Advertisement

Quran ಅಪವಿತ್ರ ಆರೋಪ: ಪಾಕ್‌ನಲ್ಲಿ ಕ್ರಿಶ್ಚಿಯನ್‌ ವ್ಯಕ್ತಿ ಮೇಲೆ ಹಲ್ಲೆ

09:32 PM May 25, 2024 | Team Udayavani |

ಇಸ್ಲಾಮಾಬಾದ್‌: ಇಸ್ಲಾಂ ಧರ್ಮ ಗ್ರಂಥ ಕುರಾನ್‌ ಅನ್ನು ಅಪವಿತ್ರಗೊಳಿಸಿದ ಆರೋಪದ ಮೇರೆಗೆ ಮುಸ್ಲಿಮರ ಗುಂಪೊಂದು ಕ್ರಿಶ್ಚಿಯನ್‌ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

Advertisement

ಅಲ್ಲದೆ, ಆ ವ್ಯಕ್ತಿಯ ಮನೆ, ಕಾರ್ಖಾನೆಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮಕ್ಕಳನ್ನು ಒಳಗೊಂಡ ಗುಂಪು ಕ್ರಿಶ್ಚಿಯನ್‌ ವ್ಯಕ್ತಿಯ ಮನೆಗೆ ನುಗ್ಗಿ, ವಸ್ತುಗಳನ್ನೆಲ್ಲ ನಾಶ ಮಾಡಿ, ಅವರ ಚಪ್ಪಲಿ ಕಾರ್ಖಾನೆಗೆ ಬೆಂಕಿ ಹಚ್ಚಿದೆ.

ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಅಲ್ಲಿನ ಕ್ರಿಶ್ಚಿಯನ್‌ ಕುಟುಂಬಗಳನ್ನು ಸುರಕ್ಷಿತವಾಗಿ ಹೊರತರಲಾಗಿದೆ ಎಂದು ಸಾರಾಗೋಧಾ ಜಿಲ್ಲಾ ಪೊಲೀಸ್‌ ಅಧಿಕಾರಿ ಅಸದ್‌ ಇಜಾಜ್‌ ಮಲ್ಹ್ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next