Advertisement

ವಿಧಾನ ಪರಿಷತ್‌ : ಕಾಂಗ್ರೆಸ್‌ನ ನಾಲ್ವರು ಅಭ್ಯರ್ಥಿಗಳ ಹೆಸರು ಪ್ರಕಟ 

04:44 PM May 30, 2018 | Team Udayavani |

ಬೆಂಗಳೂರು: ವಿಧಾನಪರಿಷತ್‌ ಚುನವಾಣೆಗೆ ಕಾಂಗ್ರೆಸ್‌ ಪಕ್ಷ ನಾಲ್ವರು ಅಭ್ಯರ್ಥಿಗಳ ಹೆಸರನ್ನು ಬುಧವಾರ ಪ್ರಕಟಿಸಿದೆ.

Advertisement

ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ, ಕೆ.ಗೋವಿಂದ್‌ ರಾಜ್‌ , ಅರವಿಂದ್‌ ಕುಮಾರ್‌ ಎಸ್‌.ಅರಳಿ ಮತ್ತು ಬೆಳ್ತಂಗಡಿಯ ಹರೀಶ್‌ ಕುಮಾರ್‌ ಅವರನ್ನು ಅಭ್ಯರ್ಥಿಗಳನ್ನಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅನುಮೋದನೆ ನೀಡಿದ್ದರು. 

ಜೂನ್‌ ತಿಂಗಳಿನಲ್ಲಿ  11 ವಿಧಾನ ಪರಿಷತ್‌ ಸ್ಥಾನಗಳು ತೆರವಾಗುತ್ತಿರುವ ಹಿನ್ನಲೆಯಲ್ಲಿ ಚುನಾವಣೆ ನಡೆಯುತ್ತಿದೆ. 

ವಿಧಾನಸಭೆಯ ಸಂಖ್ಯಾ ಬಲದ ಆಧಾರದಲ್ಲಿ ಬಿಜೆಪಿ 5 , ಕಾಂಗ್ರೆಸ್‌ 4 ಮತ್ತು ಜೆಡಿಎಸ್‌ 2 ಸ್ಥಾನಗಳನ್ನು ಗೆಲ್ಲಬಹುದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next