Advertisement

ಪ್ರವಾಹ ಪರಿಸ್ಥಿತಿಗೆ ಕಣ್ಣೀರಿಟ್ಟ ಶಾಸಕ

05:09 PM Aug 11, 2019 | Suhan S |

ಗದಗ: ಬೆಣ್ಣಿಹಳ್ಳ ಹಾಗೂ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹ ಪೀಡಿತರ ದಯನೀಯ ಸ್ಥಿತಿಗೆ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಕಣ್ಣೀರಿಟ್ಟರು.

Advertisement

ಗದಗ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ, ಜನರ ಸಮಸ್ಯೆ ಹಾಗೂ ದುಃಖವನ್ನು ಆಲಿಸಿದರು. ಬಳಿಕ ನೆರೆ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡುವಾಗ ಪಾಟೀಲ ಗದ್ಗದಿತರಾದರು. ಮತ್ಯಾವತ್ತೂ ಜಿಲ್ಲೆಗೆ ಈ ಪರಿಸ್ಥಿತಿ ಬಾರದಿರಲಿ ಎನ್ನುತ್ತಲೇ, ಕೆಲಕಾಲ ಪುಟ್ಟಮಗುವಿನಂತೆ ಗಳಗಳನೇ ಅತ್ತರು.

ಬಳಿಕ ಮತ್ತೆ ಮಾತು ಆರಂಭಿಸಿದ ಅವರು, ಜಿಲ್ಲೆಯ ಪ್ರವಾಹಕ್ಕೊಳಗಾಗಿರುವ ಪ್ರದೇಶಗಳಿಗೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಮನೆ ಕಲ್ಪಿಸುವುದರೊಂದಿಗೆ ಬೆಳೆ ಹಾನಿಗೆ ಪರಿಹಾರ ನೀಡಿ, ದಿನಬಳಕೆ ವಸ್ತುಗಳನ್ನೂ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ನೆರೆ ಸಂತ್ರಸ್ತರ ರಕ್ಷಣೆಗೆ ಜಿಲ್ಲಾಡಳಿತ ಸಕಲ ಕ್ರಮ ಜರುಗಿಸಿದೆ. ನೆರೆ ಪೀಡಿತ ಪ್ರದೇಶಗಳ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ವಿರಮಿಸುವುದಿಲ್ಲ ಎಂದು ಧೈರ್ಯ ತುಂಬಿದರು.

ಮಾಜಿ ಸಚಿವ ಎಸ್‌.ಎಸ್‌. ಪಾಟೀಲ, ಅನಿಲ್ ಮೆಣಸಿನಕಾಯಿ, ಮೋಹನ ಮಾಳಶೆಟ್ಟಿ, ಶ್ರೀಪತಿ ಉಡುಪಿ, ಎಂ.ಎಂ. ಹಿರೇಮಠ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next