Advertisement

ಮುಚ್ಚಿದ ಶಾಲೆಯನ್ನು ತೆರೆಸಿದ ಶಾಸಕರು: ಪಟ್ಟು ಬಿಡದ ಹೆತ್ತವರು

10:13 PM May 30, 2019 | Team Udayavani |

ಹಳೆಯಂಗಡಿ: ಸುಮಾ ರು 180 ವರ್ಷಗಳ ಇತಿಹಾಸ ಇರುವ ಹಳೆಯಂಗಡಿಯ ಸರಕಾರಿ ಅನು ದಾನಿತ ಯುಬಿಎಂಸಿ ಶಾಲೆಗೆ ಬೀಗ ಹಾಕಿರುವುದನ್ನು ಶಾಸಕ ಉಮಾನಾಥ ಕೋಟ್ಯಾನ್‌ ಅವರ ನಿರ್ದೇಶನದಂತೆ ಗುರುವಾರ ತೆರವು ಮಾಡಿ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಯಿತು. ಈ ಕುರಿತು ಮೇ 30 ಉದಯವಾಣಿ ಸುದಿನಲ್ಲಿ ವಿಶೇಷ ವರದಿಯ ಮೂಲಕ ಬೆಳಕು ಚೆಲ್ಲಲಾಗಿತ್ತು.

Advertisement

ಬುಧವಾರ ಶಾಲಾ ಆರಂಭೋತ್ಸ ವದಂದು ಶಾಲೆಗೆ ಬಂದಿದ್ದ ಹೆತ್ತವರಿಗೆ ಮತ್ತು ಮಕ್ಕಳಿಗೆ ಬೀಗ ಜಡಿದು ಸ್ವಾಗತಿಸಿ, ಏಕಾಏಕೀ ಶಾಲೆಗೆ ಬರಬೇಡಿ ಎಂದು ಸೂಚಿಸಿದ್ದರಿಂದ ಆಕ್ರೋಶಗೊಂಡ ಹೆತ್ತವರು, ನಿರಂತರ ಪ್ರಯತ್ನದಿಂದ ಕಳೆದ ಒಂದು ವರ್ಷದ ಹೋರಾಟಕ್ಕೆ ತಾರ್ಕಿಕ ಅಂತ್ಯವನ್ನು ಶಾಸಕರ ಸಮ್ಮುಖದಲ್ಲಿ ಕಂಡಂತಾಗಿದೆ.

ಗುರುವಾರ ಸ್ಥಳಕ್ಕೆ ಆಗಮಿಸಿದ ಶಾಸಕ ಉಮಾನಾಥ ಕೋಟ್ಯಾನ್‌ ಅವರಲ್ಲಿ ಹೆತ್ತವರು, ಶಾಲೆಯನ್ನು ಉಳಿಸಲು ಹೋರಾಟ ನಡೆಸುತ್ತಿರುವ ನಂದಾ ಪಾçಯಸ್‌ ಅವರು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವನ್ನು ವಿವರಿಸಿದರು. ಸುಮಾರು 50 ಮಕ್ಕಳಿದ್ದರೂ ಸಹ ಶಿಕ್ಷಕರನ್ನು ನೀಡದಿರುವುದನ್ನು ಪ್ರತಿಭಟಿಸಿದ ಪೋಷಕರ ಮಾತನ್ನು ಆಲಿಸಿ ಶಿಕ್ಷಣ ಸಂಯೋಜಕರಿಗೆ ದೂರವಾಣಿಯ ಮೂಲಕ ಮಾತನಾಡಿದ ಶಾಸಕರು, ಇಂದೇ ಶಿಕ್ಷಕರನ್ನು ನೇಮಿ ಸಬೇಕು ಎಂದರು.

ಆಡಳಿತ ಮಂಡಳಿಯ ಪರವಾಗಿ ಹಳೆಯಂಗಡಿ ಯುಬಿಎಂಸಿ ಚರ್ಚ್‌ನ ಸಭಾ ಪಾಲಕ ವಂ| ವಿನಯ್‌ಲಾಲ್‌ ಬಂಗೇರ ಅವರೊಂದಿಗೆ ಶಾಸಕರು ಮಾತನಾಡಿ, ಇಲಾಖೆಯಿಂದ ಶಿಕ್ಷಕರ ನೇಮಕವಾಗುತ್ತದೆ. ಶಾಲೆಯನ್ನು ಕೂಡಲೇ ತೆರೆದು ನೂತನ ದಾಖಲಾತಿಯ ಪ್ರಕ್ರಿಯೆಗೆ ಚಾಲನೆ ನೀಡಲು ಸಹಕರಿಸಬೇಕು ಎಂದು ವಿನಂತಿಸಿದ ನಂತರ ಆಡಳಿತ ಮಂಡಳಿಯ ಪರವಾಗಿ ಐರಿನ್‌ ಕರ್ಕಡ ಅವರು ಶಾಲೆಯ ಬೀಗವನ್ನು ತೆರೆದರು.

ಜಿ.ಪಂ. ಸದಸ್ಯ ವಿನೋದ್‌ಕುಮಾರ್‌ ಬೊಳ್ಳೂರು ಹಾಗೂ ತಾ. ಪಂ. ಸದಸ್ಯ ಜೀವನ್‌ ಪ್ರಕಾಶ್‌ ಕಾಮೆರೊಟ್ಟು ಅವರಿಗೆ ಮುಂದಿನ ಹಂತದ ಜವಾಬ್ದಾರಿಯನ್ನು ಹಳೇ ವಿದ್ಯಾರ್ಥಿಯ ನೆಲೆಯ ಜತೆಗೆ ಜನಪ್ರತಿನಿಧಿಯಾಗಿ ಶಾಲೆಯ ಬಗ್ಗೆ ಚಿಂತನೆ ನಡೆಸಲು ಶಾಸಕರು ಸೂಚಿಸಿದರು.

Advertisement

ಪತ್ರಿಕೆಯೊಂದಿಗೆ ಮಾತನಾಡಿದ, ಶಾಸಕ ಉಮಾನಾಥ ಕೋಟ್ಯಾನ್‌ ಎಂದರು.ಹಳೆಯಂಗಡಿ ಗ್ರಾ.ಪಂ.ನ ಸದಸ್ಯರಾದ ವಿನೋದ್‌ಕುಮಾರ್‌ ಕೊಳುವೈಲು, ಅಶೋಕ್‌ ಸಸಿಹಿತ್ಲು, ಚಿತ್ರಾ ಸುಕೇಶ್‌ ಸಸಿಹಿತ್ಲು, ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು, ಹಳೆಯಂಗಡಿ ಪಿಸಿಎ ಬ್ಯಾಂಕ್‌ನ ನಿರ್ದೇಶಕ ಹಿಮಕರ್‌ ಕದಿಕೆ, ಮೀನುಗಾರಿಕೆ ಪ್ರಕೋಷ್ಠದ ಶೋಭೇಂದ್ರ ಸಸಿಹಿತ್ಲು, ಅನಂದ ಸುವರ್ಣ ಸಸಿಹಿತ್ಲು, ಸೂರ್ಯ ಕಾಂಚನ್‌ ಸಸಿಹಿತ್ಲು, ಎಚ್‌. ರಾಮಚಂದ್ರ ಶೆಣೈ, ಮನೋಜ್‌ಕುಮಾರ್‌, ಹರೀಶ್‌, ರಾಜೇಶ್‌, ಮಹಾಬಲ ಅಂಚನ್‌, ಶಾಲಾ ಪೋಷಕರು, ಉಪಸ್ಥಿತರಿದ್ದರು.

 ಹೋರಾಟ ನಿರಂತರ
ಶಾಲೆಯನ್ನು ಪುನರಾರಂಭಿಸಲು ನಡೆಸಿದ ಹೋರಾಟ ಇನ್ನು ಶಾಲಾಭಿವೃದ್ಧಿಗೆ ಹೋರಾಟ ಮುಂದುವರಿಸಲಾಗುವುದು. ಹೆತ್ತವರು, ಹಳೇ ವಿದ್ಯಾರ್ಥಿಗಳು, ವಿವಿಧ ಎನ್‌ಜಿಓ ಹಾಗೂ ಖಾಸಗಿ ಕಂಪೆನಿಗಳ ಮೂಲಕ ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸಿ ಭದ್ರ ಬುನಾದಿಯನ್ನು ಹಾಕುತ್ತೇವೆ, ಚರ್ಚ್‌ನ ಬಿಷಪ್‌, ಸಭಾಪಾಲಕರು, ಶಾಸಕರು ಸಹಿತ ಜನಪ್ರತಿನಿಧಿಗಳ ಸಹಕಾರ ಮೆಚ್ಚುವಂತದ್ದು.
– ನಂದಾ ಪಾಯಸ್‌, ಹೋರಾಟಗಾರರು

 ಶಾಲೆಯ ಅಭಿವೃದ್ಧಿಗೆ ಸಹಕರಿಸಿ
ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಮಂದಿ ಗೌರವ ಶಿಕ್ಷಕಿಯರೇ ಮುಂದುವರಿಯಲಿದ್ದು. ದಾಖಲಾತಿ ಪ್ರಕ್ರಿಯೆಯನ್ನು ಮುಂದಿನ ನೂತನ ಶಿಕ್ಷಕರ ಸಮ್ಮಿಖದಲ್ಲಿ ನಡೆಯಲಿದೆ. ಹೆತ್ತವರ,ಶಾಲೆಯ ಹಳೆ ವಿದ್ಯಾರ್ಥಿಗಳು ಈ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು, ಇಲಾಖೆಯಿಂದ ಬೇಕಾದ ಸೌಲಭ್ಯವನ್ನು ಮಂಜೂರು ಮಾಡುವ ಜವಾಬ್ದಾರಿ ನನ್ನದಾಗಿದೆ .
– ಉಮಾನಾಥ ಕೋಟ್ಯಾನ್‌,ಶಾಸಕ

 ಶಿಕ್ಷಕರ ನೇಮಕ
ಶಾಸಕರ ಸೂಚನೆಯಂತೆ ಶಿಕ್ಷಣ ಸಂಯೋಜಕಿ ಮಂಜುಳಾ, ಸಿಆರ್‌ಪಿ ಕುಸುಮಾ ಅವರು ಶಾಲೆಗೆ ಭೇಟಿ ನೀಡಿದ್ದಾರೆ. ಶಾಲೆಗೆ ಮಂಜುನಾಥ ಕಾಂಬ್ಲಿ ಅವರನ್ನು ಶಿಕ್ಷಕರನ್ನಾಗಿ ನಿಯುಕ್ತಿಗೊಳಿಸಿ ಡಿಡಿಪಿಐ ಆದೇಶಿಸಿದ್ದಾರೆ.ಶಾಲೆಯ ಅಭಿವೃದ್ಧಿಯನ್ನು ಎಲ್ಲರೊಂದಿಗೆ ನಡೆಸಲಾಗುವುದು.
 - ವಿನೋದ್‌ಕುಮಾರ್‌ ಬೊಳ್ಳೂರು,ಜಿ.ಪಂ.ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next