Advertisement

ಭ್ರಷ್ಟ ಯೋಗೀಶ್ವರ ಸಚಿವನಾಗಿದ್ದೇ ನನಗೆ ಅಪಥ್ಯ: ಎಚ್.ವಿಶ್ವನಾಥ ಅಸಮಾಧಾನ

02:29 PM Jan 14, 2021 | keerthan |

ರಾಯಚೂರು: ನನಗೆ ಸಚಿವ ಸ್ಥಾನ ನೀಡಿಲ್ಲ ಎನ್ನುವುದಕ್ಕಿಂತ ಭ್ರಷ್ಟ, ದಲ್ಲಾಳಿ ಸಿ.ಪಿ.ಯೋಗೀಶ್ವರ್‌ಗೆ ಸಚಿವ ಸ್ಥಾನ ನೀಡಿರುವುದು ನನಗೆ ಅಪಥ್ಯವಾಗಿದೆ. ಕೂಡಲೇ ಅವರನ್ನು ಸಂಪುಟದಿಂದ ಕೈ ಬಿಡಲಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಒತ್ತಾಯ ಮಾಡಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಪುಟ ವಿಸ್ತರಣೆ, ಪುನರ್ ರಚನೆ ಸಿಎಂ ಪರಮಾಧಿಕಾರ. ಇಂಥ ವೇಳೆ ಒತ್ತಡಗಳು ಸಹಜ. ಹಾಗಂತ ಭ್ರಷ್ಟನನ್ನು ಸಚಿವರನ್ನಾಗಿ ಮಾಡುವುದು ಎಷ್ಟು ಸರಿ. 9,731 ಜನರಿಂದ ಮೆಗಾಸಿಟಿ ಹೆಸರಲ್ಲಿ ನೂರಾರು ಕೋಟಿ ರೂ. ಕೊಳ್ಳೆ ಹೊಡೆದಿದ್ದಾನೆ. ಆತನ ವಿರುದ್ಧ ಜನ ನ್ಯಾಯಾಂಗ ಹೋರಾಟ ನಡೆಸಿದ್ದಾರೆ. ನ್ಯಾಯಾಲಯ ಕೂಡ ತನಿಖೆಗೆ ನಿರ್ದೇಶಿಸಿದೆ. ಇಂಥ ವ್ಯಕ್ತಿಗೆ ಸಚಿವ ಸ್ಥಾನ ನೀಡುವುದು ಎಷ್ಟು ಸರಿ ಎಂದರು.

ಸಿಎಂ ಬಿಎಸ್‌ವೈ ಮೇಲೆ ಅಪಾರ ನಂಬಿಕೆ ಇಟ್ಟು 17 ಜನ ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ರಚಿಸಿದ್ದೇವೆ. ಆದರೆ, ದಲಿತ ಸಚಿವರನ್ನು ಕೈ ಬಿಟ್ಟು ಒಬ್ಬ ಭ್ರಷ್ಟನಿಗೆ ಸಚಿವ ಸ್ಥಾನ ನೀಡಿರುವುದು ಸರಿಯಲ್ಲ. ಮುನಿರತ್ನರಂಥವನ್ನು ಯಾಕೆ ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎಂದರು.

ಇದನ್ನೂ ಓದಿ:ಹಣೆಯಲ್ಲಿ ಬರೆದಿದ್ದರೆ ಸಚಿವ ಸ್ಥಾನ ಸಿಗುತ್ತದೆ, ಇಲ್ಲಾಂದ್ರೆ ಇಲ್ಲ: ಮುನಿರತ್ನ

17 ಜನ ಕ್ಷಿಪ್ರ ಕ್ರಾಂತಿ ಮಾಡಿ ಹೊರ ಬಂದಿದ್ದೆವು. ಒಳ್ಳೆಯದಾಗುತ್ತದೆ ಎಂದುಕೊಂಡಿದ್ದೇವೆ. ಆದರೆ ಈ ಬೆಳವಣಿಗೆ ಕಂಡು ಬೇಜಾರಾಗಿದೆ. ದಲಿತ ಸಮುದಾಯದ ನಾಗೇಶ್‌ರನ್ನು ಕೈ ಬಿಡಲಾಗಿದೆ. ಹಿಂದುಳಿದ ಸಮುದಾಯದ ಮುನಿರತ್ನರಿಗೂ ಅವಕಾಶ ನೀಡಿಲ್ಲ ಎಂದರು.

Advertisement

ಸನ್ ಸ್ಟ್ರೋಕ್: ಎಲ್ಲಾ ಗೊತ್ತಾಗುತ್ತದೆ. ಯತ್ನಾಳ್ ಅಥವಾ ಬೇರೆ ಯಾರೋ ಸಿಡಿ ಬಿಡುಗಡೆ ಮಾಡುತ್ತಾರೆ. ಬಿ.ಎಸ್.ಯಡಿಯೂರಪ್ಪ ಬಗ್ಗೆ ಈಗಲೂ ಅಭಿಮಾನವಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಈಗ ನಡೆಯುತ್ತಿರುವುದು ಸನ್ ಸ್ಟ್ರೋಕ್. ಈ ಹಿಂದೆ ಜನತಾ ಪರಿವಾರ ಸನ್ ಸ್ಟ್ರೋಕ್‌ಗೆ ಒಳಗಾಗಿತ್ತು. ಇದೀಗ ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್‌ನಲ್ಲಿ ಬಿಜೆಪಿ ಹಾಳಾಗುತ್ತಿದೆ. ಕಾಂಗ್ರೆಸ್ ಸಹ ಸನ್ ಸ್ಟ್ರೋಕ್‌ನಲ್ಲಿ ಹಾಳಾಗಿ ಹೋಗಿದೆ. ವಿಜಯೇಂದ್ರನಿಂದ ಈಗ ಬಿಜೆಪಿ ಸನ್ ಸ್ಟ್ರೋಕ್‌ಗೆ ಒಳಗಾಗಿದೆ ಎಂದರು.

ಕುಟುಂಬ ರಾಜಕಾರಣಕ್ಕೆ ಬಿಎಸ್‌ವೈ ಬಲಿಯಾಗಿದ್ದಾರೆ ಎಂದು ಬೇಜಾರಾಗಿದೆ. ನಾಲಿಗೆ ಇರುವ ನಾಯಕರಾಗಿದ್ದ ಬಿಎಸ್‌ವೈ ನಾಲಿಗೆ ಇಲ್ಲದ ನಾಯಕರಾಗಿದ್ದಾರೆ. ಅವರು ಕರೆದು ಮಾತನಾಡಿದರೆ ಮಾತನಾಡುತ್ತೇವೆ. ನಾವು ಪರಿಸ್ಥಿತಿಯ ಶಿಶುಗಳಾಗಿದ್ದೇವೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಸರಿಯಾಗಿದ್ದರೆ ಇದೆಲ್ಲಾ ಆಗುತ್ತಿರಲಿಲ್ಲ. ನಾನೇನಾದರೂ ಅಸಂಬದ್ದವಾಗಿ ಮಾತನಾಡಿದರೆ ನನ್ನ ವಿರುದ್ದ ಕ್ರಮ ತೆಗೆದುಕೊಳ್ಳಲಿ. ಯಾರ ಮುಲಾಜು, ಯಾರ ಭಿಕ್ಷೆಯಿಂದ ಸಿಎಂ ಸ್ಥಾನದಲ್ಲಿ ಕುಳಿತಿದ್ದೀರಾ ಎನ್ನುವುದನ್ನು ಯೋಚಿಸಿಕೊಳ್ಳಲಿ ಎಂದು ಬಿಎಸ್‌ವೈ ವಿರುದ್ಧ ಗುಡುಗಿದರು.

ಸಂಕ್ರಮಣದ ಬಳಿಕ ಸಿಡಿ ಬಿಡುಗಡೆಯಾಗಲಿದೆ. ಒಬ್ಬೊಬ್ಬರಾಗಿ ಸಿಡಿ ಬಿಡುಗಡೆ ಮಾಡುತ್ತೇವೆ ಎಂದು ವಿಶ್ವನಾಥ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next