Advertisement

ಭ್ರಷ್ಟಾಚಾರದ ವಿರುದ್ಧ ದೂರು ಸಲ್ಲಿಕೆಗೆ ಮೊಬೈಲ್‌ ಸಂಖ್ಯೆ ಕಡ್ಡಾಯ

09:22 PM Nov 15, 2022 | Team Udayavani |

ನವದೆಹಲಿ: ಸಿವಿಸಿ (ಕೇಂದ್ರೀಯ ಜಾಗೃತ ಆಯೋಗ) ತನ್ನ ವೆಬ್‌ಸೈಟ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ದೂರು ದಾಖಲಿಸುವ ಪ್ರಕ್ರಿಯೆಗೆ ಮಹತ್ವದ ಬದಲಾವಣೆಗಳನ್ನು ತಂದಿದೆ.

Advertisement

ಆನ್‌ಲೈನ್‌ ಮೂಲಕ ಯಾರು ದೂರು ದಾಖಲಿಸುತ್ತಾರೋ ಅವರು ಮೊಬೈಲ್‌ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಅದಕ್ಕೆ ಒಟಿಪಿ ಬರುತ್ತದೆ.

ಆ ಮೂಲಕ ದೂರುದಾರ ವ್ಯಕ್ತಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಿವಿಸಿ ತಿಳಿಸಿದೆ. ಜೊತೆಗೆ ಹಿಂದಿನಂತೆ ಅಂಚೆಯ ಮೂಲಕವೂ ದೂರುಗಳನ್ನು ಸಿವಿಸಿಗೆ ಕಳಿಸಬಹುದು.

ಸಿವಿಸಿಯಲ್ಲಿ ದೂರು ದಾಖಲಾದ ತಕ್ಷಣ ಅದನ್ನು ಖಚಿತಪಡಿಸಲು ಒಂದು ಸಂದೇಶವೂ ಮೊಬೈಲ್‌ ಸಂಖ್ಯೆಗೆ ಬರಲಿದೆ. ಹಾಗೆಯೇ ಇದನ್ನು ತನಿಖೆ ನಡೆಸುವ ಅಧಿಕಾರಿಗಳು ಆನ್‌ಲೈನ್‌ ಮೂಲಕವೇ ಜನರಿಗೆ ತನಿಖೆ ಯಾವಹಂತದಲ್ಲಿದೆ ಎಂದು ತಿಳಿಸಬೇಕು.

ಹಾಗೆಯೇ ಈ ಪ್ರಕರಣಗಳ ತನಿಖೆ ಎಲ್ಲಿಗೆ ತಲುಪಿದೆ ಎಂದು ಪರಿಶೀಲಿಸಲು ಜಾಗೃತ ಅಧಿಕಾರಿಗಳಿಗೆ ಗಡುವನ್ನು ಒಂದರಿಂದ ಎರಡು ತಿಂಗಳಿಗೆ ಹೆಚ್ಚಿಸಲಾಗಿದೆ. ದೂರು ದಾಖಲಿಸುವವರು //www.portal.cvc.gov.in ಅಥವಾ //www.cvc.gov.in ಗಳನ್ನು ಬಳಸಿಕೊಳ್ಳಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next