Advertisement

ಶಾಸಕರೂ ಗ್ರಾಮ ವಾಸ್ತವ್ಯ ಮಾಡಿ: ಅಶೋಕ್‌

01:36 AM Feb 20, 2022 | Team Udayavani |

ಮಂಗಳೂರು: ಕಂದಾಯ ಇಲಾಖೆಯಿಂದ ಮನೆ ಬಾಗಿಲಿಗೆ ಪಿಂಚಣಿ, ಕಂದಾಯ ಕಾಯ್ದೆಗೆ ತಿದ್ದುಪಡಿ, ಮೂರೇ ದಿನಗಳಲ್ಲಿ ಕನ್ವರ್ಷನ್‌ ಮಂಜೂರು, ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಹೀಗೆ ಅನೇಕ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಗಳಲ್ಲಿ ನಡೆಯುವ ಕಡತ ವಿಲೇವಾರಿ ಅಭಿಯಾನಕ್ಕೆ ಪೂರಕವಾಗಿ ಶಾಸಕರೂ ಒಂದು ವಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಾಕಿಕೊಳ್ಳಬೇಕು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

Advertisement

ದ.ಕ. ಜಿಲ್ಲೆಯಾದ್ಯಂತ ಹಮ್ಮಿಕೊಂಡಿ ರುವ 10 ದಿನಗಳ ಕಡತ ವಿಲೇವಾರಿ ಅಭಿನಯಾನಕ್ಕೆ ಮಂಗಳೂರಿನ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಇದೇ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಡತ ವಿಲೇ ವಾರಿ ಅಭಿಯಾನ ಹಮ್ಮಿಕೊಳ್ಳ ಲಾಗು ವುದು. ಪ್ರತೀ ಜಿಲ್ಲೆಯಲ್ಲೂ ಸ್ವತಃ ನಾನೇ ಚಾಲನೆ ನೀಡಲಿದ್ದೇನೆ ಎಂದರು.

ಅಮಾಯಕರು, ಸರಕಾರಿ ಕಚೇರಿ ಯನ್ನೇ ನೋಡದವರು, ಸಮಸ್ಯೆ ಇತ್ಯರ್ಥಕ್ಕಾಗಿ ಕಚೇರಿಗಳಿಗೆ ಅಲೆ ದಾಡುವವರಿಗೆ ಈ ಅಭಿಯಾನ ಧ್ವನಿ ಯಾಗಬೇಕು. ಸಾಮಾನ್ಯ ಜನತೆಯ ನೋವುಗಳಿಗೆ ಸ್ಪಂದಿಸುವ ಕೆಲಸ ಆಗಬೇಕು. ಅಂಗವಿಕಲರ, ಪಿಂಚಣಿ ದಾರರ ಸಮಸ್ಯೆ ಇತ್ಯರ್ಥಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.

ಒತ್ತುವರಿ ವ್ಯವಸಾಯ
ಜಮೀನು ಲೀಸ್‌ಗೆ
ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಸರಕಾರಿ ಜಮೀನು ಒತ್ತುವರಿ ಮಾಡಿ ವ್ಯವಸಾಯ, ತೋಟ ಮಾಡಿಕೊಂಡಿದ್ದರೆ ಅಂತಹ ಜಮೀನುಗಳನ್ನು ಕೃಷಿಕರಿಗೆ 30 ವರ್ಷ ಅವಧಿಗೆ ಲೀಸ್‌ನಲ್ಲಿ ನೀಡುವ ಚಿಂತನೆ ಇದೆ. ಪ್ರಸ್ತುತ ಇಂಥ ಜಮೀನುಗಳ ಬಗ್ಗೆ ಅತಂತ್ರ ಸ್ಥಿತಿ ಇದೆ. ನಿರ್ದಿಷ್ಟ ಮೊತ್ತ ಪಾವತಿಸಿ ಲೀಸ್‌ಗೆ ನೀಡಿದರೆ, ಸರಕಾರಕ್ಕೂ ಆದಾಯ, ರೈತರ ಗೊಂದಲ ಪರಿಹಾರಗೊಳ್ಳುತ್ತದೆ. ಚಿಕ್ಕಮಗಳೂರಿನಲ್ಲಿ 45 ಸಾವಿರ ಎಕರೆ, ಹಾಸನದಲ್ಲಿ 25 ಸಾವಿರ ಎಕರೆ ಇಂತಹ ಜಮೀನು ಇದೆ ಎಂದರು.

Advertisement

ಕರಾವಳಿ ಜಿಲ್ಲೆಯಲ್ಲಿ ಕುಮ್ಕಿ, ಕಾನ, ಬಾಣೆ ಜಮೀನು ಸಮಸ್ಯೆ ಇತ್ಯರ್ಥಕ್ಕೆ ಈಗಾಗಲೇ ಕಂದಾಯ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸ ಲಾಗಿದ್ದು ಶೀಘ್ರದಲ್ಲೇ ಕ್ರಮ ಕೈಗೊಳ್ಳ ಲಾಗುವುದು. ಕುಮ್ಕಿ ಅಥವಾ ಗೋಮಾಳ ಜಮೀನನ್ನು ಸಂಘ- ಸಂಸ್ಥೆಗಳಿಗೆ ನೀಡುವ ಯಾವುದೇ ಪ್ರಸ್ತಾವನೆ ಇಲ್ಲ. ಈ ಜಮೀನು ರೈತರಿಗೆ ನೀಡಿ ನ್ಯಾಯ ಒದಗಿಸಬೇಕು ಎಂಬುದು ನನ್ನ ನಿಲುವು ಆಗಿದೆ. ನಾನು ರೈತ ಪರವಾಗಿ ಇದ್ದೇನೆ ಎಂದರು.

ಬಾಕಿ ಅರ್ಜಿ ವಿಲೇವಾರಿ: ಸುನಿಲ್‌
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಮಾತನಾಡಿ, ಆಡಳಿತಕ್ಕೆ ವೇಗ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ನೀಡು ವುದು ಮತ್ತು ಮಧ್ಯವರ್ತಿಗಳು, ವಶೀಲಿ ಬಾಜಿ ಇಲ್ಲದೆ ಸರಕಾರಿ ಕಚೇರಿ ಗಳಲ್ಲಿ ಜನಸಾಮಾನ್ಯರ ಕೆಲಸ ಆಗಬೇಕು ಎಂಬುದು ಕಡತ ವಿಲೇವಾರಿ ಅಭಿಯಾನದ ಉದ್ದೇಶ ವಾಗಿದೆ ಎಂದರು.

ಸಾಂಕೇತಿಕವಾಗಿ ಕಡತ ವಿಲೇವಾರಿ ನಡೆಸಿ, ಫ‌ಲಾನುಭವಿಗಳಿಗೆ ವಿವಿಧ ಸೌಲಭ್ಯ ಪತ್ರಗಳನ್ನು ಹಸ್ತಾಂತರಿಸಲಾಯಿತು.

ಶಾಸಕರಾದ ವೇದವ್ಯಾಸ ಕಾಮತ್‌, ಡಾ| ವೈ.ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ವಿಧಾನಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ಉಪ ಮೇಯರ್‌ ಸುಮಂಗಲಾ ರಾವ್‌, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ, ಜಿ.ಪಂ. ಸಿಇಒ ಡಾ| ಕುಮಾರ್‌, ಪಾಲಿಕೆ ಆಯುಕ್ತ ಅಕ್ಷಯ ಶ್ರೀಧರ್‌ ಉಪಸ್ಥಿತರಿದ್ದರು.

82,400 ಕಡತಗಳು ಬಾಕಿ
ಸರಕಾರಿ ಕಚೇರಿಗಳಲ್ಲಿ ಬಾಕಿ ಇರುವ ಕಡತಗಳನ್ನು ಹಳೆ ಕಡತ, ದೂರು ಅರ್ಜಿ ಹಾಗೂ ವಿವಿಧ ಸೇವೆಗಳ ಅರ್ಜಿ ಎಂಬುದಾಗಿ 3 ವರ್ಗೀಕರಣ ಮಾಡಲಾಗಿದೆ. 28,728 ಹಳೆ ಕಡತಗಳು, 2,099 ದೂರು ಅರ್ಜಿ, 51,573 ವಿವಿಧ ಸೇವೆಗಳ ಅರ್ಜಿ ಸೇರಿ ಒಟ್ಟು 82,400 ಕಡತಗಳು ವಿಲೇವಾರಿಗೆ ಬಾಕಿ ಇವೆ. 10 ದಿನಗಳ ಅಭಿಯಾನದಲ್ಲಿ ಎಲ್ಲ ಕಡತಗಳನ್ನು ವಿಲೇವಾರಿ ಮಾಡಲಾಗುವುದು. ಫೆ. 28ರ ಬಳಿಕ ಮಾರ್ಚ್‌ನಲ್ಲಿ ಆಯಾ ತಾಲೂಕುಗಳಲ್ಲಿ ಕಂದಾಯ ಮೇಳ ಆಯೋಜನೆ ಮಾಡಿ ಫ‌ಲಾನುಭವಿಗಳಿಗೆ ಹಕ್ಕುಪತ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹಸ್ತಾಂತರಿಸಲಾಗುವುದು ಎಂದು ಸಚಿವ ಸುನಿಲ್‌ ಕುಮಾರ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next