Advertisement

ಮೊಬೈಲ್‌,ಅಂತರ್ಜಾಲ ಒಳಿತಿಗೆ ಬಳಕೆಯಾಗಲಿ: ಲಲಿತಾ ಮಲ್ಯ

07:50 AM Aug 18, 2017 | Team Udayavani |

ಕುಳಾಯಿ: ಮೊಬೈಲ್‌ ಅಂತರ್ಜಾಲಗಳನ್ನು ಒಳಿತಿಗಾಗಿ ಬಳಸಿದರೆ ನಮ್ಮ ಸಂಪರ್ಕಜಾಲ, ಮಾಹಿತಿಯನ್ನು ಹೆಚ್ಚಿಸಿಕೊಳ್ಳಬಹುದು.ಅದರೆ ದುರುಪಯೋಗ ಅಥವಾ ಅದರಲ್ಲೇ ದಿನ ಕ‌ಳೆದರೆ ನಾವು ನಮ್ಮ ಕೌಟುಂಬಿಕ ಆನಂದವನ್ನು ಕಳೆದುಕೊಳ್ಳುತ್ತೇವೆ ಎಂದು ಪರಿಸರ ಶಿಕ್ಷಣ ತಜ್ಞೆ ಲಲಿತಾ ಜಿ.ಮಲ್ಯ ಹೇಳಿದರು.

Advertisement

ಕುಳಾಯಿಯ ವೆಂಕಟರಮಣ ಶಾಲೆಯಲ್ಲಿ ಪೊಲೀಸ್‌ ಸಿಬಂದಿಗೆ ಮತ್ತು ಅವರ ಕುಟುಂಬದವರಿಗೆ ಮೊಬೈಲ್‌  ಮತ್ತು ಅಂತರ್ಜಾಲದ ಸಮರ್ಪಕ ಬಳಕೆ ಕುರಿತಾಗಿ ಆಯೋಜಿಸಲಾದ ಶಿಬಿರದಲ್ಲಿ ಮಾತನಾಡಿದರು.

ಮೊಬೈಲ್‌ ಬಂದ ಬಳಿಕ ನಮ್ಮ ಜೀವನದ ಮೇಲೆ ಹಲವು  ಬದಲಾವಣೆಗಳಾಗಿವೆ. ಇದರ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಇದರ ಕುರಿತಾಗಿ ಈಗಲೇ ತಿಳಿವಳಿಕೆ ನೀಡಿದರೆ ಕೌಟುಂಬಿಕ ಒಂಟಿತನ ಬಾಧಿಸುವುದರಿಂದ ಪಾರಾಗ ಬಹುದು ಎಂದರು. ಉತ್ತರ ಸಂಚಾರ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next