ಚಿತ್ರದುರ್ಗ: ಸರ್ಕಾರಿ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ ವಿಚಾರದಲ್ಲಿ ಮುಖ್ಯಮಂತ್ರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿಲ್ಲೆಗೆ ಒಂದೆರಡು ಬಾರಿ ಬಂದು ಪ್ರಗತಿ ಪರಿಶೀಲನೆ ಮಾಡಿರಬಹುದು, ನಾನಂತೂ ಅವರನ್ನು
ಕರೆದಿಲ್ಲ, ಮಾತನಾಡಿಸಿಯೂ ಇಲ್ಲ ಎಂದರು.
ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳನ್ನು ಅಮಾನತುಗೊಳಿಸಿ ಸಿಎಂ ಕುಮಾರಸ್ವಾಮಿ ನೈತಿಕತೆ ಉಳಿಸಿಕೊಳ್ಳಬೇಕು ಎಂದ ಆಚಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯನ್ನೇ ನಿಯಂತ್ರಿಸಲು ಆಗದಿದ್ದರೆ ಸಿಎಂಆಗಿ ಮತ್ತೇನು ಮಾಡ್ತೀರಾ ಎಂದು ಕಿಡಿ ಕಾರಿದರು.
ಎಲ್ಲ ಕಾರ್ಯದರ್ಶಿಗಳು ಬೆಂಗಳೂರಲ್ಲಿ ಆಟ ಆಡಿಕೊಂಡು ಕುಳಿತಿದ್ದಾರೆ. ಆದ್ದರಿಂದ ಕಾರ್ಯದರ್ಶಿಗಳನ್ನು ಹುಡುಕಿಕೊಡಿ ಎಂದು ಸಿಎಂಗೆ ಮನವಿ ಮಾಡುತ್ತೇನೆ. ಕಾರ್ಯದರ್ಶಿಗಳು ನಾಳೆಯಿಂದಲೇ ಆಯಾ ಜಿಲ್ಲೆಗಳಲ್ಲಿ ಮೊಕ್ಕಾಂ ಮಾಡಬೇಕು ಎಂದು ಮಾಡಿದರು.