Advertisement

ಉಪವಿಭಾಗ ಉಳಿಸಿಕೊಳ್ಳಲು ಶಾಸಕರ ಯತ್ನ

03:51 PM Nov 10, 2018 | |

ಹರಪನಹಳ್ಳಿ: ಪಟ್ಟಣದ ಅಕ್ರಮ ಡೋರ್‌ ನಂಬರ್‌ ರದ್ದತಿ ಸಂಬಂಧಿ ಸಿದಂತೆ ಇಲ್ಲಿಯ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮ ಜರುಗಿಸಲು ಶಾಸಕರ ಜೊತೆ ಈಗಾಗಲೇ ಚರ್ಚಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎಚ್‌.ಕೆ. ಹಾಲೇಶ್‌ ತಿಳಿಸಿದರು.

Advertisement

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ಪಟ್ಟಣದ 10 ವಾರ್ಡ್‌ಗಳಿಗೆ ಎಲ್ಲ ಸೌಲಭ್ಯ ನೀಡಿದರೂ ಅನೇಕರು ಅಕ್ರಮವಾಗಿ ರಸ್ತೆಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಸರ್ಕಾರದ ಆಸ್ತಿ ರಕ್ಷಿಸಿ ಎಂದು ಜೋಗಿನ ನಾಗರಾಜ್‌ ಎಂಬುವವರು ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸುಮಾರು 140 ಅಕ್ರಮ ಡೋರ್‌ ನಂಬರ್‌ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಕೆ. ಲಕ್ಷ್ಮಣ್‌ ಮಾತನಾಡಿ, ತಾಲೂಕಿನಲ್ಲಿರುವ ಉಪವಿಭಾಗ ಕಚೇರಿಗಳನ್ನು ಉಳಿಸಲು ಶಾಸಕ ಜಿ. ಕರುಣಾಕರರೆಡ್ಡಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದ ಮುಖಂಡರ ಆರೋಪದಲ್ಲಿ ಹುರುಳಿಲ್ಲ. ಕಂದಾಯ, ಕೃಷಿ, ಜಿ.ಪಂ ಇಂಜಿಯರಿಂಗ್‌, ಡಿವೈಎಸ್ಪಿ ಉಪವಿಭಾಗಗಳನ್ನು ಸ್ಥಳಾಂತರಗೊಳಿಸದಂತೆ ಸಂಬಂಧಿಸಿದ ಸಚಿವರಿಗೆ ಈಗಾಗಲೇ ಪತ್ರ ಬರೆದಿದ್ದಾರೆ. ಅಲ್ಲದೇ ಸಚಿವರ ಜೊತೆ ಚರ್ಚೆ ಕೂಡ ನಡೆಸಿದ್ದು, ಉಪವಿಭಾಗ ಕಚೇರಿಗಳು ಹರಪನಹಳ್ಳಿಯಲ್ಲಿಯೇ ಉಳಿಯುತ್ತವೆ ಎಂದು ತಿಳಿಸಿದರು.

ಹರಪನಹಳ್ಳಿ ತಾಲೂಕಿಗೆ ಹೈಕ ಸೌಲಭ್ಯ ಸಿಕ್ಕಿರುವುದು ಮಾಜಿ ಶಾಸಕ ಎಂ.ಪಿ.ರವೀಂದ್ರ ಒಬ್ಬರಿಂದಲ್ಲ. ಪ್ರಗತಿಪರ ಸಂಘಟನೆಗಳು, ಮಠಾಧಿಶರು ಸೇರಿದಂತೆ ಪಕ್ಷಾತೀತವಾಗಿ ನಡೆಸಿದ ಹೋರಾಟಕ್ಕೆ ಸಿಕ್ಕ ಫಲವಾಗಿದೆ. ಜಿ.ಕರುಣಾಕರರೆಡ್ಡಿ ಅವರು 2008ರಲ್ಲಿ ಶಾಸಕರಾಗಿದ್ದಾಗ 60 ಕೆರೆಗಳಿಗೆ ನೀರು ತುಂಬುವ ಯೋಜನೆ ಟೆಂಡರ್‌ ಹಂತಕ್ಕೆ ಬಂದಿತ್ತು. ಇದೀಗ ಕೆಲಸ ಪ್ರಾರಂಭವಾಗಿದೆ.

ಸದ್ಯ ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಬಾರದು ಎಂಬ ಕಾರಣಕ್ಕೆ 150 ಕೊಳವೆ ಬಾವಿ ಕೊರೆಸಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ಕಾಂಗ್ರೆಸ್‌ ಮುಖಂಡರು ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು ಎಂದು ತಾಕೀತು ಮಾಡಿದರು. ಬಿಜೆಪಿ ತಾಲೂಕು
ಉಪಾಧ್ಯಕ್ಷ ರಾದ ಕಣವಿಹಳ್ಳಿ ಮಂಜುನಾಥ್‌, ಸಣ್ಣ ಹಾಲಪ್ಪ, ಎಸ್ಟಿ ಘಟಕದ ಅಧ್ಯಕ್ಷ ಲೋಕೇಶ್‌, ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಮುಖಂಡರಾದ ಬೆಣ್ಣೆಹಳ್ಳಿ ರೇವಣ್ಣ, ಪುರಸಭೆ ಸದಸ್ಯ ಬಿ.ಮಹಬೂಬ್‌ ಸಾಬ್‌, ಬೂದಿನವೀನ್‌, ಡಾ| ಮಲಕಪ್ಪ, ಕರೀಗೌಡ, ಯು.ಪಿ. ನಾಗರಾಜ್‌, ಸಂತೋಷ್‌, ಕೊಟ್ರೇಶನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next