Advertisement

ಎಂಎನ್‌ಎಸ್‌ ಯಾರೊಂದಿಗೂ ಮೈತ್ರಿ ಇಲ್ಲ: ರಾಜ್‌ಠಾಕ್ರೆ

10:00 AM Jun 01, 2019 | Team Udayavani |

ಮುಂಬಯಿ: ಪಕ್ಷವು ಭವಿಷ್ಯದಲ್ಲಿ ಯಾವುದೇ ರೀತಿಯ ಮಹಾ ಮೈತ್ರಿ ಮಾಡಿಕೊಳ್ಳುವುದಿಲ್ಲ. ಅದಲ್ಲದೆ ಪ್ರಸಕ್ತ ಸಾಲಿನ ಕೊನೆಯಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಸಂಕೇತ ನೀಡಿದ್ದಾರೆ.

Advertisement

ಮಾಜಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಮಾಣಿಕ್‌ರಾವ್‌ ಠಾಕ್ರೆ ಅವರು, ಗುರುವಾರ ರಾಜ್‌ ಠಾಕ್ರೆ ಅವರನ್ನು ಭೇಟಿಯಾಗಿದ್ದು, ಮೈತ್ರಿಗೆ ಸೇರಲು ಹೇಳಿದ್ದರು.ಇದಕ್ಕೂ ಮೊದಲು ಬುಧವಾರ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ಎಂಎನ್‌ಎಸ್‌ ಮುಖ್ಯಸ್ಥ ಭೇಟಿಯಾಗಿದ್ದರು. ಈ ಚರ್ಚೆ ಸಭೆಯಿಂದ ಎಂಎನ್‌ಎಸ್‌ ಮಹಾಮೈತ್ರಿಯ ಜತೆ ಕೈ ಜೋಡಿಸುವ ರಾಜಕೀಯ ಚರ್ಚೆ ಆರಂಭವಾಗಿತ್ತು. ಎಂಎನ್‌ಎಸ್‌ನ ಹಿರಿಯ ನಾಯಕರೋರ್ವರ ಪ್ರಕಾರ, ಆಂಧ್ರಪ್ರದೇಶದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಜಗನ್‌ ಮೋಹನ್‌ ರೆಡ್ಡಿ ಅವರು ರಾಜಕೀಯ ಚುಕ್ಕಾಣಿಯನ್ನೇ ಬದಲಾಯಿಸುವಂತೆ ಮಾಡಿದ್ದರು. ಅದೇ ರೀತಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ವಿಧಾನ ಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ವಿಚಾರ ನಡೆಸುತ್ತಿದೆ. ಆದರೆ 20 ರಿಂದ 25 ಸೀಟುಗಳಿಗಾಗಿ ಕಾಂಗ್ರೆಸ್‌ – ಎನ್‌ಸಿಪಿ ಜತೆ ಸೇರಬಹುದು ಎಂದು ಹೇಳಿದ್ದಾರೆ.

ನಾವು ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ನಡೆಸುತ್ತಿದ್ದೇವೆ. ನಮ್ಮಲ್ಲಿ ಉತ್ತಮ ಅವಕಾಶವು ಇದಾಗಿದೆ. ರಾಜ್ಯ ಸರಕಾರದ ನೀತಿಗಳನ್ನು ಚುನಾವಣೆಯ ವಿಷಯವನ್ನಾಗಿಸುವ ಅವಕಾಶವಿದೆ. ರಾಜ್ಯ ಸರಕಾರದ ವಿರೋಧದಲ್ಲಿ ಒಂದು ವಾಸ್ತವಿಕ ಅವಕಾಶವಿದ್ದು, ರಾಜ್‌ ಠಾಕ್ರೆ ಅವರು ಇದನ್ನು ಬಳಸಿಕೊಳ್ಳಬಹುದು. ನಮ್ಮ ಪಕ್ಷವು ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟದಲ್ಲಿ ಸೇರಲು ಬಯಸುತ್ತಿಲ್ಲ ಎಂದು ಹೇಳಿದ್ದಾರೆ.

ಮಾಹಿತಿ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಶರದ್‌ ಪವಾರ್‌ ಅವರ ಎಂಎನ್‌ಎಸ್‌ ಫ್ಯಾಕ್ಟರ್‌ ಕೆಲಸ ಮಾಡದಿದ್ದರೂ ಸಹ ರಾಜ್‌ ಠಾಕ್ರೆಯವರನ್ನು ಮೈತ್ರಿಯಲ್ಲೆ ಸೇರಿಸಲು ಪವಾರ್‌ ಉಸ್ತುಕರಾಗಿದ್ದಾರೆಂದು ನಂಬಲಾಗಿದೆ.

ಪಕ್ಷದ ಮೂಲಗಳ ಪ್ರಕಾರ, ರಾಜ್‌ ಅವರೊಂದಿಗೆ ಕೈ ಜೋಡಿಸಲು ಕಾಂಗ್ರೆಸ್‌ ಸಿದ್ಧವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಜ್‌ ಠಾಕ್ರೆಯವರ ಮೈತ್ರಿಯನ್ನು ವಿರೋಧಿಸಿತು.
ಆದರೆ ಲೋಕಸಭಾ ಚುನಾವಣೆಯಲ್ಲಿ ರಾಜ್‌ ಠಾಕ್ರೆಯವರ ರ್ಯಾಲಿಗಳಿಂದ ಕಾಂಗ್ರೆಸ್‌-ಎನ್‌ಸಿಪಿಗೆ ಯಾವುದೇ ರೀತಿಯ ಪ್ರಯೋಜನೆ ಆಗಲಿಲ್ಲ. ಒಂದು ವೇಳೆ ಎಂಎನ್‌ಎಸ್‌ ಸ್ಪರ್ಧಿಸಿದ್ದರೆ, ಆ ಚಿತ್ರವು ಬದಲಾಗುತ್ತಿತ್ತು ಎಂದು ಎನ್‌ಸಿಪಿ ನಾಯಕರೊರ್ವರು ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next