆಪಲ್ ಫೋನ್ ಹೊಂದಿರುವವರು, ಆಪ್‌ಗ್ಳಿಗೆ, ಹಾಡುಗಳಿಗೆ ಹಣ ತೆರಲೇಬೇಕು. ಜನ, ಆಪಲ್‌ಗೆ ಬೆನ್ನು ಮಾಡಿ ನಿಲ್ಲಲು ಇದೂ ಒಂದು ಕಾರಣ.
ಹುವಾವೇ ನಾಗಾಲೋಟಕ್ಕೆ ಕಾರಣ?ಯಾವುದೇ ವಸ್ತುವಾಗಲೀ ಅದರ ತಯಾರಿಕಾ ವೆಚ್ಚ ಮತ್ತು ಅಲ್ಪ ಲಾಭ, ಗ್ರಾಹಕರ ಹಿತವನ್ನು ಮುಖ್ಯವಾಗಿರಿಸಿಕೊಂಡು ದರ ಇಡಬೇಕು. ಆದರೆ ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳ ತಯಾರಿಕಾ ವೆಚ್ಚಕ್ಕೂ ಅಂತಿಮ ದರಕ್ಕೂ ಬಹಳ ವ್ಯತ್ಯಾಸವಿದೆ. ತನಿಖಾ ಕಂಪೆನಿಯೊಂದು 60 ಸಾವಿರ ಬೆಲೆಯ ಆಪಲ್ ಫೋನ್‌ನ ತಯಾರಿಕಾ ವೆಚ್ಚ 20 ಸಾವಿರಕ್ಕೂ ಕಡಿಮೆ ಎಂಬ ಗುಟ್ಟನ್ನು ಬಯಲು ಮಾಡಿತ್ತು! ಚೀನಾದ ಹುವೈ, ಒನ್‌ಪ್ಲಸ್, ಶಿಯೋಮಿ ಕಂಪೆನಿಗಳು ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಫೀಚರ್ ಗಳಿರುವ ಸ್ಮಾರ್ಟ್‌ಫೋನ್‌ಗಳನ್ನು ನೀಡತೊಡಗಿದವು. 70 ಸಾವಿರದ ಆಪಲ್, ಸ್ಯಾಮ್‌ಸಂಗ್ ಫೋನ್‌ಗಳಲ್ಲಿರುವುದಕ್ಕಿಂತಲೂ ಹೆಚ್ಚಿನ ಸವಲತ್ತಗಳನ್ನು 30-35 ಸಾವಿರಕ್ಕೇ ತಮ್ಮ ಫ್ಲಾಗ್‌ಶಿಪ್ ಫೋನ್‌ಗಳಲ್ಲಿ ನೀಡತೊಡಗಿದವು. ಇನ್ನು ಮಿಡಲ್ ರೇಂಜ್ ಮೊಬೈಲ್ ಮಾರುಕಟ್ಟೆಯಲ್ಲಂತೂ ಶಿಯೋಮಿ ಮತ್ತು ಹುವೈ ಆನರ್ ಬ್ರಾಂಡ್‌ಗಳು ಸಂಚಲನ ಉಂಟುಮಾಡಿದವು. ಸ್ಯಾಮ್‌ಸಂಗ್ 25 ಸಾವಿರಕ್ಕೆ ನೀಡುವ ಮೊಬೈಲ್ ಗಳನ್ನು ಇವು 10-12 ಸಾವಿರಕ್ಕೇ ನೀಡತೊಡಗಿವೆ. ಹಾಗೆಂದು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಸ್ಯಾಮ್‌ಸಂಗ್ ಕಂಪನಿ 25 ಸಾವಿರದ ಮೊಬೈಲ್‌ಗಳಲ್ಲಿ ಹಾಕುವ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಅನ್ನು ಈ ಕಂಪೆನಿಗಳು 10 ಸಾವಿರದ ಫೋನ್‌ಗಳಿಗೆ ಹಾಕುತ್ತಿವೆ. ಅಲ್ಲದೇ ನಂ. 1 ಸ್ಥಾನದಲ್ಲಿರುವ ಸ್ಯಾಮ್ ಸಂಗ್, ಚೀನಾ ಕಂಪೆನಿಗಳು ಸಂಶೋಧಿಸಿದ ಫೀಚರ್‌ಗಳನ್ನು ಒಂದೆರಡು ವರ್ಷ ಕಳೆದ ನಂತರ ತಾನು ಅಳವಡಿಸಿಕೊಳ್ಳುತ್ತಿದೆ! ಜಾಹೀರಾತು ಹೆಚ್ಚಿಲ್ಲದೇ ತಮ್ಮ ವಸ್ತುಗಳಲ್ಲಿ ಅತ್ಯುತ್ತಮ ಗುಣಮಟ್ಟ ಇಟ್ಟು, ಆ ಕಾರಣದಿಂದಲೇ ಬಾಯಿಂದ ಬಾಯಿಗೆ ಹರಡಿಯೇ ಚೀನಾದ ಈ ಮೂರು ಕಂಪೆನಿಗಳು ಜನಪ್ರಿಯವಾಗಿವೆ. ವರ್ಷವೊಂದಕ್ಕೆ ಒಂದೇ ಫೋನ್ ಬಿಡುಗಡೆ ಮಾಡುವ ಒನ್‌ಪ್ಲಸ್ ಹಾಗೂ ವರ್ಷಕ್ಕೆ ಹಲವಾರು ಮಾಡೆಲ್‌ಗಳ ಫೋನ್‌ಗಳನ್ನು ಬಿಡುವ ಹುವೈ ಪ್ರೀಮಿಯಂ ಫೋನ್ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಮಾಡುತ್ತಿವೆ. ಮೊಬೈಲ್‌ಗಳ ಬಗ್ಗೆ ಆಳವಾಗಿ ಬಲ್ಲವರು, ಟೆಕಿಗಳು, ಪ್ರಸ್ಟೀಜ್ ಬೇಡ, ಉತ್ತಮ ಮೊಬೈಲ್ ಬೇಕು ಎನ್ನುವವರು ಒನ್‌ಪ್ಲಸ್ ಅಥವಾ ಹುವೈ ಆನರ್, ಶಿಯೋಮಿ ಫೋನ್‌ಗಳನ್ನು ಕೊಳ್ಳುತ್ತಿದ್ದಾರೆ. ಚೀನಾದ ಈ ಕಂಪೆನಿಗಳು ಯೂರೋಪಿಯನ್, ಲ್ಯಾಟಿನ್ ಅಮೆರಿಕಾ, ರಷ್ಯಾ ಮುಂತಾದ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗುತ್ತಿವೆ. ಅಮೆರಿಕಾ ಮಾತ್ರ ತನ್ನ ತವರಿನ ಆಪಲ್ ಅನ್ನು ಉಳಿಸುವ ಕಾರಣಕ್ಕಾಗಿ ತನ್ನ ದೇಶದಲ್ಲಿ ಚೀನಾದ ಮೊಬೈಲ್ ಕಂಪೆನಿಗಳ ಮಾರಾಟಕ್ಕೆ ಅವಕಾಶ ನೀಡುತ್ತಿಲ್ಲ. ಯು.ಎಸ್. ಹೊರತುಪಡಿಸಿಯೂ ಈ ಕಂಪೆನಿಗಳು ಆಪಲ್ ಹಿಂದಿಕ್ಕಿ ಮುನ್ನಡೆಯುತ್ತಿರುವುದು ಕಡಿಮೆ ಸಾಧನೆಯೇನೂ ಅಲ್ಲ. ಏಷ್ಯಾದ ಈ ಕಂಪೆನಿಗಳು ತಂತ್ರಜ್ಞಾನದಲ್ಲಿ ದೊಡ್ಡಣ್ಣ ಎಂಬ ಹಮ್ಮಿನಿಂದ ಬೀಗುತ್ತಿರುವ ಯು.ಎಸ್. ಕಂಪೆನಿಯನ್ನು ಬಗ್ಗು ಬಡಿಯಲು ಸಜ್ಜಾಗಿರುವುದು ಗುಣಮಟ್ಟದ ಕಾರಣದಿಂದಲೇ. ಅಂತಿಮವಾಗಿ ಗುಣಮಟ್ಟ ಹಾಗೂ ನ್ಯಾಯವಾದ ಬೆಲೆ ಮಾತ್ರ ಗ್ರಾಹಕರನ್ನು ಸೆಳೆಯಲು ಸಾಧ್ಯ, ಜಾಹೀರಾತಲ್ಲ ಎಂಬುದನ್ನು ಈ ಕಂಪೆನಿಗಳು ಸಾಧಿಸಿ ತೋರಿಸುತ್ತಿವೆ. ಗ್ರಾಹಕ ಸ್ನೇಹಿಯಾದ ಇಂಥ ಬೆಳವಣಿಗೆಗಳು ನಡೆಯುವುದು ಯಾವತ್ತಿಗೂ ಒಳ್ಳೆಯದೇ. – ಕೆ.ಎಸ್. ಬನಶಂಕರ ಆರಾಧ್ಯ