Advertisement

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ತಾರತಮ್ಯ: ಶಾಸಕ ಕೋಟ್ಯಾನ್ ಕಿಡಿ

10:10 PM Nov 01, 2018 | Team Udayavani |

ಮೂಲ್ಕಿ: ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುವಲ್ಲಿ ಜಿಲ್ಲೆಯ ಶಾಸಕರ ಶಿಫಾರಸುಗಳನ್ನು ಕಡೆಗಣಿಸಲಾಗಿದೆ ಎಂದು ಮೂಡಬಿದಿರೆ ಕ್ಷೇತ್ರದ ಶಾಸಕ ಬಿ.ಜೆ.ಪಿ.ಯ ಉಮಾನಾಥ ಕೋಟ್ಯಾನ್ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

Advertisement

ಇಂದು ಮೂಲ್ಕಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಯಾದ ತಾನು ಶಾಸಕನ ನೆಲೆಯಲ್ಲಿ 9 ಮಂದಿಯ ಹೆಸರನ್ನು ಮೂಲ್ಕಿ ಮೂಡಬಿದಿರೆ ಕ್ಷೇತ್ರದಿಂದ ಶಿಫಾರಸ್ಸು ಮಾಡಿದ್ದೇನೆ ಆದರೆ, ನನ್ನ ಮನವಿಯನ್ನು ಪುರಸ್ಕರಿಸದೇ, ಯಾರು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೋ ಹಾಗೂ ಪಕ್ಷದ ಕಾರ್ಯಕರ್ತರಾಗಿದ್ದವರಿಗೆ ಪ್ರಶಸ್ತಿಯನ್ನು ಹಂಚಲಾಗಿದೆ ಅದಕ್ಕೆ ಸೂಕ್ತವಾದ ಮಾನದಂಡವನ್ನು ಅಳವಡಿಸಿಲ್ಲ ಮಾತ್ರವಲ್ಲದೇ ಶಾಸಕರ ಶಿಫಾರಸ್ಸನ್ನು ಮೂಲೆ ಗುಂಪು ಮಾಡಲಾಗಿದೆ. ಈ ಮೂಲಕ ಯಾರು ಅರ್ಹರೋ ಅವರು ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.

‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಾಗಿ ಉಸ್ತುವಾರಿ ಸಚಿವರಲ್ಲಿ, ಜಿಲ್ಲಾಧಿಕಾರಿಗಳ ಸಹಿತ, ಕಸಾಪದ ಜಿಲ್ಲಾಧ್ಯಕ್ಷರಲ್ಲಿ ತನ್ನ ಪಟ್ಟಿಯನ್ನು ನಾನು ನೀಡಿದ್ದೇ ಕನಿಷ್ಠ ಒಂದಾದರೂ ಹೆಸರನ್ನು ಲೆಕ್ಕಿಸದೇ ತಮಗೆ ಇಚ್ಚಿಸಿದಂತೆ ಹಂಚಿಕೆಯಾಗಿರುವುದು ಪ್ರಶಸ್ತಿಗೆ ಅನ್ಯಾಯ ಮಾಡಿದಂತೆ ಆಗಿದೆ ಇದನ್ನು ಒಂದು ಪಕ್ಷದ ಅಡಿಯಾಳಾಗಿರಲು ಪ್ರೇರಣೆ ನೀಡಿದಂತಾಗಿದೆ…’ ಎಂದು ಕೋಟ್ಯಾನ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರೀತಿಯಾಗಿ ತಾನು ಕಳಿಸಿದ ಪಟ್ಟಿಯಲ್ಲಿದ್ದ ಒಬ್ಬರನ್ನೂ ಸಹ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲಿಲ್ಲ ಎಂದರಲ್ಲದೆ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಯು.ಟಿ.ಖಾದರ್ ಅವರು ತಮ್ಮ ಮರ್ಜಿಗೆ ಅನುಗುಣವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಕಾಂಗ್ರೆಸ್ ಬೆಂಬಲಿಗರಿಗೆ ಪ್ರಶಸ್ತಿ ಹಂಚಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಶಾಸಕ ಕೋಟ್ಯಾನ್ ಅವರು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next