Advertisement
“ನೀರಿದ್ದರೂ ನಿರ್ವಹಣೆಯ ವೈಫಲ್ಯದಿಂದಾಗಿ ಉಡುಪಿ ನಗರಕ್ಕೆ ಕುಡಿಯುವ ನೀರಿನ ಅಭಾವ ಉಂಟಾ ಗಿದೆ. ಈ ಹಿಂದೆಯೇ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಹಲವು ಬಾರಿ ಸೂಚಿಸಿದರೂ ಗಮನ ಹರಿಸಿಲ್ಲ. ಈಗ ತಡವಾಗಿ ಎಚ್ಚೆತ್ತುಕೊಂ ಡಿದ್ದಾರೆ. ಶೀರೂರು ಅಣೆಕಟ್ಟಿನಿಂದ ಬಜೆ ಅಣೆಕಟ್ಟಿನ ವರೆಗೆ ಅಲ್ಲಲ್ಲಿ ಗುಂಡಿಗಳಲ್ಲಿ ನೀರಿದೆ. ಅದು ಬಜೆ ಡ್ಯಾಂಗೆ ಪ್ರವಹಿಸು ವಂತೆ ಮಾಡಿದರೆ ಮುಂದಿನ 45 ದಿನಗಳವರೆಗೆ ನೀರು ಕೊಡಬಹುದು. ಪ್ರಸ್ತುತ ನಾನು ಮತ್ತು ನಗರಸಭಾ ಸದಸ್ಯರು ಸಾರ್ವಜನಿಕರಿಗೆ ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿದ್ದೇವೆ’ ಎಂದು ರಘುಪತಿ ಭಟ್ ತಿಳಿಸಿದರು.
ಈ ನಡುವೆ ಶಾಸಕರು ಶ್ರಮದಾನದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ವಾಟ್ಸ್‌ಆ್ಯಪ್‌ನಲ್ಲಿ ಕರೆ ನೀಡಿದ್ದಾರೆ ಎಂಬ ಬಗ್ಗೆ ಚುನಾವಣ ಅಧಿಕಾರಿಗಳಿಗೆ ದೂರು ಬಂದಿದೆ. ಪಕ್ಷದ ಏಜೆಂಟರನ್ನು ಸಂಪರ್ಕಿಸಿದಾಗ ಜಾಲತಾಣದಲ್ಲಿ ಯಾವುದೇ ಕರೆ ನೀಡಿಲ್ಲ ಎಂದು ತಿಳಿದು ಬಂದಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.