ಯಾದಗಿರಿ: ಬೇಡ ಜಂಗಮರಿಗೆ ಸರ್ಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಣೆ ಮಾಡುವುದನ್ನು ಖಂಡಿಸಿದ ಕುಡಚಿ ಶಾಸಕ ಪಿ.ರಾಜೀವ್ ವಿರುದ್ಧ ನಗರದಲ್ಲಿ ಜಿಲ್ಲಾ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಅಖೀಲ ಕರ್ನಾಟಕ ಬೇಡ ಜಂಗಮ ಮಹಾಸಭೆ ಸಂಚಾಲಕಿ ಎಂಪಿ ಸುಜಾತ ಮಠದ್, ರದ್ದಾದ ಸುತ್ತೋಲೆ ಇಟ್ಟುಕೊಂಡು ಸದನಕ್ಕೆ ಸುಳ್ಳು ಮಾಹಿತಿ ನೀಡಿ ಅಪಪ್ರಚಾರ ಮಾಡುವ ಮೂಲಕ ಪವಿತ್ರವಾದ ಸದನದ ಮೌಲ್ಯಕ್ಕೆ ಧಕ್ಕೆ ತಂದಿದ್ದಾರೆ. ಬೇಡ ಜಂಗಮ ಸಮಾಜದ ಇತರೇ ಸಮುದಾಯಗಳೊಂದಿಗೆ ಹಲವು ದಶಕಗಳಿಂದ ಅನ್ಯೊನ್ಯವಾಗಿ ಜೀವನ ಸಾಗಿಸುತ್ತಿದೆ. ಅಲ್ಲದೆ ನಾವು ಸಂವಿಧಾನ ನೀಡಿದ ಹಕ್ಕನ್ನು ಕೇಳುತ್ತಿದ್ದೇವೆ ಎಂದು ಹೇಳಿದರು.
ಸಮಾಜದ ಗೌರವಾಧ್ಯಕ್ಷ ಬಸವರಾಜ ಹಿರೇಮಠ ಮಾತನಾಡಿ, ಜಿಲ್ಲಾ ಗೌರವಾಧ್ಯಕ್ಷ ಗೌರಿಶಂಕರ ರಾಮಗಿರಿ ಹಿರೇಮಠ ಮಾತನಾಡಿ, ಕೆಲ ಕುತಂತ್ರಿ ರಾಜಕಾರಣಿಗಳು ದುರುದ್ದೇಶದಿಂದ ಇಲ್ಲ-ಸಲ್ಲದ ಸುತ್ತೋಲೆ ಹೊರಡಿಸುವುದು, ಅಧಿಕಾರಿಗಳಿಗೆ ತೊಂದರೆ ಕೊಡುವುದು, ಜಾತಿ ಪ್ರಮಾಣ ಪತ್ರ ಪಡೆದವರಿಗೆ ಹೆದರಿಸುವುದು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.
ದಾಸಬಾಳ ಮಠದ ವೀರೇಶ್ವರ ಸ್ವಾಮಿಗಳು, ಕೆಂಭಾವಿಯ ಹೀರೇಮಠದ ಚನ್ನವೀರ ಸ್ವಾಮಿಗಳು, ಕಡೇಚೂರಿನ ಗುರುಮೂರ್ತಿ ಶಿವಾಚಾರ್ಯರು, ಮುದನೂರಿನ ಸ್ವಾಮಿಗಳು, ಕಲ್ಯಾಣದ ಲೋಕಾಪುರದ ಸ್ವಾಮಿಗಳು, ಜಿಲ್ಲಾಧ್ಯಕ್ಷ ಶರಣಬಸವರ ಸ್ವಾಮಿ ಬಿ. ಬದ್ದೇಪಲ್ಲಿ, ಪುರೋಹಿತರ ಸಂಘದ ಜಿಲ್ಲಾಧ್ಯಕ್ಷ ಚನ್ನಯ್ಯಸ್ವಾಮಿ ಸನ್ನತಿ, ನಾಗಯ್ಯಸ್ವಾಮಿ ಹುಣಸಗಿ, ಸುನೀಲ ಪಂಚಾಂಗಮಠ, ಪಂಪಯ್ಯ ಸ್ವಾಮಿ, ಸೋಮಶೇಖರಯ್ನಾ ಸ್ವಾಮಿ, ಗೌರಿಶಂಕರ ಹಿರೇಮಠ ವಡಿಗೇರಾ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಯ್ಯಸ್ವಾಮಿ, ಚನ್ನವೀರಯ್ಯ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ಬೋಳಾರಿ, ಚನ್ನಯ್ನಾ ಸ್ವಾಮಿ, ಶಿವಯ್ಯ ಸ್ವಾಮಿ ಹೆಡಗಿಮದ್ರಾ, ಮಲ್ಲಿಕಾರ್ಜುನ ಹಿರೇಮಠ, ಪ್ರಭುಸ್ವಾಮಿ ಮುಂಡರಗಿಮಠ, ರುದ್ರಸ್ವಾಮಿ, ಸಂದೇಶ ಕಾಳೆಬೆಳಗುಂದಿ, ಸಿದ್ದರಾಮಯ್ಯ ಸ್ವಾಮಿ, ದೀಪಿಕಾ, ನಾಗಯ್ಯಸ್ವಾಮಿ, ಕಲ್ಯಾಣಿ ರಾವುರಮಠ, ರಾಜುಸ್ವಾಮಿ ಆನಂಪಲ್ಲಿ, ಮಂತ್ರಯ್ಯಸ್ವಾಮಿ, ಮಲ್ಲುಸ್ವಾಮಿ ಹೊಸಳ್ಳಿ, ಮಲ್ಲುಸ್ವಾಮಿ ಗುಡಿಮಠ ಇದ್ದರು.