Advertisement
42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮುನಿರತ್ನ ಡಿಎನ್‌ಎ ಪರೀಕ್ಷೆ ಕುರಿತು ಶುಕ್ರವಾರ ವಿಚಾರಣೆ ನಡೆಯಿತು. ಈ ವೇಳೆ ಆರೋಪಿ ಪರ ವಕೀಲ ಬಸವರಾಜು, ಡಿಎನ್‌ಎ ಟೆಸ್ಟ್‌ಗೆ ಮುನಿರತ್ನ ರಕ್ತ ಮಾದರಿ ತೆಗೆದುಕೊಳ್ಳಲು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ನ್ಯಾಯಾಧೀಶರು, ಎಸ್‌ಐಟಿಗೆ ಸ್ಟೇಷನ್ ಪವರ್ ಇಲ್ಲವೇ, ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಎಸ್‌ಪಿಪಿಗೆ ಪ್ರಶ್ನಿಸಿದರು. ಆಗ ಎಸ್‌ಪಿಪಿ ಪ್ರದೀಪ್, ಮಂಗಳವಾರ ಸ್ಪಷ್ಟೀಕರಣ ನೀಡುವುದಾಗಿ ಕಾಲಾವಕಾಶ ಕೋರಿದರು. ಅದಕ್ಕೆ ಸಮ್ಮತಿಸಿದ ಕೋರ್ಟ್ ಮಂಗಳವಾರಕ್ಕೆ ವಿಚಾರಣೆ ಮುಂದೂಡಿತು.
ಮತ್ತೂಂದೆಡೆ ಅತ್ಯಾಚಾರ ಸಂತ್ರಸ್ತೆ ದೂರಿನಲ್ಲಿ ಮುನಿರತ್ನ ಎಚ್‌ಐವಿ ಟ್ರ್ಯಾಪ್ ಬಗ್ಗೆ ಪ್ರಸ್ತಾವಿಸಿದ್ದಾರೆ. ಈ ಸಂಬಂಧ ಎಸ್‌ಐಟಿ ಅಧಿಕಾರಿಗಳು ಮುನಿರತ್ನ ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದ ಎಚ್‌ಐವಿ ಸೋಂಕಿತೆಯನ್ನು ಪತ್ತೆ ಹಚ್ಚಿದ್ದಾರೆ. ಈಕೆಯನ್ನು ಶೀಘ್ರದಲ್ಲೇ ವೈದ್ಯಕೀಯ ಪರೀಕ್ಷೆ ಒಳಡಿಸಿ, ಬಳಿಕ ಹೇಳಿಕೆ ದಾಖಲಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಆರೋಪಿ ಮುನಿರತ್ನನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿ, ಆರೋಪಿಯನ್ನು ಮತ್ತೆ ಕಸ್ಟಡಿಗೆ ಕೇಳಲಿದ್ದಾರೆ.