Advertisement
ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ವಿದ್ಯಾವಂತರಿಗೆ ನ್ಯಾಯಬೆಲೆ ಅಂಗಡಿಯ ಪ್ರಾ ಕಾರಣ (ಲೈಸೆನ್ಸ್) ನೀಡುವ ಪದ್ಧತಿ ಹಳಿ ತಪ್ಪಿದ ಬಗೆ ಕೊನೆಗೂ ಚರ್ಚೆಗೆ ಗ್ರಾಸವಾಗಿದೆ. ಸರಕಾರದ ನಿಯಮ ಪ್ರಕಾರ ಒಬ್ಬರಿಗೆ ಒಂದಕ್ಕಿಂತಲೂ ಹೆಚ್ಚಿಗೆ ನ್ಯಾಯಬೆಲೆ ಅಂಗಡಿಗಳ ಉಸ್ತುವಾರಿ ವಹಿಸಲು ಅವಕಾಶವೇ ಇಲ್ಲ. ಆದರೂ, ಇದನ್ನು ನಡೆಸಿಕೊಂಡು ಹೊರಟಿದ್ದ ಆಹಾರ ಇಲಾಖೆಯ ಬಣ್ಣವನ್ನು ಶಾಸಕರು ಬಯಲು ಮಾಡಿದ್ದಾರೆ.
Related Articles
Advertisement
ರಾಜಕೀಯ ಪ್ರಭಾವದ ಶಂಕೆ: ತಾಲೂಕಿನಲ್ಲಿ 50ಕ್ಕೂ ಹೆಚ್ಚು ಅಂಗಡಿಗಳನ್ನು ಬೇಕಿದ್ದವರಿಗೆ ಮಾತ್ರ ಲಗತ್ತು ಮಾಡಿ ಪಡಿತರ ಹಂಚಿಕೆಗೆ ಅವಕಾಶ ನೀಡಲಾಗಿದೆ. ಇದರ ಬೆನ್ನ ಹಿಂದೆ ರಾಜಕೀಯ ಪ್ರಭಾವ ಕೆಲಸ ಮಾಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಎರಡ್ಮೂರು ದಶಕಗಳಿಂದಲೂ ಆಹಾರ ಇಲಾಖೆಯೊಂದಿಗೆ ಪ್ರಭಾವ ಹೊಂದಿದ ಶಕ್ತಿಗಳು ವ್ಯವಸ್ಥೆಯನ್ನು ನಡೆಸಿಕೊಂಡು ಬಂದಿವೆ. ಇದೀಗ ನೇರವಾಗಿ ಒಬ್ಬರಿಗೆ ಒಂದೇ ಅಂಗಡಿ ಉಸ್ತುವಾರಿ ನೀಡಬೇಕೆಂಬ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಹಾಗೂ ಮಸ್ಕಿ ಶಾಸಕ ಆರ್.ಬಸನಗೌಡ ಅವರ ಸೂಚನೆಯನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಕಸರತ್ತು ನಡೆಸಿದ್ದಾರೆ.
ಮೂಲ ಅಂಗಡಿಕಾರರು ಎಲ್ಲಿ?: 50ಕ್ಕೂ ಹೆಚ್ಚು ಅಂಗಡಿಗಳ ನ್ಯಾಯಬೆಲೆ ಅಂಗಡಿ ವಿತರಣೆ ಪರವಾನಗಿ ಪಡೆದ ವ್ಯಕ್ತಿಗಳು ಈವರೆಗೂ ತಮ್ಮ ಕೆಲಸ ಆರಂಭಿಸಿಲ್ಲ. ಅವರು ಆರಂಭಿಸಲಿಕ್ಕೂ ಸಾರ್ವಜನಿಕ ದೂರು ಹಾಗೂ ಪ್ರಭಾವಗಳು ಕೈಬಿಡುತ್ತಿಲ್ಲವೆಂಬ ದೂರುಗಳಿವೆ. ನ್ಯಾಯಬೆಲೆ ಅಂಗಡಿಗಳಿಗೆ ಪ್ರಾಕಾರಣ ಅಧಿಕಾರ ನೀಡುವ ಕೆಲಸ ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ಒಳಪಟ್ಟಿದೆ. ನ್ಯಾಯಬೆಲೆ ಅಂಗಡಿಗಳು ಕೂಡ ರಾಜಕೀಯ ದಾಳವಾಗುತ್ತಿರುವ ಪರಿಣಾಮ ಹದಗೆಟ್ಟಿರುವ ಈ ವ್ಯವಸ್ಥೆಗೆ ಇದೀಗ ಚಿಕಿತ್ಸೆ ನೀಡುವ ಪ್ರಯತ್ನ ಆರಂಭವಾಗಿವೆ.
*ಯಮನಪ್ಪ ಪವಾರ