Advertisement

ಕೆದಿಲ: ಶಾಸಕರಿಂದ ಸಂತ್ರಸ್ತರ ಭೇಟಿ

11:02 PM Aug 19, 2019 | mahesh |

ಕೆದಿಲ: ಕೆದಿಲ ಗ್ರಾಮದಲ್ಲಿ ಭೀಕರ ಮಳೆಯಿಂದ ಹಾನಿ ಅನುಭವಿಸಿದ ಪ್ರದೇಶಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.

Advertisement

ಸಂಕಷ್ಟಕ್ಕೆ ಒಳಗಾದವರಿಗೆ ಸಾಂತ್ವನ ಹೇಳಿದ ಶಾಸಕರು, ಸರಕಾರ ಸದಾ ನಿಮ್ಮೊಂದಿಗೆ ಇದೆ. ಧೃತಿಗೆಡುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ಘೋಷಿಸಿದಂತೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಸಂತ್ರಸ್ತರಿಗೆ ತುರ್ತು ಪರಿಹಾರ ಒದಗಿಸಲು ಅನುದಾನ ಬಿಡುಗಡೆಯಾಗಿದ್ದು, ಗ್ರಾ.ಪಂ.ನಲ್ಲಿ ಅದನ್ನು ಹಸ್ತಾಂತರಿಸುವುದಾಗಿ ಹೇಳಿದರು.

ಗ್ರಾ.ಪಂ. ಸದಸ್ಯರಾದ ಒ.ಕೆ. ಶ್ಯಾಮಪ್ರಸಾದ್‌ ಭಟ್, ಕುಶಾಲಪ್ಪ ಕುಲಾಲ್ ಕಜೆ, ಉಮರಬ್ಬ ಗಡಿಯಾರ, ಉಮೇಶ್‌ ಪೂಜಾರಿ ಮುರುವ, ರಾಘವೇಂದ್ರ ಭಟ್, ಚೆನ್ನಪ್ಪ ಗೌಡ ಕುದುಮನ್‌, ದಿನೇಶ್‌ ಮುರುವ, ಪ್ರಸಾದ್‌, ವಿಜಿತ್‌, ಪ್ರಸಾದ್‌, ಪಂಚಾಯತ್‌ ಸಿಬಂದಿ ದಯಾನಂದ ಬಾಯಬ್ಬೆ, ರುಕ್ಮಯ್ಯ ಉಪಸ್ಥಿತರಿದ್ದರು.

ಉದ್ಯೋಗ ಸೃಷ್ಟಿ ಭರವಸೆ
ಗ್ರಾಮದಲ್ಲಿ ಸರಕಾರಿ ಸ್ವಾಮ್ಯದ ಉದ್ದಿಮೆಯೊಂದನ್ನು ಸ್ಥಾಪಿಸುವ ಆಕಾಂಕ್ಷೆ ಹೊಂದಿದ್ದು, ಅದಕ್ಕಾಗಿ ಜಾಗವನ್ನೂ ಗುರುತಿಸಲಾಗಿದೆ. ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಬಹುದೊಡ್ಡ ಕೊಡುಗೆಯನ್ನು ನಿರೀಕ್ಷಿಸಬಹುದು. ರೈತರ ಖುಷ್ಕಿ ಹಕ್ಕಿನ ಕುರಿತು ತಾವು ಶಾಸಕರಾಗುವುದಕ್ಕಿಂತಲೂ ಬಹಳ ಮೊದಲಿನಿಂದಲೇ ಹೋರಾಟ ನಡೆಸುತ್ತ ಬಂದಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿಯೂ ತಮ್ಮಲ್ಲಿದೆ. ಜಿಲ್ಲೆಯ ರೈತರಿಗೆ ನ್ಯಾಯ ಒದಗಿಸಲು ಸದಾ ಸಿದ್ಧ ಎಂದು ಮಠಂದೂರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next