ಹರಿಹರ: ಸುಶಿಕ್ಷಿತರು ಬಿಜೆಪಿ ಬೆಂಬಲಿಸುವುದರಿಂದ ಅ.28 ರಂದು ನಡೆಯಲಿರುವ ಆಗ್ನೇಯಪದವೀಧರರ ಚುನಾವಣೆಯಲ್ಲಿಬಿಜೆಪಿ ಅಭ್ಯರ್ಥಿ ನಿರಾಯಾಸವಾಗಿಜಯ ಸಾಧಿ ಸಲಿದ್ದಾರೆ ಎಂದು ಸಂಸದಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ಸರ್ಕಾರಿ ಪದವಿಕಾಲೇಜಿನಲ್ಲಿ ಬಿಜೆಪಿ ಆಭ್ಯರ್ಥಿ ಪರಮತಯಾಚಿಸಿ ಮಾತನಾಡಿದ ಅವರು, ಕೇಂದ್ರ, ರಾಜ್ಯದ ಬಿಜೆಪಿ ಸರ್ಕಾರಗಳು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿವೆ. ಸಿಎಂ ಯಡಿಯೂರಪ್ಪ ಸಾವಿರಾರು ಶಿಕ್ಷಕರ ನೇಮಕ ಮಾಡಿದಲ್ಲದೆ, ಶಿಕ್ಷಣ ಕ್ಷೇತ್ರದ ಹಲವು ಬೇಡಿಕೆ ಈಡೇರಿಸಿದ್ದಾರೆ ಎಂದರು.
ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಪಕ್ಷದ ಕಾರ್ಯಕರ್ತರು ತಾಲೂಕಿನಾದ್ಯಂತ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದು, ಉತ್ತಮ ಸ್ಪಂದನೆ ದೊರೆಯುತ್ತಿದೆ. ಪಕ್ಷದ ಅಭ್ಯರ್ಥಿಗೆ ತಾಲೂಕಿನಲ್ಲಿ ಅತ್ಯ ಕ ಮತಗಳು ದೊರೆಯಲಿವೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರ ಬಿಜೆಪಿಯ ಭದ್ರಕೋಟೆ, ಇತಿಹಾಸದಲ್ಲಿ ಕೇವಲ 2 ಬಾರಿ ಸೋಲುಂಡಿದ್ದು, ಈ ಬಾರಿ ಚಿದಾನಂದ್ ಎಂ. ಗೌಡರಿಗೆ ಆದ್ಯತೆಯ ಮತ ನೀಡುವ ಮೂಲಕ ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಎಲ್ಲರೂ ಸಹಕರಿಸಬೇಕು ಎಂದರು.
ಕೋವಿಡ್ ದಿಂದ ಕಾರ್ಖಾನೆ ವಿಳಂಬ: ಅಗತ್ಯ ವಿದೇಶಿ ಸಾಮಗ್ರಿಗಳ ಆಮದಿಗೆ ಕೋವಿಡ್ ಅಡ್ಡಿಯಾಗಿ ರುವುದರಿಂದ ತಾಲೂಕಿನ ಹನಗವಾಡಿ ಬಳಿ ಎಂಆರ್‌ಪಿಎಲ್ ಕಾರ್ಖಾನೆ ಮತ್ತುಕುರುಬರಹಳ್ಳಿ ಬಳಿ ಯೂರಿಯಾ ಉತ್ಪಾದನಾ ಕಾರ್ಖಾನೆಗಳ ಸ್ಥಾಪನೆ ವಿಳಂಬವಾಗುತ್ತಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು. ಕಾರ್ಖಾನೆ ಸ್ಥಳಾಂತರಗೊಳ್ಳುತ್ತಿವೆ ಎಂಬುದು ಸುಳ್ಳು ಸುದ್ದಿ, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು. ಬರುವ ಮಾರ್ಚ್ ವೇಳೆಗೆ ಎಂಆರ್‌ಪಿಎಲ್ ಕಾರ್ಖಾನೆ ಆರಂಭವಾಗಲಿದೆ. ಯೂರಿಯಾ ಕಾರ್ಖಾನೆಗೂ ಈಗಾಗಲೇ 320 ಎಕರೆ ಜಮೀನು ಮಂಜೂರಾಗಿದ್ದು, ಆದಷ್ಟು ಬೇಗ ಉಳಿದ ಪ್ರಕ್ರಿಯೆ ನಡೆಸಲಾಗುವುದು ಎಂದರು.
ತಾ.ಪಂ ಅಧ್ಯಕ್ಷೆ ಶ್ರೀದೇವಿ ಎಂ., ನಗರಸಭಾ ಸದಸ್ಯರಾದ ನೀತಾ ಮೇಹರ್ವಾಡೆ, ಆಟೋ ಹನುಮಂತಪ್ಪ, ರಜನಿಕಾಂತ್, ಆಶ್ವಿನಿ ಕೆ., ದೂಡಾ ಸದಸ್ಯ ರಾಜು ರೊಖಡೆ, ಗ್ರಾಮಾಂತರ ಅಧ್ಯಕ್ಷ ಲಿಂಗರಾಜು, ಪ್ರಧಾನ ಕಾರ್ಯದರ್ಶಿ ಮಂಜಾನಾಯ್ಕ, ಮಾರುತಿ ಶೆಟ್ಟಿ, ಮುಖಂಡರಾದ ರಾಘವೇಂದ್ರ ಕೊಂಡಜ್ಜಿ, ಅನಂದ್ ಕುಮಾರ್,ಪ್ರವೀಣ, ತುಳುಜಪ್ಪ, ವಿರೇಶ್, ಬಾತಿ ಚಂದ್ರಶೇಖರ್ ಇದ್ದರು.