Advertisement
ಈ ಹೊಸ ನಿಯಮ ಡಿಸೆಂಬರ್ 16 ರಿಂದ ಜಾರಿಗೆ ಬರಲಿದ್ದು, ಇದರಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲಗಳಾಗಲಿವೆ ಎಂದು ಟೆಲಿಕಾಂ ನಿಯಂತ್ರಣ ಅಥಾರಿಟಿ (ಟ್ರಾಯ್) ಅಭಿಪ್ರಾಯಪಟ್ಟಿದೆ. ಅಲ್ಲದೇ, ಒಂದು ವಲಯದಿಂದ ಇನ್ನೊಂದು ವಲಯಕ್ಕೆ ಪೋರ್ಟಿಂಗ್ ಕೆಲಸವನ್ನು ಒಂದು ವಾರದ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎನ್ನುವ ನಿಯಮವನ್ನು ಟೆಲೆಕಾಂ ಸೆಕ್ಟರ್ ಮೊಬೈಲ್ ಸಂಸ್ಥೆಗಳಿಗೆ ಹಾಕಿದೆ.
– ಪೋರ್ಟಬಿಲಿಟಿ ಮಾಡಬೇಕೆಂದು ಇಚ್ಛಿಸುವ ಗ್ರಾಹಕರು ಪೋಸ್ಟ್ ಪೈಡ್ ಮೊಬೈಲ್ ಸಂಪರ್ಕದ ಬಿಲ್ ಪಾವತಿಯನ್ನು ಪೋರ್ಟ್ ಮಾಡುವ ಮೊದಲು ಪಾವತಿ ಮಾಡಿರಬೇಕು.
Related Articles
Advertisement
– ಪೋರ್ಟ್ ಮಾಡುವ ಮುನ್ನ ಚಂದಾದಾರರು ಯಾವ ಸಂಸ್ಥೆಯ ಸೇವೆಯಿಂದ ಹೊರಬರಲು ಬಯಸುತ್ತಾರೋ, ಆ ಸಂಸ್ಥೆಯ ಎಕ್ಸಿಟ್ ನಿಯಮಗಳನ್ನು ಉಲ್ಲಂಘಿಸಬಾರದು.
– ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡುವುದನ್ನು ಯಾವ ನ್ಯಾಯಾಲಯವು ನಿಷೇಧಿಸುವುದಿಲ್ಲ ಮತ್ತು ಪೋರ್ಟ್ ಮಾಡುವುದು ಕಾನೂನಿನ ಉಲ್ಲಂಘನೆಯಲ್ಲ.
– ನೀವು ಈಗಾಗಲೇ ಪೋರ್ಟಬಿಲಿಟಿಗಾಗಿ ಅರ್ಜಿಯನ್ನು ನೀಡಿದ್ದರೆ ಮತ್ತೂಮ್ಮೆ ನಿಮ್ಮ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿಗೆ ಅರ್ಹವಾಗುವುದಿಲ್ಲ.
– ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಪ್ರತಿ ಪೋರ್ಟಿಂಗ್ ಸೇವೆಗೆ 6.46 ರೂ. ಮೊತ್ತವನ್ನು ವಹಿವಾಟು ಶುಲ್ಕವಾಗಿ ವಿಧಿಸುತ್ತದೆ.
ಎಂಎನ್‌ಪಿ ಎಂದರೇನು?ಮೊಬೈಲ್ ನಂಬರ್ ಪೋರ್ಟಬಿಲಿಟಿ ಈ ಮೂಲಕ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಒಂದು ಆಪರೇಟರ್‌ನಿಂದ ಮತ್ತೂಂದು ಆಪರೇಟರ್‌ಗೆಪೋರ್ಟ್ ಮಾಡಿಕೊಳ್ಳಬಹುದು. ಉದಾ: ಏರ್‌ಟೆಲ್ ಟು ಜಿಯೋ, ಜಿಯೋ ಟು ವೊಡಾಫೋನ್. ಈ ವೇಳೆ ಕಂಪೆನಿ ಬದಲಿಸಿದರೂ ನಿಮ್ಮ ನಂಬರ್ ಬದಲಾವಣೆ ಆಗುವುದಿಲ್ಲ.