Advertisement
ಕಡ್ಯ-ಕೊಣಾಜೆ ಗ್ರಾಮವು ಕಳೆದ ಕೆಲ ವರ್ಷಗಳ ಹಿಂದೆ ಪ್ರತ್ಯೇಕ ಗ್ರಾಮ ಪಂಚಾಯತ್ ಆಗಿ ಮೇಲ್ದರ್ಜೆಗೇರಿತ್ತು. ಇದರಿಂದ ಗ್ರಾಮದ ಎಲ್ಲ ಕೆಲಸಗಳು ಕಡ್ಯ ಕೊಣಾಜೆಯಲ್ಲಿಯೇ ನಡೆಯುತ್ತಿವೆ. ಆದರೆ ಕಳೆದ ಒಂದು ವರ್ಷಗಳಿಂದ ಇಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಈ ಭಾಗದ ಸಾರ್ವಜನಿಕರು ಸೇರಿದಂತೆ, ಇಲ್ಲಿನ ಕಚೇರಿ ಕೆಲಸಗಳನ್ನು ನಡೆಸಲು ಸಮಸ್ಯೆ ಉಂಟಾಗಿರುವುದಾಗಿ ದೂರು ವ್ಯಕ್ತವಾಗಿದೆ. ಗ್ರಾಮಕ್ಕೆ ನೆಟ್‌ವರ್ಕ್ ಸಂಪರ್ಕಕ್ಕೆ ಖಾಸಗಿಯವರು ಕೇಬಲ್ ಅಳವಡಿಸಿದ್ದು, ಇನ್ನೂ ನೆಟ್‌ವರ್ಕ್ ಕಲ್ಪಿಸಲಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಡ್ಯ ಕೊಣಾಜೆ ಪೇಟೆಯಲ್ಲಿ ಗ್ರಾ.ಪಂ. ಕಚೇರಿ, ಸಿಎ ಬ್ಯಾಂಕ್ ಶಾಖೆ, ಅಂಚೆ ಕಚೇರಿ, ಹಾಲು ಸೊಸೈಟಿ, ಶಾಲೆ, ಗ್ರಾಮ ಕರಣಿಕರ ಕಚೇರಿ, ಸಭಾಭವನ ಇವುಗಳು ಕಾರ್ಯಾಚರಿಸುತ್ತಿದೆ. ವಿದ್ಯುತ್ ಕಡಿತಗೊಂಡರೆ, ಗುಡುಗು ಬಂದರೆ ನೆಟ್‌ವರ್ಕ್ ಕಡಿತಗೊಳ್ಳುತ್ತದೆ. ಕರೆಂಟ್ ಇದ್ದರೂ ಆಪರೇಟರ್ ಇಲ್ಲದೆ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಸಿಎ ಬ್ಯಾಂಕ್, ಅಂಚೆ ಕಚೇರಿ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯುತ್ತಿರುತ್ತವೆ. ಗ್ರಾ.ಪಂ. ಕಚೇರಿಗೆ ಕಡಬದಿಂದಲೇ ಬಿಬಿಎನ್‌ಎಲ್ ಕೇಬಲ್ ಇರುವುದರಿಂದ ಇಂಟರ್‌ನೆಟ್ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ ಪೋನ್ ಕರೆಗಳಿಗೆ ಸಮಸ್ಯೆ ಎದುರಾಗುತ್ತದೆ. ಗ್ರಾಮಸ್ಥರ ಆಕ್ರೋಶ
ಗ್ರಾಮದಲ್ಲಿ ಹಲವು ಸಮಯಗಳಿಂದ ನೆಟ್‌ವರ್ಕ್ ಸಮಸ್ಯೆಯಿದೆ. ಏನಾದರೂ ತೊಂದರೆಗಳು, ಘಟನೆಗಳು ಉಂಟಾದಲ್ಲಿ ಗ್ರಾಮಸ್ಥರು ತೀರಾ ಸಂದಿಗ್ಧ ಪರಿಸ್ಥಿಯಲ್ಲಿ ಸಿಲುಕಿಕೊಳ್ಳುವಂತಾಗಿದೆ. ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸುವುದೇ ತ್ರಾಸದಾಯಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಈ ಕೂಡಲೇ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಸಿದ್ದಾರೆ.
Related Articles
ಕೊಣಾಜೆ ಪೇಟೆಯಲ್ಲಿ ಬಿಎಸ್ಸೆನ್ನೆಲ್ ಟವರ್ ಪಕ್ಕ ದೂರವಾಣಿ ವಿನಿಮಯ ಕೇಂದ್ರ ಕಾರ್ಯಚರಿಸುತ್ತಿತ್ತು. ಆದರೆ ಇಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬಂದಿಗಳಿಗೆ ಕಳೆದ 7 ತಿಂಗಳಿನಿಂದ ವೇತನ ಪಾವತಿಯಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಕಚೇರಿ ಬಾಗಿಲು ಮುಚ್ಚಲಾಗಿದೆ ಎಂದು ತಿಳಿದುಬಂದಿದೆ. ಟವರ್‌ನ್ನು ಚಾಲನೆಯಲ್ಲಿಡಲು ಕಡಬದಿಂದ ಆಪರೇಟರ್ ಓರ್ವರು ಬಂದು ಹೋಗುತ್ತಾರೆ ಎನ್ನುತ್ತಾರೆ ಗ್ರಾಮಸ್ಥರು.
Advertisement
ಗ್ರಾಮವೇ ಸ್ತಬ್ಧ!ಇಲ್ಲಿ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಮರ್ಪಕವಾಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಗ್ರಾಮಸ್ಥರೆಲ್ಲರೂ ಬಿಎಸ್ಸೆನ್ನೆಲ್ ನೆಟ್‌ವರ್ಕ್‌ಗೆ ಅವಲಂಬಿತರಾಗಿದ್ದು, ನೆಟ್‌ವರ್ಕ್ ಸಮಸ್ಯೆ ಉಂಟಾದರೆ ಇಡೀ ಗ್ರಾಮವೇ ಸ್ತಬ್ಧವಾಗಬೇಕಾದ ಪರಿಸ್ಥಿತಿ ಇಲ್ಲಿನದ್ದು. ಇಂತಹ ಪರಿಸ್ಥಿತಿಯಲ್ಲಿ ಏನಾದರೂ ಸಮಸ್ಯೆಗಳು, ತೊಂದರೆಗಳು ಎದುರಾದರೆ ಬೇರೆಯವರನ್ನು ಸಂಪರ್ಕಿಸುವುದೇ ತ್ರಾಸದಾಯಕ ಕೆಲಸ. ಗ್ರಾಮೀಣ ಪ್ರದೇಶವಾದ ಇಲ್ಲಿ ನೆಟ್‌ವರ್ಕ್ ಸಮರ್ಪಕವಾಗಿ ನೋಡಿಕೊಳ್ಳಬೇಕು ಅಥವಾ ಖಾಸಗಿಯವರು ಈ ಭಾಗಕ್ಕೆ ನೆಟ್‌ವರ್ಕ್ ವ್ಯವಸ್ಥೆ ಮಾಡಿದಲ್ಲಿ ಸಮಸ್ಯೆಗೆ ಪರಿಹಾರ ಸಿಗಬಹುದು ಎನ್ನುತ್ತಾರೆ ನಾಗರಿಕರು. ಕಚೇರಿಗಳಿಗೆ ತೊಂದರೆ
ಗ್ರಾಮೀಣ ಪ್ರದೇಶವಾದ ಕಡ್ಯ ಕೊಣಾಜೆಯಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಹೊರಜಗತ್ತಿನ ಸಂಪರ್ಕ, ಇಂಟರ್ನೆಟ್ ಬಳಕೆ ಕಷ್ಟ. ಕಚೇರಿ ಕೆಲಸಗಳಿಗೂ ಸಮಸ್ಯೆಯಾಗಿದ್ದು, ನಿಧಾನಗತಿಯಲ್ಲಿ ನಡೆಯುತ್ತಿವೆ. ಪತ್ರ ಮುಖೇನ ಮನವಿ ಮಾಡಿದರೂ ಸಮರ್ಪಕ ಉತ್ತರ ಲಭಿಸಿಲ್ಲ.
– ಬೇಬಿ, ಅಧ್ಯಕ್ಷೆ, ಕಡ್ಯ-ಕೊಣಾಜೆ ಗ್ರಾ.ಪಂ. ದಯಾನಂದ ಕಲ್ನಾರ್