ಮಣಿಪಾಲ: ಯುನಿವರ್ಸಿಟಾಸ್ ಇಂಡೋನೇಶ್ಯಾ (ಯುಐ) ಯುಐ ಗ್ರೀನ್ ಮೆಟ್ರಿಕ್ ವರ್ಲ್ಡ್ ಯುನಿವರ್ಸಿಟಿ ರ್‍ಯಾಂಕಿಂಗ್ಸ್‌ನ್ನು ಪ್ರಕಟಿಸಿದೆ. ಇದರಲ್ಲಿ 85 ರಾಷ್ಟ್ರಗಳ 1,050 ವಿಶ್ವವಿದ್ಯಾನಿಲಯಗಳು ಪಾಲ್ಗೊಂಡಿದ್ದು ಮಣಿಪಾಲದ ಮಾಹೆ 2022ನೇ ಸಾಲಿನಲ್ಲಿ ಜಗತ್ತಿನ 121ನೇ ಅತಿ ಸುಸ್ಥಿರ ವಿ.ವಿ. ಮತ್ತು ಭಾರತದ ನಂಬರ್ 1 ವಿ.ವಿ. ಆಗಿ ಮೂಡಿಬಂದಿದೆ.
ಮೂಲಸೌಕರ್ಯ, ಶಿಕ್ಷಣ ಮತ್ತು ಸಂಶೋಧನೆ, ಇಂಧನ ಮತ್ತು ಹವಾಮಾನ ಬದಲಾವಣೆ, ತ್ಯಾಜ್ಯ, ನೀರು, ಸಾರಿಗೆ ಈ ಐದು ಮಾನದಂಡಗಳಲ್ಲಿ ರ್‍ಯಾಂಕಿಂಗ್ ನೀಡಲಾಗಿದೆ. ಹಸುರು ಕ್ಯಾಂಪಸ್ ಮತ್ತು ಪರಿಸರ ಸುಸ್ಥಿರತೆಗೆ ಸಂಬಂಧಿಸಿ ರ್‍ಯಾಂಕ್ ನೀಡಲಾಗಿದೆ.
ಮಾಹೆಯು ಪರಿಸರಸ್ನೇಹಿ ವಿ.ವಿ. ಎನ್ನುವುದನ್ನು ರ್‍ಯಾಂಕಿಂಗ್ ಖಾತ್ರಿಪಡಿಸಿದೆ. ಕ್ಯಾಂಪಸ್‌ನ್ನು ಶುಚಿತ್ವ ಮತ್ತು ಹಸುರು ಪರಿಸರವಾಗಿ ಇರಿಸುವುದರಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿ
ವೃದ್ಧಿಗೆ ಮಹತ್ವಪೂರ್ಣ ಕೊಡುಗೆ ಸಲ್ಲಿಸಲಾಗುತ್ತಿದೆ ಎಂದು ಕುಲಪತಿ ಲೆ|ಜ|ಡಾ| ಎಂ.ಡಿ. ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಹೆಯು ಅನೇಕ ವರ್ಷಗಳಿಂದ ಈ ಬೆಳವಣಿಗೆಯನ್ನು ಸಾಧಿಸುತ್ತಿದ್ದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಮುಂದೆಯೂ ಇದೇ ಪಥದಲ್ಲಿ ಸಾಗಲಿದೆ ಎಂದು ತಿಳಿಸಿದ್ದಾರೆ.