Advertisement

MLC Election: ಬಿಜೆಪಿ ಪಟ್ಟಿ ಪ್ರಕಟ; ಸಿ.ಟಿ ರವಿ, ಎಂ.ಜಿ ಮೂಳೆ, ರವಿಕುಮಾರ್ ಗೆ ಟಿಕೆಟ್

12:47 PM Jun 02, 2024 | Team Udayavani |

ಬೆಂಗಳೂರು/ಬೀದರ್: ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಕಾರಣ ರವಿವಾರ ಮೂರು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

Advertisement

ಹನ್ನೊಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಮೂರರಲ್ಲಿ ಗೆಲ್ಲುವ ಅವಕಾಶ ಬಿಜೆಪಿಗೆ ಇದೆ. ಹೀಗಾಗಿ ಮೂರು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ.

ಮಾಜಿ ಸಚಿವ ಸಿ.ಟಿ ರವಿ, ಪರಿಷತ್ ಸದಸ್ಯರಾಗಿದ್ದ ಎನ್.ರವಿಕುಮಾರ್ ಮತ್ತು ಬಸವಕಲ್ಯಾಣದ ಮಾಜಿ ಶಾಸಕ ಎಂ.ಜಿ ಮೂಳೆ ಅವರಿಗೆ ಟಿಕೆಟ್ ನೀಡಲಾಗಿದೆ.

ಬೀದರನಿಂದ ಈ ಹಿಂದಿನ ಅವಧಿಯಲ್ಲಿ‌ ರಘುನಾಥ ಮಲ್ಕಾಪುರೆ ಸ್ಪರ್ಧಿಸಿ ಮೇಲ್ಮನೆ ಪ್ರವೇಶಿಸಿದ್ದರು. ಅವರು ವಿಧಾನ ಪರಿಷತ್ ಸಭಾಪತಿಯೂ ಆಗಿದ್ದರು. ಈಗ ಅವರಿಗೆ ಟಿಕೆಟ್ ತಪ್ಪಿದ್ದು, ಕಲ್ಯಾಣ ಕರ್ನಾಟಕ ಭಾಗದಿಂದ ಮಾಜಿ ಶಾಸಕ, ಮರಾಠಾ‌ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮೂಳೆ ಅವರಿಗೆಗೆ ಮಣೆ ಹಾಕಲಾಗಿದೆ.

ವಿಧಾನ ಪರಿಷತ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದೆ ಸುಮಲತಾ ಮತ್ತಿತರರಿಗೆ ನಿರಾಶೆಯಾಗಿದೆ.

Advertisement

ನಾಮಪತ್ರ ಸಲ್ಲಿಕೆಗೆ ಸೋಮವಾರ ಅಂತಿಮ ದಿನವಾಗಿದ್ದು, ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಗುರುವಾರ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಜೂನ್ 13ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next