Advertisement

ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್‌ ಎಚ್ಚರಿಕೆಯ ಅನಂತರ ಕ್ರಮ: ಎಸಿ

11:04 PM Jul 15, 2019 | Team Udayavani |

ಪುತ್ತೂರು: ಮುಂದಿನ ಹಂತದ ದಾಳಿ ವೇಳೆ ಅಂಗಡಿಗಳಲ್ಲಿ ಮತ್ತು ಶಾಲಾ ಕಾಲೇಜುಗಳ ಮಕ್ಕಳ ಕೈಯಲ್ಲಿ ಮೊಬೈಲ್‌ ದೊರೆತರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ ಹೇಳಿದ್ದಾರೆ.

Advertisement

ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಾಲಾ ಕಾಲೇಜುಗಳಲ್ಲಿ ಮೊಬೈಲ್‌ ಬಳಕೆ ಕುರಿತು ವಿಶೇಷ ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಎಚ್ಚರಿಕೆ ನೀಡುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯಿಂದ ಅನಿರೀಕ್ಷಿತ ಶಾಲಾ ಕಾಲೇಜುಗಳಿಗೆ ಮತ್ತು ಪರಿಸರದ ಅಂಗಡಿ ಗಳಿಗೆ ದಾಳಿ ನಡೆಸಲಾಗಿದೆ. ಇಲ್ಲಿ ವಶಪಡಿಸಿ ಕೊಂಡಿರುವ ಮೊಬೈಲ್‌ಗ‌ಳನ್ನು ವಾರಸು ದಾರರಿಗೆ ತಲುಪಿಸಲಾಗುವುದು ಎಂದರು.

ಅಧಿಕಾರಿ ನೇಮಕ
ಶಾಲಾ ಕಾಲೇಜುಗಳಿಗೆ ಭೇಟಿ ನೀಡಲು ಶೀಘ್ರ ಅಧಿಕಾರಿಯೊಬ್ಬರ ನೇಮಕ ಮಾಡ ಲಾಗುವುದು. ಈ ಅಧಿಕಾರಿ ಮಕ್ಕ ಳಲ್ಲಿ ಮೊಬೈಲ್‌ ಬಳಕೆಯಿಂದಾಗುವ ದುಷ್ಪರಿ ಣಾಮಗಳ ಕುರಿತು ಜಾಗೃತಿ ಮೂಡಿ ಸುವಲ್ಲಿ ಸಹಾಯ ಮಾಡುತ್ತಾರೆ. ಶಾಲಾ ಕಾಲೇಜುಗಳಲ್ಲಿ ಸಮಾಲೋಚನ ಸಮಿತಿ ರಚನೆ ನಡೆಯುತ್ತಿದ್ದು, ಇವರ ಜತೆ ಅಧಿಕಾರಿ ಯವರು ಮಕ್ಕಳ ಮೆಂಟರಿಂಗ್‌ ನಡೆಸಲು ಸಹಾಯ ಮಾಡಲಿದ್ದಾರೆ ಎಂದರು.

ಸಂಸ್ಥೆಗಳಿಗೆ ಸಿಸಿ ಕೆಮರಾ
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಹುತೇಕ ಸಿಸಿ ಕೆಮರಾ ಅಳವಡಿಕೆ ಮಾಡಲಾಗಿದೆ. ಸರಕಾರಿ ಶಾಲೆ, ಕಾಲೇಜುಗಳಲ್ಲಿಯೂ ಸಿಸಿ ಕೆಮರಾ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಆದರೆ ಅನುದಾನದ ಲಭ್ಯತೆಯನ್ನು ಅನುಸರಿಸಿ ಇಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಸಾಧ್ಯವಾದಷ್ಟೂ ದಾನಿಗಳ ನೆರವಿನಿಂದ ಸರಕಾರಿ ಶಾಲೆಗಳಲ್ಲಿ ಸಿಸಿ ಕೆಮರಾ ಅಳವಡಿಕೆಗೆ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಜು. 20: ಅಧಿಕಾರಿಗಳ ಸಭೆ
ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿರುವ ವಿಚಾರ ಕುರಿತು ಹಲವು ರೀತಿಯ ಸಮಸ್ಯೆಗಳು ಉಂಟಾಗಿವೆ. ಈ ಕುರಿತು ಡಿವೈಎಸ್ಪಿ, ಸಾರಿಗೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಸಂಬಂಧಿತ ಅ ಧಿಕಾರಿಗಳ ಸಭೆಯನ್ನು ಜು. 20ಕ್ಕೆ ಕರೆಯಲಾಗಿದೆ. ಪುತ್ತೂರು ನಗರದಲ್ಲಿನ ಪಾರ್ಕಿಂಗ್‌ ಸಮಸ್ಯೆ ಪರಿಹಾರ ವಿಚಾರದ ಕುರಿತೂ ಚರ್ಚೆ ನಡೆಸಲಾಗುವುದು ಎಂದು ಕೃಷ್ಣಮೂರ್ತಿ ತಿಳಿಸಿದರು.
ಆಧಾರ್‌ಗೆ ಅನುಕೂಲ
ಆಧಾರ್‌ ತಿದ್ದುಪಡಿಗೆ ಈಗಾಗಲೇ ತಾಲೂಕು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಹೊಸ ತಂಡವೊಂದನ್ನು ಬಳಕೆ ಮಾಡಲಾಗುತ್ತಿದೆ. ಜು. 16ರಿಂದ 31ರ ತನಕ ಆಧಾರ್‌ ತಿದ್ದುಪಡಿ ನಡೆಸುವ ತಂಡ ಕಡಬ ತಹಶೀಲ್ದಾರ್‌ ಕಚೇರಿಯಲ್ಲಿ ಕೆಲಸ ನಿರ್ವಹಿಸಲಿದೆ. ಆ. 1ರಿಂದ 15ರ ತನಕ ಉಪ್ಪಿನಂಗಡಿಯಲ್ಲಿ ಆಧಾರ್‌ ತಿದ್ದುಪಡಿ ನಡೆಯಲಿದೆ.

Advertisement

ದಿನವೊಂದಕ್ಕೆ 20ರಿಂದ 30 ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಲಾಗುವುದು. ಉಳಿದವರಿಗೆ ಟೋಕನ್‌ ನೀಡಲಾಗುತ್ತದೆ. ಜನಸಾಮಾನ್ಯರು ತಮ್ಮ ಆಧಾರ್‌ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆಗೊಳಿಸಲಾಗಿದೆ ಎಂದು ಸಹಾಯಕ ಆಯುಕ್ತರು ತಿಳಿಸಿದರು.

ಸ್ಪಷ್ಟ ಸೂಚನೆ
ಮೊಬೈಲ್‌ ಬಳಕೆಯಿಂದ ಉಪಯೋಗಕ್ಕಿಂತ ಹೆಚ್ಚು ದುಷ್ಪರಿಣಾಮ ಉಂಟಾಗುತ್ತಿದೆ. ಶಾಲಾ ಕಾಲೇಜುಗಳಿಗೆ, ಪೊಲೀಸ್‌ ಇಲಾಖೆಗೆ ಈ ಕುರಿತು ಸ್ಪಷ್ಟ ಸೂಚನೆ ನೀಡಲಾಗಿದೆ. ಮಕ್ಕಳ ಪೋಷಕರೂ ಹೆಚ್ಚಿನ ನಿಗಾ ವಹಿಸಬೇಕು ಎಂದು ಎಚ್‌.ಕೆ. ಕೃಷ್ಣಮೂರ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next