Advertisement

ಧರ್ಮ ಗ್ರಂಥಕ್ಕೆ ಬೆಂಕಿ: ಪಾಕಿಸ್ಥಾನದಲ್ಲಿ ಗುಂಪಿನಿಂದ ವ್ಯಕ್ತಿಯ ಬರ್ಬರ ಹತ್ಯೆ

03:41 PM Feb 13, 2022 | Team Udayavani |

ಇಸ್ಲಾಮಾಬಾದ್ : ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ದೂರದ ಹಳ್ಳಿಯೊಂದರಲ್ಲಿ ಧಾರ್ಮಿಕ ಪುಸ್ತಕವನ್ನು ಅಪವಿತ್ರಗೊಳಿಸಿದ್ದಾರೆಂದು ಆರೋಪಿಸಿ ಮಧ್ಯವಯಸ್ಕ ವ್ಯಕ್ತಿಯನ್ನು ಗುಂಪೊಂದು ಹತ್ಯೆ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಭಾನುವಾರ ಹೇಳಿದ್ದಾರೆ.

Advertisement

ಜಂಗಲ್ ಡೇರಾ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಮಗ್ರಿಬ್ (ಸಂಜೆ) ಪ್ರಾರ್ಥನೆಯ ನಂತರ ಸ್ಥಳೀಯರು ಜಮಾಯಿಸಿದ್ದರು, ಒಬ್ಬ ವ್ಯಕ್ತಿ ಪವಿತ್ರ ಕುರಾನ್‌ನ ಪುಟಗಳನ್ನು ಹರಿದು ಬೆಂಕಿ ಹಚ್ಚಿದ್ದಾನೆ ಎಂಬ ಘೋಷಣೆಯ ನಂತರ, ಹತ್ಯೆ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಘಟನೆ ಸಂಭವಿಸುವ ಮೊದಲು ಪೊಲೀಸರು ಗ್ರಾಮಕ್ಕೆ ಬಂದಿದ್ದರು, ಆದರೆ ಗುಂಪು ಬಲಿಪಶುವನ್ನುಅವರ ಬಂಧನದಿಂದ ವಶಪಡಿಸಿಕೊಂಡು ಮರಕ್ಕೆ ಕಟ್ಟಿಹಾಕಿ ಹೊಡೆದು ಸಾಯಿಸಿತು. ಬಲಿಪಶು ನಿರಪರಾಧಿ ಎಂದು ಹೇಳಿಕೊಂಡಿದ್ದಾನಾದರೂ ಕೋಪಗೊಂಡ ಜನಸಮೂಹ ಅವನ ಮನವಿ ನಿರ್ಲಕ್ಷಿಸಿದೆ.

ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಅವರು ಪೊಲೀಸರಿಂದ ವರದಿ ಕೇಳಿದ್ದಾರೆ ಮತ್ತು ಈ ಘಟನೆಯ ವಿವರವಾದ ತನಿಖೆಗೆ ಆದೇಶಿಸಿದ್ದಾರೆ. ಪಾಕಿಸ್ಥಾನವು ಇಸ್ಲಾಂ ಧರ್ಮವನ್ನು ನಿಂದಿಸುವುದರ ವಿರುದ್ಧ ಮರಣದಂಡನೆ ಸೇರಿದಂತೆ ಅತ್ಯಂತ ಕಟ್ಟುನಿಟ್ಟಾದ ಕಾನೂನುಗಳನ್ನು ಹೊಂದಿದೆ. ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಈ ರೀತಿಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಅವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ ಎಂದು ಹಕ್ಕುಗಳ ಪ್ರಚಾರಕರು ಹೇಳಿದ್ದಾರೆ.

ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ದಾಳಿ ಮಾಡಿದ ಉಗ್ರವಾದಿ ಇಸ್ಲಾಮಿಸ್ಟ್ ಪಕ್ಷದ ಸಿಟ್ಟಿಗೆದ್ದ ಬೆಂಬಲಿಗರು ಶ್ರೀಲಂಕಾದ ಗಾರ್ಮೆಂಟ್‌ನ ಕಾರ್ಯನಿರ್ವಾಹಕನನ್ನು ಹತ್ಯೆಗೈದು ಸುಟ್ಟುಹಾಕಿದ ಎರಡು ತಿಂಗಳ ನಂತರ ಈ ಭೀಕರ ಘಟನೆ ಸಂಭವಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next