Advertisement
ವಿಧಾನ ಸಭಾಚುನಾವಣೆ ಸಮೀಪಿಸುತ್ತಿ ರುವ ವೇಳೆ ಆಡಳಿತ ಪಕ್ಷದ ಶಾಸಕ ರವೀಂದ್ರರ ಈ ನಿರ್ಧಾರ ರಾಜಕೀಯ ವಲಯ ದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಈ ದಿಢೀರ್ ನಿರ್ಧಾರ ಅವರ ಕುಟುಂಬ, ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ಸ್ವತಃ ರವೀಂದ್ರ ಅವರ ತಾಯಿ ನಿರ್ಧಾರ ಬದಲಿಸುವಂತೆ ಸಲಹೆ ನೀಡಿದ್ದಾರೆ. ತಿರ್ಮಾನ ಬದಲಿಸಲು ಕಾರ್ಯಕರ್ತರು ಆತ್ಮಹತ್ಯೆಗೂ ಯತ್ನಿಸಿದ್ದಾರೆ.
ಕೋರುವುದಾಗಿ ಹೇಳಿದರು.
Related Articles
Advertisement
ಆತ್ಮಹತ್ಯೆ ಯತ್ನ: ಎಂ.ಪಿ. ರವೀಂದ್ರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಘೋಷಿ ಸುತ್ತಿದ್ದಂತೆ ಅವರೊಂದಿಗಿದ್ದ ಕಾರ್ಯಕರ್ತರೂ ಸೇರಿ ಎಲ್ಲರೂ ಆಶ್ಚರ್ಯಗೊಂಡರು. ಈ ಸುದ್ದಿ ಹರಡುತ್ತಿದ್ದಂತೆ ಪ್ರವಾಸಿ ಮಂದಿರದ ಬಳಿ ಸೇರಿದ ನೂರಾರು ಕಾರ್ಯಕರ್ತರು ನಿರ್ಧಾರ ಬದಲಿಸುವಂತೆ ಶಾಸಕರಲ್ಲಿ ಪಟ್ಟು ಹಿಡಿದರು. ಸುದ್ದಿಗೋಷ್ಠಿ ಮುಗಿಸಿ ರವೀಂದ್ರ ಕಾರನ್ನೇರಿ ಹೊರಡಲು ಮುಂದಾದಾಗ ಕೆಲವರು ಕಾರಿಗೆ ಅಡ್ಡ ಮಲಗಿದರು. ಮತ್ತೆ ಕೆಲವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಇದನ್ನು ತಡೆದರು. ಎಲ್ಲರ ಕ್ಷಮೆ ಯಾಚಿಸಿದ ರವೀಂದ್ರ ನಿರ್ಧಾರ ಬದಲಿಸಲ್ಲ ಎಂದು ಅಲ್ಲಿಂದ ಹೊರಟರು.
ಸಹಕಾರಿ ಕ್ಷೇತ್ರದಿಂದ ರಾಜಕೀಯಕ್ಕೆ…:ಸಹಕಾರಿ ರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರವೀಂದ್ರ ತಮ್ಮ ತಂದೆ ಎಂ.ಪಿ. ಪ್ರಕಾಶ್ ನಿಧನದ ಬಳಿಕ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟರು. 2013ರ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿದ ರವೀಂದ್ರ 56,954 ಮತಗಳನ್ನು ಪಡೆದು ಬಿಜೆಪಿಯ ಗಣಿಧಣಿ ಜಿ.ಕರುಣಾಕರರೆಡ್ಡಿ ಅವರನ್ನು ಸೋಲಿಸುವ ಮೂಲಕ ಪ್ರಥಮ ಬಾರಿಗೆ ವಿಧಾನಸೌಧ ಪ್ರವೇಶಿಸಿದರು. ಮನವೊಲಿಸಲು ಸಿಎಂ ಯತ್ನ
ಎಂ.ಪಿ. ರವೀಂದ್ರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ವಿಷಯ ತಿಳಿದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ರವೀಂದ್ರ ಅವರೊಂದಿಗೆ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. “ಈ ನಿರ್ಧಾರ ಸರಿಯಲ್ಲ. ದುಡುಕಿನ ಯಾವುದೇ ತೀರ್ಮಾನಕ್ಕೆ ಬರಬೇಡ, ನನ್ನನ್ನು ಭೇಟಿಯಾಗು’ ಎಂದು ಸಿಎಂ ಹೇಳಿದ್ದಾರೆ. ತಮ್ಮನ್ನು ಭೇಟಿಯಾಗಿ ಚರ್ಚಿಸುವುದಾಗಿ ರವೀಂದ್ರ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಚುನಾವಣೆಯಿಂದ ಹಿಂದೆ ಸರಿಯುವುದು ಒಳ್ಳೆಯದಲ್ಲ. ನಮ್ಮ ಕುಟುಂಬದ್ದು ಈಗ ಮೂರನೇ ತಲೆಮಾರಿನ ರಾಜಕಾರಣವಾಗಿದೆ. ಮಗನ ನಿರ್ಧಾರ ನಮಗೂ ಆಘಾತ ತಂದಿದ್ದು, ಚುನಾವಣೆಯಿಂದ ಹಿಂದೆ ಸರಿಯಲು ನಾವು ಬಿಡಲ್ಲ. ನಿರ್ಧಾರ ಬದಲಿಸುವಂತೆ ಈಗಾಗಲೇ ಹೇಳಿದ್ದೇನೆ.
●ಎಂ.ಪಿ.ರುದ್ರಾಂಭ ಪ್ರಕಾಶ್, ಎಂ.ಪಿ.ರವೀಂದ್ರರ ತಾಯಿ