Advertisement

ಲಿಂ.ಎಸ್.ಎಂ.ಸಜ್ಜನ ಗುರುಗಳು ವಿದ್ಯಾರ್ಥಿ ಪಾಲಿನ ಆದರ್ಶ ಶಿಕ್ಷಕರು : ಶಾಸಕ ಚರಂತಿಮಠ

07:48 PM Apr 24, 2022 | Team Udayavani |

ಹುನಗುಂದ: ವೃತ್ತಿ ಧರ್ಮ ಪವಿತ್ರವೆಂದು ಅರಿತುಕೊಂಡ ಲಿಂ,ಎಸ್.ಎಂ.ಸಜ್ಜನ ಅವರು ಶಿಕ್ಷಕ ವೃತ್ತಿಯುದ್ದಕ್ಕೂ ಬಡ ವಿದ್ಯಾರ್ಥಿಗಳ ಪಾಲಿಗೆ ಆದರ್ಶ ಶಿಕ್ಷಕರಾಗಿದ್ದರು ಎಂದು ಬಾಗಲಕೋಟ ಕ್ಷೇತ್ರದ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

Advertisement

ಪಟ್ಟಣದ ವಿ.ಮ.ಉಚಿತ ಪ್ರಸಾದ ನಿಲಯದ ಸಭಾ ಭವನದಲ್ಲಿ ಹಮ್ಮಿಕೊಂಡ ಲಿಂ,ಶರಣ ಎಸ್.ಎಂ.ಸಜ್ಜನ ಗುರುಗಳ ಪುಣ್ಯ ಸ್ಮರಣೆ ಮತ್ತು ಎಸ್.ಎಂ.ಸಜ್ಜನ ಅವರ ಕುರಿತು ಡಾ.ಎನ್.ಪಿ.ನಾಡಗೌಡ್ರ ಬರೆದ ತುಂಬಿದ ಕೊಡ ಮತ್ತು ಸಾವಿರ ಸಜ್ಜನರು ಎರಡು ಗ್ರಂಥಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.

ಇದ್ದುದ್ದರಲ್ಲಿ ಸಂತೃಪ್ತಿಪಟ್ಟು ಕಾರ್ಯನಿರ್ವಹಿಸುವ ಬಹುದೊಡ್ಡ ಗುಣ ಸಜ್ಜನವರಲ್ಲಿತ್ತು. 35 ವರ್ಷಗಳ ಸೇವಾ ಅವಧಿಯಲ್ಲಿ ಶಿಕ್ಷಕ ವೃತ್ತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ನಮ್ಮ ಸಂಘದ ಉತ್ತಮ ಶಿಕ್ಷಕರಾಗಿದ್ದರು. ಅನೇಕ ಬಡ ವಿದ್ಯಾರ್ಥಿಗಳ ಶುಲ್ಕವನ್ನು ಕಟ್ಟಿ ಮನೆಯಲ್ಲಿಟ್ಟುಕೊಂಡು ವಿದ್ಯಾದಾನ ನೀಡಿ ಒಂದು ನೆಲೆಯನ್ನು ಕಂಡುಕೊಳ್ಳುವಂತೆ ಮಾಡಿದವರು ಇಂತಹ ಅದ್ಭತ ವ್ಯಕ್ತಿತ್ವದ ಶಿಕ್ಷಕರು ಸಿಗುವುದು ವಿರಳ.ಅಂತವರ ಆದರ್ಶ ಮಾರ್ಗದಲ್ಲಿ ಸಾಗೋಣ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next