Advertisement

ಮೂರು ಸರಕಾರಿ ಶಾಲೆ ದತ್ತು: ಶಾಸಕ ಉದಾಸಿ

05:25 PM Feb 10, 2021 | Team Udayavani |

ಹಾನಗಲ್ಲ: ತಾಲೂಕಿನ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ  ಯೋಜನೆಯಡಿ ತಾಲೂಕಿನ 3 ಶಾಲೆಗಳನ್ನು ದತ್ತು ತೆಗೆದುಕೊಳ್ಳಲಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ತಿಳಿಸಿದ್ದಾರೆ.

Advertisement

ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲೂಕಿನ ಹೇರೂರ ಗ್ರಾಮದ ಸರಕಾರಿ ಹಿರಿಯಪ್ರಾಥಮಿಕ ಶಾಲೆ, ಮೂಡೂರು ಗ್ರಾಮದಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಡೂರು ಗ್ರಾಮದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಈ ಮೂರು ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಸದರಿ ಶಾಲೆಗಳಲ್ಲಿ ಶೈಕ್ಷಣಿಕ ಅಭಿವೃದ್ಧಿ ಮತ್ತು ಅವಶ್ಯಕ ಶೈಕ್ಷಣಿಕ ಸೌಲಭ್ಯಗಳ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿ ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಮಠಮಾನ್ಯಗಳು, ಶಿಕ್ಷಣ ಸಂಸ್ಥೆಗಳು ಅನ್ನ, ಅಕ್ಷರ ದಾಸೋಹದಲ್ಲಿ ತೊಡಗಿಕೊಂಡು ಸಮಾಜದ ಎಲ್ಲ ಸಮುದಾಯದವರಿಗೆ ಶಿಕ್ಷಣನೀಡಿದ್ದರಿಂದ ಇಂದು ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗಿದೆ. ಈಗ ಜನಪ್ರತಿನಿಧಿ ಗಳು ತಮ್ಮ ಭಾಗದ ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಈ ಕಾರ್ಯಕ್ರಮದಿಂದ ಶಿಕ್ಷಣ ಪ್ರೇಮಿಗಳು ತಮ್ಮೂರಿನ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಪ್ರೇರಣೆಯಾಗಲಿದೆ ಎಂದಿದ್ದಾರೆ.

ಶೇ. 85ಕ್ಕಿಂತ ಅಧಿಕ ಮಕ್ಕಳು ಪಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕೆ ಸರಕಾರಿ ಶಾಲೆಗಳನ್ನೇ ಅವಲಂಬಿಸಿರುವುದರಿಂದ ಇಂತಹ ಶಾಲೆಗಳ ಅಭಿವೃದ್ಧಿಗೆ ಸಮಾಜಗಳು ಸಕ್ರಿಯವಾಗಿ ಭಾಗವಹಿಸುವ ಅಗತ್ಯವಿದೆ. ತಾಲೂಕಿನಲ್ಲಿ ಸರಕಾರಿ 29, ಖಾಸಗಿ 27 ಸೇರಿದಂತೆ 56 ಪ್ರೌಢಶಾಲೆಗಳು, 223 ಸರಕಾರಿ ಹಾಗೂ 48 ಖಾಸಗಿ ಸೇರಿದಂತೆ 271 ಪ್ರಾಥಮಿಕ ಶಾಲೆಗಳು, ಹಾಗೂ 6 ವಸತಿ ಶಾಲೆಗಳಿವೆ. ಒಟ್ಟು 333 ಶಾಲೆಗಳಲ್ಲಿ 45239 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಕೊರತೆಯಾಗದಂತೆ ವಿದ್ಯಾಗಮ-2, ಮುಖಾಮುಖೀ, ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುತ್ತಿದೆ. ತಾಲೂಕಿನ ಬಹುತೇಕ ಶಾಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಸರಕಾರದ ಸಮೀಕ್ಷಾ ವರದಿ ಪ್ರಕಾರ ಕೆಲವು ಶಾಲೆಗಳಲ್ಲಿ ಕುಡಿಯುವ ನೀರಿನ ಕೊರತೆಯಿಂದ ಮಕ್ಕಳು ಅನಾರೋಗ್ಯಕ್ಕೀಡಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಸರಕಾರದ ಪ್ರಮುಖ ಆದ್ಯತೆಯಾಗಿದೆ.

ಎಲ್ಲ ಸರಕಾರಿ ಶಾಲೆ ಹಾಗೂ ಅಂಗನವಾಡಿ ಕೆಂದ್ರಗಳಲ್ಲಿ ಕೇಂದ್ರ ಸರಕಾರದ ಜಲ ಶಕ್ತಿ ಮಂತ್ರಾಲಯದಿಂದಕುಡಿಯುವ ನೀರನ್ನು ಒದಗಿಸಲು ರಾಜ್ಯಸರಕಾರ ಮುಂದಾಗಿದೆ. 100 ದಿನಗಳಲ್ಲಿ ಈ ಕಾರ್ಯ ಸಂಪೂರ್ಣವಾಗಬೇಕಾಗಿದೆ. ತಾಲೂಕಿನ 240 ಅಂಗನವಾಡಿ, 255ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 61.55 ಲಕ್ಷ ರೂ ವೆಚ್ಚದಲ್ಲಿ ಕಾರ್ಯಾತ್ಮಕ ನಳದ ಜೋಡಣೆ ಜೊತೆಗೆ ಮೀಟರ್‌ ಅಳವಡಿಕೆ ಕಾರ್ಯ ಭಾಗಶಃ ಮುಕ್ತಾಯವಾಗಿದೆ. ತಾಲೂಕಿನ 88 ಪ್ರಾಥಮಿಕ ಮತ್ತುಪ್ರೌಢಶಾಲೆಗಳಲ್ಲಿ ಶೌಚಾಲಯಗಳ ಅಗತ್ಯತೆಇದ್ದು, ಈಗಾಗಲೇ ನಬಾರ್ಡ್‌ ಅಡಿ ಸದರಶಾಲೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ 57ಶಾಲೆಗಳಲ್ಲಿಯ 112 ಕೊಠಡಿಗಳಿಗೆ 1.99 ಕೋಟಿ ರೂ. ಹಣ ಶಾಲಾ ದುರಸ್ತಿಗೆಬಿಡುಗಡೆಯಾಗಿದೆ. ಇದರೊಂದಿಗೆ ವಿವಿಧ ಯೋಜನೆಯಅನುದಾನದಲ್ಲಿ ತಾಲೂಕಿನಲ್ಲಿ ಮಂಜೂರಾದ66 ಕೊಠಡಿಗಳು ನಿರ್ಮಾಣ ಹಂತದಲ್ಲಿವೆ.ಪ್ರಸಕ್ತ ಸಾಲಿಗೆ ಆಲದಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಾಂಶಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಬೆಳಗಾಲಪೇಟೆಉರ್ದು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹೆಚ್ಚುವರಿ ಕೊಠಡಿ ಹಾಗೂ ತಾಲೂಕಿನ 10 ಶಾಲೆಗಳಿಗೆ ಅಡುಗೆ ಕೋಣೆ ಮಂಜೂರಾಗಿದ್ದು, ಶೀಘ್ರದಲ್ಲಿ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಸಿ.ಎಂ. ಉದಾಸಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next