Advertisement

ಸಿಎಂಡಿ ಆಗಿ ಎಂ.ಎನ್‌. ಶರ್ಮ ನೇಮಕ

12:47 PM Sep 16, 2017 | |

ಚೆನ್ನೈ: ಸಾರ್ವಜನಿಕ ವಲಯದ ಯುನೈಟೆಡ್‌ ಇಂಡಿಯಾ ಇನ್ಸೂರೆನ್ಸ್‌  ಕಂಪೆನಿ ಲಿಮಿಟೆಡ್‌ಗೆ ಚೇರ್ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಎಂ.ಎನ್‌. ಶರ್ಮ ಅವರು ಭಡ್ತಿ ಪಡೆದಿದ್ದಾರೆ. ಶರ್ಮ ಅವರು ಈ ಹಿಂದೆ ಸಂಸ್ಥೆಯ ನಿರ್ದೇಶಕ- ಮಹಾಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

Advertisement

1982ರಲ್ಲಿ ನ್ಯೂ ಇಂಡಿಯಾ ಅಶ್ಶೂರೆನ್ಸ್‌ ಕಂಪೆನಿ ಲಿ., ಅಧಿಕಾರಿಯಾಗಿ ನೇಮಕಗೊಂಡಿದ್ದ ಅವರು ವಿಭಾಗ ಕಚೇರಿ, ಹೈದರಾಬಾದಿನ ವಲಯ ಕಚೇರಿ ಸೇರಿದಂತೆ ಇನ್ಸೂರೆನ್ಸ್‌ ಕ್ಷೇತ್ರದ ವಿವಿಧ  ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಅಷ್ಟೇ ಅಲ್ಲದೆ, ನೆದರ್‌ಲ್ಯಾಂಡ್ಸ್‌ ಆಂಟಿಲ್ಲೆಸ್‌ನ ಸ್ಥಾನಿಕ ವ್ಯವಸ್ಥಾಪಕರಾಗಿ, ನೈರೋಬಿಯ ಕೆನಿಂಡಿಯಾ ಅಶ್ಶೂರೆನ್ಸ್‌ ಕಂ.ಲಿ., ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಾಗೂ ಹೆಲ್ತ್‌ ಇನ್ಸೂರೆನ್ಸ್‌ ಎಂಡಿ ಮತ್ತು ಸಿಇಒ ಆಗಿಯೂ ಸೇವೆ ಸಲ್ಲಿಸಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next