Advertisement
ಈ ಕಾರಣಕ್ಕಾಗಿ ಟಿಕೆಟ್ ಆಕಾಂಕ್ಷಿಗಳನ್ನು ಮನವೊಲಿಸಿ ಒಬ್ಬರೇ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಲು ಹರಸಾಹಸ ಪಡುತ್ತಿವೆ. ಈ ಹಿಂದಿನ ಚುನಾವಣೆ ಅನುಭವ ಆಧಾರದಲ್ಲಿ ಒಂದು ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಬರನ್ನು ಕಣಕ್ಕಿಳಿಸಿ ಎರಡೂ ಸ್ಥಾನಗಳನ್ನು ಗೆದ್ದಿರುವ ದಾಖಲೆ ಇದ್ದರೂ, ಬಿಜೆಪಿ ಎರಡೂ ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಒಂದರಲ್ಲಿ ಗೆದ್ದು, ಒಂದು ಸ್ಥಾನವನ್ನು ಕಳೆದುಕೊಂಡಿರುವ ಅನುಭವೂ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ಹಾಲಿ ಸದಸ್ಯರೂ ಆಗಿರುವ ಮೇಲ್ಮನೆ ವಿಪಕ್ಷದ ನಾಯಕ ಎಸ್.ಆರ್. ಪಾಟೀಲ ಒಬ್ಬರನ್ನು ಮಾತ್ರ ಸ್ಪರ್ಧೆಗಿಳಿಸಿ ಗೆಲ್ಲುತ್ತ ಬಂದಿದೆ.
Related Articles
Advertisement
ಕ್ಷೇತ್ರದಲ್ಲಿನ ಈ ಹಿಂದಿನ ಅನುಭವದ ಆಧಾರದಲ್ಲಿ ಕಾಂಗ್ರೆಸ್ ಒಬ್ಬರ ಸ್ಪರ್ಧೆಗೆ ಒಲವು ತೋರಿದರೆ, ಬಿಜೆಪಿ ಕೂಡ ಒಬ್ಬರನ್ನೇ ಕಣಕ್ಕಿಳಿಸಲು ಚಿಂತಿಸಿದೆ. ಒಂದೊಮ್ಮೆ ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಸದಸ್ಯರಿದ್ದು ಇಬ್ಬರನ್ನೂ ಕಣಕ್ಕಿಳಿಸಿದರೆ ಬಿಜೆಪಿ ಕೂಡ ಎರಡೂ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಕುರಿತು ಹೈಮಾಂಡ್ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಕಾಂಗ್ರೆಸ್ -ಬಿಜೆಪಿ ರಕ್ಷಣಾತ್ಮಕ ಸ್ಪರ್ಧೆಗೆ ಚಿಂತನೆ ನಡೆಸಿವೆ.
ಜೆಡಿಎಸ್‌ನಲ್ಲಿ ಸಿಂಧಗಿ ಸೋಲಿನ ಕಾರ್ಮೋಡ : ಇನ್ನು ಕಳೆದ ಚುನಾವಣೆಯಲ್ಲಿ ಕಾಂತು ಇಂಚಗೇರಿ ಎಂಬ ಯುವಕನನ್ನು ಕಣಕ್ಕಳಿಸಿ ಜೆಡಿಸ್ ಹೀನಾಯವಾಗಿ ಸೋತಿತ್ತು. ಇದೀಗ ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿನ ಹೀನಾಯ ಸೋಲಿನ ಕಾರ್ಮೋಡ ಕವಿದಿದೆ. ಅವಳಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದಿಂದ ದೇವಾನಂದ ಚವ್ಹಾಣ ಅವರೊಬ್ಬರೇ ಶಾಸಕರಿದ್ದು, ಸ್ಥಳೀಯ ಮಟ್ಟದಲ್ಲಿ ಎರಡೂ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆಯೂ ಇಲ್ಲ. ಹೀಗಾಗಿ ಜೆಡಿಎಸ್ ಟಿಕೆಟ್ ಕೇಳುವ ಪೈಪೋಟಿಯ ಮಾತಿರಲಿ ಸಾಂಕೇತಿಕ ಸ್ಪರ್ಧೆಗಾದರೂ ಅಭ್ಯರ್ಥಿಗಳನ್ನು ಹಾಕುವುದೋ, ಬೇಡವೋ ಎಂದು ಯೋಚಿಸುವ ಸ್ಥಿತಿ ತಂದಿಟ್ಟಿದೆ.
ರಕ್ಷಣಾತ್ಮಕ ಸ್ಪರ್ಧೆ-ಅಭ್ಯರ್ಥಿ ಆಯ್ಕೆಗೆ ನಡೆದಿದೆ ಹಗ್ಗಜಗ್ಗಾಟ : ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಯಲ್ಲಿ ಸ್ಪ ರ್ಧಿಗಳಿಗೆ ಆದ್ಯತೆ ಮತ ನೀಡುವ ಅವಕಾಶವಿದ್ದು, ಮತಪತ್ರದ ಮೂಲಕ ನಡೆಯುವ ಚುನಾವಣೆಯಾಗಿದೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಈ ಚುನಾವಣೆ ಮತದಾರರಾಗಿದ್ದು, ಬಹುತೇಕರು ಗ್ರಾಮೀಣ ಪರಿಸರದ ಗ್ರಾಪಂ ಹಾಗೂ ಅನಕ್ಷರಸ್ತರಾಗಿರುತ್ತಾರೆ. ಹೀಗಾಗಿ ಮತದಾನ ಮಾಡುವಲ್ಲಿ ಗೊಂದಲ ಉಂಟಾಗಿ, ವಿರೋ ಧ ಪಾಳೆಯಕ್ಕೆ ಮತಗಳು ವಿಭಜನೆ ಆಗುವ ಅಪಾಯ ಇರುತ್ತದೆ. ಅಲ್ಲದೇ ಮತಪತ್ರ ಮಾದರಿಯಲ್ಲಿ ಮತದಾನ ಮಾಡಬೇಕಿದ್ದು, ಮತಗಳು ತಿರಸ್ಕಾರದ ಭೀತಿಯೂ ಇರುತ್ತದೆ. ಇದರಿಂದಾಗಿ 6-7 ಸಾವಿರ ಸಂಖ್ಯೆಯಲ್ಲಿ ಇರುವ ಮತಗಳಲ್ಲಿ ಗೆಲ್ಲಲು ಒಂದೊಂದು ಮತವೂ ಮಹತ್ವ ಪಡೆದಿರುತ್ತದೆ.
ಒಂದೊಮ್ಮೆ ಆದ್ಯತೆ ಮತಗಳನ್ನು ನೀಡುವಲ್ಲಿ ಗೊಂದಲ ಉಂಟಾಗಿ ಮತಗಳು ತಿರಸ್ಕೃತಗೊಂಡಲ್ಲಿ ಎರಡು ಸ್ಥಾನಗಳ ಗೆಲುವಿನ ಮಾತಿರಲಿ. ಗೆಲ್ಲುವ ಒಂದು ಅವಕಾಶವನ್ನೂ ಕಳೆದುಕೊಳ್ಳುವ ಅಪಾಯವೇ ಹೆಚ್ಚು. ಹೀಗಾಗಿ ರಾಜಕೀಯ ರಣತಂತ್ರ ಹೆಣೆಯುವವರಿಗೆ ಇದು ಯೋಚಿಸುವಂತೆ ಮಾಡಿದೆ.
-ಜಿ.ಎಸ್.ಕಮತರ